ಉತ್ತರ ಕರ್ನಾಟಕದ ಯುವ ಪ್ರತಿಭೆಗಳ “ಸ್ಕೂಲ್ ಡೇಸ್” ಕನ್ನಡ ಚಿತ್ರ ಇದೇ ಶುಕ್ರವಾರ ತೆರೆಗೆ..
ಮನರಂಜನೆ ಜೊತೆಗೆ ಉತ್ತಮ ಸಾಮಾಜಿಕ ಸಂದೇಶ ಹೊಂದಿದ ಚಿತ್ರಕ್ಕೆ ಕನ್ನಡಿಗರ ಪ್ರೋತ್ಸಾಹ ಇರಲಿ..
ನಿರ್ಮಾಪಕ ಉಮೇಶ ಹಿರೇಮಠ ಮನವಿ..
ಬೆಳಗಾವಿ : ಬುಧವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ “ಸ್ಕೂಲ್ ಡೇಸ್” ಎಂಬ ಕನ್ನಡ ಚಲನಚಿತ್ರ ತಂಡದವರು ಮಾತನಾಡಿದ್ದು, ಇದೇ ಶುಕ್ರವಾರ ಚಿತ್ರ ಬಿಡುಗಡೆ ಆಗುತ್ತಿದ್ದು, ಚಿತ್ರದ ಹತ್ತು ಹಲವು ವಿಶೇಷತೆಗಳ ಕುರಿತಾಗಿ ಮಾತನಾಡಿದ್ದಾರೆ..
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಸಂಜಯ ಎಚ್ ಅವರು, ಸ್ಕೂಲ್ ಡೇಸ್ ಚಿತ್ರ ಸಂಪೂರ್ಣ ಉತ್ತರ ಕರ್ನಾಟಕ ಭಾಷೆಯ ಸೊಗಡಿನಲ್ಲಿ ಇದ್ದಿದ್ದು, ಬಹುತೇಕ ಸ್ಥಳೀಯ ಕಲಾವಿದರೇ ನಟಿಸಿದ ಈ ಚಿತ್ರದಲ್ಲಿ, ಬದುಕಿನ ನೈತಿಕ ಮೌಲ್ಯಗಳನ್ನು ತಿಳಿಸುವ ಸನ್ನಿವೇಶಗಳಿವೆ ಎಂದಿದ್ದಾರೆ..

ಶಾಲಾ ದಿನದ ತುಂಟಾಟ, ಗೆಳೆಯರ ಒಡನಾಟ, ಪೋಲಿ ಚಟುವಟಿಕೆಗಳು, ಪ್ರೀತಿ, ಶಿಕ್ಷಕರೊಂದಿಗಿನ ಚೇಷ್ಟೆಗಳು, ಇಂತಹ ಸನ್ನಿವೇಷಗಳು ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಮೂಡಿಬಂದಿದ್ದು ನೋಡುವವರಿಗೆ ಉತ್ತಮ ಮನರಂಜನೆ ನೀಡುತ್ತದೆ ಎಂದರು..
ಇನ್ನು ಚಿತ್ರದ ನಿರ್ಮಾಪಕ ಉಮೇಶ ಹಿರೇಮಠ ಅವರು ಮಾತನಾಡಿ, ಈ ಚಿತ್ರ ನೋಡುಗರಿಗೆ ಮತ್ತೆ ತಮ್ಮ ಶಾಲಾ ದಿನಗಳು ಮರಕಳಿಸುವಂತೆ ಮಾಡುತ್ತದೆ, ಸಂಪೂರ್ಣ ಚಿತ್ರ ನಮ್ಮ ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಣ ಆಗಿದ್ದು, ಉತ್ತರ ಕರ್ನಾಟಕದ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ, ಅವರಿಂದ ಉತ್ತಮ ಅಭಿನಯವನ್ನು ಮಾಡಿಸಿದ್ದು, ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂಬ ಮಾತು ಆಡಿದ್ದಾರೆ..

ಮನರಂಜನೆಯ ಎಲ್ಲಾ ಅಂಶಗಳನ್ನು ಒಳಗೊಂಡ, ಉತ್ತಮ ಸಾಮಾಜಿಕ ಸಂದೇಶ ಹೊಂದಿದ ಈ ನಮ್ಮ ನೆಲದ “ಸ್ಕೂಲ್ ಡೇಸ್” ಎಂಬ ಕನ್ನಡ ಚಿತ್ರಕ್ಕೆ ನಮ್ಮ ಕನ್ನಡಿಗರ ಪ್ರೋತ್ಸಾಹ ಆಶೀರ್ವಾದ ಇರಬೇಕು, ಇದೆ ಶುಕ್ರವಾರದಿಂದ ರಾಜ್ಯಾದ್ಯಂತ ಸುಮಾರು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದ್ದು, ಎಲ್ಲರೂ ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಣೆ ಮಾಡಬೇಕು ಎಂದರು..

ಬೆಂಗಳೂರಿನ ಕೆ ಎಂ ಇಂದ್ರ ಅವರ ಸಂಗೀತ ಇರುವ ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರು, ನಿರ್ಮಾಪಕರು, ಕಲಾವಿದರಾದ ಸಂದೀಪ, ಪ್ರಿಯಾ ಸವದಿ, ಅನಿಕೇತಗೌಡ, ಸಂಗಮ ಮಠದ, ದರ್ಶನದ ರಾಜಣ್ಣವರ, ಪ್ರತೀಕ ನಮ್ರತಾ, ಹಾಗೂ ವಿವೇಕ ಮುಂತಾದವರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ..