ಆರೋಗ್ಯ ಕ್ಷೇತ್ರದಲ್ಲಿನ ಹೆಚ್ಚಿನ ಸಂಶೋಧನೆಗೆ ಹೊಸಕೇಂದ್ರ ಸ್ಥಾಪನೆ:
ಆರೋಗ್ಯ ರಕ್ಷಣೆಗಾಗಿ ವೈದ್ಯಕೀಯ ತಂತ್ರಜ್ಞಾನದ ಹಲವು ವಿಶೇಷತೆಗಳಿಗೆ ಚಾಲನೆ..
ಪ್ರಭಾಕರ ಕೋರೆ..
ಬೆಳಗಾವಿ: ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (ಕಾಹೆರ) ವತಿಯಿಂದ ಆರೋಗ್ಯ ಸೇವೆ, ವೈದ್ಯಕೀಯ ತಂತ್ರಜ್ಞಾನ ಹಾಗೂ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ದಿಗೊಳಿಸಲು ಇನ್ಕ್ಯುಬೇಶನ್ ಮತ್ತು ಇನ್ನೋವೇಶನ್ ಸೆಂಟರ್ ಆರಂಭಿಸಲಾಗುತ್ತಿದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಕುಲಾಧಿಪತಿಗಳಾದ ಡಾ. ಪ್ರಭಾಕರ ಕೋರೆ ತಿಳಿಸಿದರು.
ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸ್ಟಾರ್ಟ್-ಅಪ್ ಗಳಿಗೆ ಬೆಂಬಲ ಮತ್ತು ಪೋಷಣೆಯ ವಾತಾವರಣವನ್ನು ಸೃಷ್ಟಿಸಲು ಈ ಸೆಂಟರ್ ಸಹಕಾರಿ ಆಗಲಿದ್ದು, ಜನೆವರಿ ಒಂದರಿಂದ ಆರಂಭಗೊಳ್ಳಲಿದೆ ಎಂದರು.

ನಾವಿನ್ಯ ಉತ್ಪನ್ನ ಹಾಗೂ ಸೇವೆಗಳನ್ನು ಅಭಿವೃದ್ದಿಪಡಿಸಲು ಮತ್ತು ಪೂರೈಸಲು ಇಚ್ಚಿಸುವವರಿಗೆ ಸಹಾಯ ಹಸ್ತ ಚಾಚಲಾಗಿದೆ. ಪೇಟೆಂಟ್ ಗಳ ವಾಣಿಜ್ಯೀಕರಣ ಮತ್ತು ವಿಶ್ವವಿದ್ಯಾಲಯದಲ್ಲಿ ಅದರ ಸಂಶೋಧನಾ ವಿಭಾಗ, ಆಸ್ಪತ್ರೆಯ ಸೌಲಭ್ಯಗಳ ಅತ್ಯುತ್ತಮ ಬಳಕೆ ಸೇರಿದಂತೆ ಸ್ಟಾರ್ಟ ಅಪ್ ಗಳಿಗೆ ಬಹುಉದ್ದೇಶಿತ ಕಾರ್ಯಗಳಿಗೆ ಸಹಕಾರ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
ದ್ವೀತೀಯ ಹಂತದ ನಗರಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಬೆಳಗಾವಿ ಕೇಂದ್ರಿತ ಸ್ಟಾರ್ಟ್-ಅಪಗಳಿಗೆ ಆರ್ಥಿಕತೆ ಸಹಾಯವನ್ನು ಕಲ್ಪಿಸಲಾಗುವುದು. ಈಗಾಗಲೇ ಮೂರು ಕೋಟಿ ರೂ.ಗಳ ಅನುದಾನ ತೆಗೆದಿಡಲಾಗಿದ್ದು, ಸಿಬ್ಬಂದಿ ನೇಮಕ, ಸಂಪನ್ಮೂಲಗಳ ಪೂರೈಕೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಪ್ರಭಾಕರ ಕೋರೆ ಹೇಳಿದರು.
ಉಪಕುಲಪತಿ ಡಾ. ನಿತಿನ್ ಗಂಗಾನೆ ಮಾತನಾಡಿ, ನಾವೀನ್ಯತೆ ಮತ್ತು ಹೂಡಿಕೆ ಆಕರ್ಷಿಸಲು ಸಹಕಾರ ನೀಡಲಿರುವ ಕೆಎಲ್‌ಇ ಇನ್ಕ್ಯುಬೇಶನ್ ಮತ್ತು ಇನ್ನೋವೇಶನ್ ಕೇಂದ್ರವು ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ತಂತ್ರಜ್ಞಾನ ವಲಯದಲ್ಲಿನ ಸ್ಟಾರ್ಟಅಪಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಮಾತ್ರ ಮೀಸಲಾಗಿದೆ ಎಂದರು.

ಮೆಡಟೆಕ್ ಕ್ಷೇತ್ರದಲ್ಲಿ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವ ಸಂಪನ್ಮೂಲಗಳು ಕ್ರೋಡಿಕರಣ ಮತ್ತು ನಾವಿನ್ಯತೆಗಳಿಗೆ ವೇಗ ನೀಡುವುದರ ಜೊತೆಗೆ ಮೆಡ್ ಟೆಕ್ ವಲಯದಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಈ ಕೇಂದ್ರ ಸಹಾಯ ಮಾಡಲಿದೆ ಎಂದು ಅವರು ವಿವರಿಸಿದರು.
ರಜಿಸ್ಟಾರ್ ಡಾ.ಎಂ.ಎಸ್.ಗಣಾಚಾರಿ, ಡಾ.ಎಸ್.ಎಸ್.ಗೌಡರ, ಡಾ.ವಿ.ಡಿ.ಪಾಟೀಲ, ಡಾ.ಎನ್.ಎಸ್.ಮಹಾಂತಶೆಟ್ಟಿ, ಯೋಗೇಶ ಕುಲಕರ್ಣಿ, ಅಪೂರ್ವ ಪಟ್ಟಣಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ ಪ್ರಕಾಶ ಕುರಗುಂದ..