ಅಯೋಧ್ಯೆಯ ಶ್ರೀರಾಮನಿಗೆ ಕೋಟಿ ಮನೆಗಳಲ್ಲಿ ಪೂಜಿಸಿದ ಮೃತ್ತಿಕೆ ಹಾಗೂ ಪುಣ್ಯಜಲದ ಅರ್ಪಣೆ..

ಅಯೋಧ್ಯೆಯ ಶ್ರೀರಾಮನಿಗೆ ಕೋಟಿ ಮನೆಗಳಲ್ಲಿ ಪೂಜಿಸಿದ ಮೃತ್ತಿಕೆ ಹಾಗೂ ಪುಣ್ಯಜಲದ ಅರ್ಪಣೆ..

ಶ್ರೀ ರಾಮಾಮೃತ ತರಂಗಿಣಿ ಟ್ರಸ್ಟ್‌ ಆಯೋಜಿಸುತ್ತಿರುವ ಭಾರತದ 16 ಪವಿತ್ರ ನದಿಗಳ ಮಹಾಸಂಗಮ ಶ್ರೀ ರಾಮಾಮೃತ ತರಂಗಿಣಿ ಮಹಾಭಿಯಾನ..

ಬೆಳಗಾವಿ : ಬುಧವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮಾಮೃತ ತರಂಗಿಣಿ ಟ್ರಸ್ಟಿನ ಪದಾಧಿಕಾರಿಗಳು 16 ಪವಿತ್ರ ನದಿಗಳ ಪುಣ್ಯ ಜಲದ ಮಹಾಸಂಗಮದ ಮಹಾಭಿಯಾನದ ಕುರಿತಾಗಿ ಮಾತನಾಡಿದ್ದಾರೆ..

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟಿನ ಪದಾಧಿಕಾರಿಗಳು, ಶೃಂಗೇರಿಯ ಉಭಯ ಜಗದ್ಗುರುಗಳ ಅಮೃತ ಹಸ್ತದಿಂದ ಚಾಲನೆ ಹೊಂದಿದ ಈ ಮಹಾಅಭಿಯಾನ ರಾಜ್ಯದ ಹಲವು ಪರಮ ಪೂಜ್ಯರ ಹಾಗೂ ಗುರುಹಿರಿಯರ ಕೃಪಾಶೀರ್ವಾದದಿಂದ ರಾಜ್ಯದ ವಿವಿಧ ಕಡೆಗೆ ಸಂಚರಿಸಿ, ವಿವಿಧ ಮನೆಗಳಲ್ಲಿ ಪೂಜಾಕಾರ್ಯ ನಡೆಯುತ್ತದೆ, ಬೆಳಗಾವಿಯಲ್ಲಿಯೂ ಕೂಡಾ 20 ದಿನ ವಿವಿಧ ಮನೆಗಳಲ್ಲಿ ಪೂಜಾ ಕಾರ್ಯ ನಡೆದು, ಜನೆವರಿ 16 ಈ ಪುಣ್ಯಜಲ ಅಯೋಧ್ಯೆಗೆ ತಲುಪುವುದು ಎಂಬ ಮಾಹಿತಿ ನೀಡಿದ್ದಾರೆ..

ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣದ ದಿವ್ಯ ಘಳಿಗೆಗೆ ಪೂರಕವಾಗಿ ಭಾರತದ 16 ಪುಣ್ಯ ನದಿಗಳಾದ ಬ್ರಹ್ಮಪುತ್ರ, ಭೀಮರತಿ, ಗಂಗಾ, ಕಾವೇರಿ, ಪ್ರಣಹಿತ, ಪೂರ್ಣಾ, ಯಮುನಾ, ಕೃಷ್ಣಾ ಸಿಂಧು, ಸರಯೂ , ನರ್ಮದಾ , ತುಂಗಾಭದ್ರಾ, ಗಂಡಕಿ, ಸರಸ್ವತಿ, ಗೋದಾವರಿ, ಮತ್ತು ತಾಮರಭರಣಿ ನದಿಗಳ ಪುಣ್ಯ ಜಲ ಹಾಗೂ ಮೃತ್ತಿಕೆಯುಳ್ಳ ಮಹಾ ಸಂಪುಟವು ಸಂಕಲ್ಪಾರ್ಥ ಒಂದು ಕೋಟಿ ಕುಟುಂಬಗಳ ಮನೆ ಬಾಗಿಲಿಗೆ ತೆರಳಲಿದೆ.

ಶೃಂಗೇರಿ ಉಭಯ ಜಗದ್ಗುರುಗಳ ಅಮೃತ ಹಸ್ತದೊಂದಿಗೆ ಚಾಲನೆ ದೊರೆತ ಶ್ರೀ ರಾಮಾಮೃತ ತರಂಗಿಣಿ ಭವ್ಯ ಮಹಾಭಿಯಾನವು ರಾಜ್ಯದ ಹಲವು ಪರಮ ಪೂಜ್ಯ ಗುರುಗಳು ಹಾಗೂ ಹಿರಿಯರ ಕೃಪಾಶೀರ್ವಾದದೊಂದಿಗೆ ರಾಜ್ಯದ ವಿವಿದೆಡೆಗಳಲ್ಲಿ ಸಂಚರಿಸುತ್ತಿದ್ದು..

ಅಯೋಧ್ಯೆ ಶ್ರೀ ರಾಮನ ಪಾದುಕೆ ಹಾಗೂ 16 ಪವಿತ್ರ ನದಿಗಳ ಪುಣ್ಯ ಜಲ ಹಾಗೂ ಮೃತ್ತಿಕೆಗೆ ತಾವುಗಳು ಸ್ವತಃ ಕೈಯಾರೇ ಪೂಜೆ ಸಲ್ಲಿಸುವ ಮೂಲಕ ಶ್ರೀ ರಾಮಚಂದ್ರನ ದಿವ್ಯ ಕೃಪೆಗೆ ಪಾತ್ರರಾಗಬಹುದಾಗಿದೆ ಎಂಬ ಹೇಳಿಕೆ ನೀಡಿದ್ದಾರೆ..

ಈ ಸುದ್ದಿಗೋಷ್ಠಿಯಲ್ಲಿ ಶ್ರೀ ರಾಮಾಮೃತ ತರಂಗಿಣಿ ಟ್ರಸ್ಟಿನ ಪದಾಧಿಕಾರಿಗಳು, ಸ್ಥಳೀಯ ರಾಮಭಕ್ತರು, ನಗರ ಸೇವಕ ಜಯತೀರ್ಥ ಸವದತ್ತಿ ಮತ್ತಿತರರು ಭಾಗಿಯಾಗಿದ್ದರು..

ವರದಿ ಪ್ರಕಾಶ ಕುರಗುಂದ..