ಮಗುವಿನ ಜನ್ಮತಾನವಾದ 108 ಆಂಬುಲೆನ್ಸ್ ವಾಹನ..

ಮಗುವಿನ ಜನ್ಮತಾನವಾದ 108 ಆಂಬುಲೆನ್ಸ್ ವಾಹನ..

ಆಂಬುಲೆನ್ಸ್ ಸಿಬ್ಬಂದಿಯ ಕರ್ತವ್ಯ ದಕ್ಷತೆಯಿಂದ ತಾಯಿ – ಮಗು ಆರೋಗ್ಯ..

ಬೆಳಗಾವಿ: ಜಿಲ್ಲೆಯ ಗೋಕಾಕ ತಾಲೂಕಿನ, ಲಗಮೇಶ್ವರ ಗ್ರಾಮದ ತುಂಬು ಗರ್ಭಿಣಿ ಮಹಿಳೆಯು, ಶುಕ್ರವಾರ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ 108 ಆಂಬುಲೆನ್ಸ್ ವಾಹನದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ದೊರಕಿದೆ..

ಪ್ರೇಮಾ ಭೀಮರಾಯ ಎಂಬುವರು ಮಗುವಿಗೆ ಜನ್ಮ ನೀಡಿದ ಮಹಿಳೆಯಾಗಿದ್ದು, ಆಸ್ಪತ್ರೆಗೆ ಹೋಗುವಾಗ ವಾಹನದಲ್ಲಿ ಮಹಿಳೆಯ ಅತ್ತೆ ಬಸವ್ವ ಕೂಡಾ ಜೊತೆಗಿದ್ದು, ಬೆಳಗಿನ ಜಾವ 3ಗಂಟೆ 12 ನಿಮಿಷಕ್ಕೆ ಮಗುವಿನ ಜನನವಾಗಿದೆ..

ಲಗಮೇಶ್ವರದಿಂದ ಅಂಕಲಗಿ ಹೋಗುವಾಗ ಆಂಬುಲೆನ್ಸ್ ನಲ್ಲಿಯೇ ಹೆರಿಗೆಯಾಗಿ, ನಂತರ ಅಂಕಲಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗು ಮತ್ತು ತಾಯಿಯನ್ನು ದಾಖಲು ಮಾಡಲಾಗಿದ್ದು, ಅಂಕಲಗಿ 108 ಆಂಬುಲೆನ್ಸ್ ಶುಶ್ರೂಷಾ ಅಧಿಕಾರಿ ಮಲ್ಲಿಕಾರ್ಜುನ, ವಾಹನ ಚಾಲಕ ಬಸಪ್ಪ, ಹಾಗೂ ಆಶಾ ಕಾರ್ಯಕರ್ತೆ ಮಂಗಳಾ ಅವರ ಕಾರ್ಯ ಶ್ಲಾಘನೀಯ ಎಂದು ಸಾರ್ವಜನಿಕರು ಬಣ್ಣಿಸಿದ್ದಾರೆ..

ವರದಿ ಪ್ರಕಾಶ ಕುರಗುಂದ….