ಬೆಳಗಾವಿಯಲ್ಲಿ ವೈಶಿಷ್ಟ್ಯಪೂರ್ಣ, ಸಾಂಪ್ರದಾಯಿಕ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ..
ರಾಜಮನೆತನದವರಿಗೆ ಆಭರಣ ಸರಬರಾಜು ಮಾಡುವ ಗುಣಮಟ್ಟದ ಆಭರಣಗಳ ಮೇಳ..
ಬೆಳಗಾವಿ : ನಗರದ ಸುಪ್ರಸಿದ್ದ ಹೋಟೆಲ್ ಆಗಿರುವ ಯುಕೆ27 ಫೆರ್ನ್ ನಲ್ಲಿ ಈ ವಿಶೇಷವಾದ ಸಾಂಪ್ರದಾಯಿಕ ಆಭರಣ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜನೆ ಮಾಡಿದ್ದು, ಬೆಳಗಾವಿ ಹಾಗೂ ಜಿಲ್ಲೆಯ ಎಲ್ಲಾ ಆಭರಣ ಪ್ರಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜುವೆಲ್ಲರ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಚೈತನ್ಯ ವಿ ಕೊಥಾ ಅವರು ತಿಳಿಸಿದ್ದಾರೆ..

ಸುಮಾರು 150ವರ್ಷ ಆಭರಣ ವ್ಯಾಪಾರದಲ್ಲಿ ಇತಿಹಾಸ ಹೊಂದಿರುವ ಸಿ ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜುವೆಲ್ಲೇರ್ಸ್ ಕಡೆಯಿಂದ ಇದೀಗ ಬೆಳಗಾವಿಯ ಜನತೆಗಾಗಿ ಅಸಾಧಾರಣ, ಕರಕುಶಲ, ಮತ್ತು ವಿನ್ಯಾಸ ಹೊಂದಿರುವ ಆಭರಣಗಳ ಪ್ರದರ್ಶನ ಮತ್ತು ಮಾರಾಟವನ್ನು 24/11/2023 ರಿಂದ 26/11/2023ರ ವರೆಗೆ ಆಯೋಜಿಸಲಾಗಿದ್ದು, ಪ್ರತಿಷ್ಠಿತ ರಾಜಮನೆತನಗಳಿಗೆ ಆಭರಣ ಮಾರಾಟ ಮಾಡಿದ ಸಂಸ್ಥೆ ಎಂಬ ಹೆಗ್ಗಳಿಕೆ ಕೂಡ ಈ ಸಂಸ್ಥೆಗೆ ಇದೆ..

ಇಲ್ಲಿ ಸಾಂಪ್ರದಾಯಿಕ ಮತ್ತು ಸಮಕಾಲೀನ ಸೃಷ್ಟಿಗಳ ಸಂಗ್ರಹದ ವಿಶಿಷ್ಟ ಶೇಣಿಯೊಂದಿಗೆ ಅಸಾಧಾರಣ ಶ್ರೇಣಿಯ ಆಭರಣಗಳು ಲಭ್ಯವಿದ್ದು, ಬೆಳಗಾವಿ ಗ್ರಾಹಕರಿಗೆ ವಿಶೇಷವಾದ ಕೊಡುಗೆಗಳು ಕೂಡಾ ಇರುತ್ತವೆ, ಬೆಳ್ಳಿಯ ಮೇಲೆ 2%, ಚೀನ್ನದ ಮೇಲೆ 4%, ಡೈಮಂಡ್ ಮೇಲೆ 6% ರಿಯಾಯಿತಿಗಳನ್ನು ನೀಡಲಾಗಿದೆ ಎಂಬ ಮಾಹಿತಿ ನೀಡಿದರು..

ಬೆಳಗಾವಿ ಉತ್ತರದ ಶಾಸಕರಾದ ರಾಜು ಸೇಠ್ ಅವರು ಈ ಆಭರಣ ಮೇಳವನ್ನು ಉದ್ಘಾಟಿಸಿ, ಇಲ್ಲಿ ವಿಧವಿಧದ ಆಭರಣಗಳ ಸಂಗ್ರಹವಿದೆ, ಗುಣಮಟ್ಟದ ಸಂಪ್ರದಾಯ ಹಾಗೂ ನವೀನ ಶೈಲಿಯ ಆಭರಗಳು ಮಾರಾಟಕ್ಕೆ ಇದ್ದು, ಬೆಳಗಾವಿ ನಾಗರಿಕರು ಬಂದು ವೀಕ್ಷಣೆ ಮಾಡಿ, ಇದರ ಸದುಪಯೋಗ ಪಡೆದುಕೊಳ್ಳಿ ಎಂದರು..

ಇನ್ನು ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ಬಗ್ಗೆ ಮಾತನಾಡಿದ ಅವರು, ಆಭರಣಗಳ ವಿನ್ಯಾಸ ಮತ್ತು ಗುಣಮಟ್ಟ ಶ್ರೇಷ್ಠ ಮಟ್ಟದಲ್ಲಿದ್ದು, ಸೃಜನಶೀಲತೆಯ ಸಂಪೂರ್ಣ ಶ್ರೇಣಿಯ ಆಭರಣಗಳ ಸಂಗ್ರಹವಿದೆ ಎಂದರು..
ಈ ಸಂಸ್ಥೆಯ ಆಭರಣ ಸಂಗ್ರಹದ ಸೊಬಗು, ಆಕರ್ಷಕ ಶೈಲಿ, ಜೊತೆಗೆ ಸೂಕ್ಷ್ಮವಾದ ವಜ್ರ, ವೈಢೂರ್ಯ, ಹವಳ, ಮುತ್ತುಗಳು, ಮಾಣಿಕ್ಯಗಳಂತಹ ಅಪರೂಪದ ರತ್ನಗಳು ಆಕರ್ಷಕ ವಿನ್ಯಾಸಗಳೊಂದಿಗೆ ಕಾಣಿಸಿಕೊಂಡಿವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ವರದಿ ಪ್ರಕಾಶ ಕುರಗುಂದ..