ಅಭಿಷೇಕ್ ಅಂಬರೀಷ್ ನಟನೆಯ ಬಹು ನಿರೀಕ್ಷಿತ “ಬ್ಯಾಡ ಮ್ಯಾನರ್ಸ್” ಚಿತ್ರ ಇದೇ ಶುಕ್ರವಾರ ತೆರೆಗೆ…

ಅಭಿಷೇಕ್ ಅಂಬರೀಷ್ ನಟನೆಯ ಬಹು ನಿರೀಕ್ಷಿತ “ಬ್ಯಾಡ ಮ್ಯಾನರ್ಸ್” ಚಿತ್ರ ಇದೇ ಶುಕ್ರವಾರ ತೆರೆಗೆ..

“ಬ್ಯಾಡ ಮ್ಯಾನರ್ಸ್” ಚಿತ್ರ, ಹೊಸ ತನದ ಆಕ್ಷನ್ ಸಿನೆಮಾ..

ಎಲ್ಲರಿಗೂ ಇಷ್ಟ ಆಗುವ ಈ ಚಿತ್ರವನ್ನು ನೋಡಿ ನಮ್ಮ ತಂಡಕ್ಕೆ ಪ್ರೋತ್ಸಾಹಿಸಿ..

ಅಭಿಷೇಕ ಅಂಬರೀಷ್..

ಬೆಳಗಾವಿ : ಮಂಗಳವಾರ ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದುನಿಯಾ ಸೂರಿ ಅವರು ನಿರ್ದೇಶನ ಮಾಡಿದ “ಬ್ಯಾಡ ಮ್ಯಾನರ್ಸ್” ಎಂಬ ಕನ್ನಡ ಚಿತ್ರದ ಪ್ರಚಾರ ಕಾರ್ಯದಲ್ಲಿ, ಚಿತ್ರದ ನಾಯಕರಾದ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್, ಚಿತ್ರ ನಿರ್ಮಾಪಕರು, ಹಾಗೂ ಬೆಳಗಾವಿಯ ಕಲಾವಿದರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ..

ಚಿತ್ರದ ಬಗ್ಗೆ ಮಾತು ಆರಂಭಿಸಿದ ನಾಟಕ ಅಭಿಷೇಕ್ ಅಂಬರೀಷ್ ಅವರು, ಬ್ಯಾಡ ಮ್ಯಾನರ್ಸ್ ಚಿತ್ರ ಸರ್ವೇಸಾಮಾನ್ಯ ಚಿತ್ರವಲ್ಲ, ಇದೊಂದು ಬೇರೆ ಹಂತದ ಹೊಸ ಬಗೆಯ ಸಾಹಸ, ದೃಶ್ಯ, ಸಂಭಾಷಣೆ ಇರುವಂತಹ ಚಿತ್ರ, ಚಿತ್ರ ತುಂಬಾ ಸೊಗಸಾಗಿ ಮೂಡಿಬಂದಿದ್ದು, ಎಲ್ಲರಿಗೂ ಇಷ್ಟವಾಗುತ್ತದೆ, ಕಾರಣ ತಾವು ಚಿತ್ರ ನೋಡುವ ಮೂಲಕ ಇಡೀ ತಂಡವನ್ನು ಪ್ರೋತ್ಸಾಹಿಸಬೇಕು ಎಂದರು..

