ಕೆನರಾ ಉತ್ಸವದ ಅಂಗವಾಗಿ ಮಹಿಳಾ ಉದ್ಯೋಗದ ವ್ಯಾಪಾರ ಮೇಳ…

ಕೆನರಾ ಉತ್ಸವದ ಅಂಗವಾಗಿ ಮಹಿಳಾ ಉದ್ಯೋಗದ ವ್ಯಾಪಾರ ಮೇಳ..

ಮಹಿಳಾ ಆರ್ಥಿಕ ಸಬಲೀಕರಣದಲ್ಲಿ ಕೆನರಾ ಬ್ಯಾಂಕ ಯಾವತ್ತೂ ಸಿದ್ಧವಿದೆ..

ಪ್ರಾದೇಶಿಕ ಅಧಿಕಾರಿ ದರ್ಶನಾ ಅಭಿಮತ..

ಬೆಳಗಾವಿ : ಸೋಮವಾರ ನಗರದ ಸಾಹಿತ್ಯ ಭವನದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಮಹಿಳಾ ವ್ಯಾಪಾರಿ ಮಳಿಗೆಗಳನ್ನು ತೆರೆದಿದ್ದು, ಕೆನರಾ ಬ್ಯಾಂಕಿನಿಂದ ಪ್ರತಿ ವರ್ಷ ನವೆಂಬರ್ 19ಕ್ಕೆ ನಡೆಯುವ ಕೆನರಾ ಉತ್ಸವದ ಅಂಗವಾಗಿ, ಈ ವಿಶೇಷ ಮಹಿಳಾ ಗೃಹೋಪಯೋಗಿ ವಸ್ತುಗಳ ವ್ಯಾಪಾರದ ಮೇಳವನ್ನು ಆಯೋಜನೆ ಮಾಡಲಾಗಿತ್ತು..

ಈ ವೇಳೆ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಕೆನರಾ ಬ್ಯಾಂಕಿನ ಅಧಿಕಾರಿಗಳು, ಕೆನರಾ ಬ್ಯಾಂಕ ಪ್ರತಿ ವರ್ಷ ಮಹಿಳೆಯರಿಗಾಗಿ, ಅವರ ಆರ್ಥಿಕ ಸಬಲೀಕರಣಕ್ಕೆ ಹತ್ತು ಹಲವು ಕಾರ್ಯಕ್ರಮ ಹಾಕಿಕೊಂಡಿದ್ದು, ಈಗಾಗಲೇ ನೂರಾರು ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿದೆ, ಕಡಿಮೆ ಬಡ್ಡಿ ದರದಲ್ಲಿ, ಸರ್ಕಾರದ ಸಹಾಯಧನ ಲಭಿಸುವಂತೆ ಮಾಡಿ, ಮಹಿಳಾ ಸಂಘ ಹಾಗೂ ಮಹಿಳೆಯರು ಆರ್ಥಿಕವಾಗಿ ಮುಂದುವರೆಯಲು ಸಹಕಾರಿಯಾಗಿದೆ ಎಂದರು..

ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾದ ಕೆನರಾ ಬ್ಯಾಂಕಿನ ಈ ಕಾರ್ಯಕ್ರಮದಲ್ಲಿ 33 ವ್ಯಾಪಾರ ಸ್ಟಾಲಗಳು ತೆರೆದಿದ್ದು, ಸುಮಾರು 60 ರಿಂದ 70 ಮಹಿಳಾ ವ್ಯಾಪಾರಿಗಳು ಭಾಗಿಯಾಗಿರುವರು ಎಂಬ ಮಾಹಿತಿ ನೀಡಿದ ಅಧಿಕಾರಿಗಳು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ವ್ಯಾಪಾರ ಮೇಳವನ್ನು ಆಯೋಜನೆ ಮಾಡುತ್ತೇವೆ, ಅದೇ ರೀತಿ ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾಲವನ್ನು ನೀಡಿ ಅವರ ಆರ್ಥಿಕ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ ಎಂದರು..

ಕೆನರಾ ವಿಕಾಸ ಮಹಿಳಾ, ಸ್ವ ಉದ್ಯೋಗಕ್ಕಾಗಿ ಹಾಗೂ ಮಹಿಳಾ ಸಂಘಗಳಿಗೆ ಸಾಲ ಇಂತಹ ಸಾಲ ಸೌಲಭ್ಯ ನೀಡುತ್ತಿದ್ದು, ಸ್ಟಾರ್ಟ್ ಅಪ್ ಅಂತಾ ಸ್ಕೀಮಿನಲ್ಲಿ ಸಾಲ ಸೌಲಭ್ಯ ನೀಡುತ್ತೇವೆ ಎಂದರು..

ಈ ವೇಳೆ ಕೆನರಾ ಬ್ಯಾಂಕಿನ ಪ್ರಾದೇಶಿಕ ಅಧಿಕಾರಿಗಳು, ವಿಭಾಗೀಯ ಅಧಿಕಾರಿಗಳು, ವಿವಿಧ ಶಾಖೆಗಳ ವ್ಯವಸ್ಥಾಪಕರು, ಬ್ಯಾಂಕ ಸಿಬ್ಬಂದಿ, ನೂರಾರು ಮಹಿಳಾ ವ್ಯಾಪಾರಸ್ಥರು ಕೂಡಾ ಹಾಜರಿದ್ದರು..

ವರದಿ ಪ್ರಕಾಶ ಕುರಗುಂದ..