ಬೆಳಗಾವಿ ಅಂದರೆ ನಮ್ಮವರು, ದೂರ ಇರುವದರಿಂದ ಪದೇ ಪದೇ ಬರಲು ಆಗೋದಿಲ್ಲ, ಆದರೆ ನಾವೆಂದೂ ನಿಮ್ಮವರೇ, ಅದಕ್ಕಾಗಿ ಇಂದು ಇಲ್ಲಿಗೆ ಬಂದು ಚಿತ್ರ ಪ್ರಚಾರ ಮಾಡುತ್ತಿದ್ದೇವೆ, ಇದೊಂದು ಸ್ವಮೇಕ್ ಚಿತ್ರ, ಸೂರಿ ಶೈಲಿಯ ಚಿತ್ರ, ಪ್ರೇಕ್ಷಕರಿಗೆ ನಿರಾಸೆ ಮಾಡುವದಿಲ್ಲ, ನನ್ನ ಹಿಂದಿನ ಅಮರ ಚಿತ್ರಕ್ಕಿಂತ ತುಂಬಾ ವಿಭಿನ್ನವಾದ ಚಿತ್ರ, ವಿಶೇಷವಾಗಿ ಬೆಳಗಾವಿಯ ಕಲಾವಿದರು ಕೂಡಾ ಇದರಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ, ಎಲ್ಲರೂ ಚಿತ್ರ ನೋಡಿ ಸಹಕರಿಸಿ ಎಂದರು..

ಇನ್ನು ಈ ಚಿತ್ರದ ನಿರ್ಮಾಪಕರು ಮಾತನಾಡಿ, ಜಯಣ್ಣ ಕಬೈನ್ಸ್ ಅವರು ಚಿತ್ರ ವಿತರಣೆ ಮಾಡುತ್ತಿದ್ದು, ರಾಜ್ಯಾದ್ಯಂತ ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣುತ್ತಿದೆ ಎಂಬ ಮಾಹಿತಿ ನೀಡಿದರು..

ಬೆಳಗಾವಿಯ ಕಲಾವಿದರು, ಹಾಗೂ ಚಿತ್ರ ಪೋಷಕರು ಆದ ವಿಜಯ್ ಅವರು ಮಾತನಾಡಿ, “ಬ್ಯಾಡ ಮ್ಯಾನರ್ಸ್” ಸೂರಿಯವರ ನಿರ್ದೇಶನದಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ, ಅಭಿಷೇಕ್ ಅವರು ತುಂಬಾ ಏನರ್ಜಿಟಿಕ್ ಆಗಿ ಸಾಹಸ ದೃಶ್ಯ ಮಾಡಿದ್ದು, ಪ್ರತಿಯೊಬ್ಬರಿಗೂ ಚಿತ್ರ ಇಷ್ಟವಾಗುತ್ತದೆ ಎಂದರು,

ಬೆಳಗಾವಿಯ ಜನರು ಹಿಂದಿನಿಂದಲೂ ಕನ್ನಡ ಚಿತ್ರಗಳನ್ನು ನೋಡಿ, ಆಶೀರ್ವದಿಸುತ್ತಾ ಬಂದಿದ್ದಾರೆ, ನಾವು ಕೂಡ ಇದೆ ಜಿಲ್ಲೆಯವರೇ ಆಗಿದ್ದು, ನಮಗೂ ಇಂತಹ ದೊಡ್ಡ ಚಿತ್ರಗಳಲ್ಲಿ ಅವಕಾಶ ನೀಡಿ, ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳಸುವ ಇಂತಹ ತಂಡಕ್ಕೆ, ಹಾಗೂ ನಮ್ಮ ಈ “ಬ್ಯಾಡ ಮ್ಯಾನರ್ಸ್” ಚಿತ್ರಕ್ಕೆ ನಮ್ಮ ಭಾಗದ ಜನರು ಪ್ರೋತ್ಸಾಹಿಸಿ ಆಶೀರ್ವದಿಸಲು ಎಂದರು..

ಈ ಸುದ್ದಿಗೋಷ್ಠಿಯಲ್ಲಿ ನಾಯಕರಾದ ಅಭಿಷೇಕ್ ಅಂಬರೀಷ್, ನಿಯಾಪಕರು, ಸಹಕಲಾವಿದರಾದ ವಿಜಯ, ರಾಜವೀರ ಉಪಸ್ಥಿತರಿದ್ದರು..

ವರದಿ ಪ್ರಕಾಶ ಕುರಗುಂದ..