ಬಿಜೆಪಿಯಲ್ಲಿ ವಂಶವಾದವನ್ನು ನಿರ್ಮೂಲನೆ ಮಾಡುವದೇ ನನ್ನ ಗುರಿ…

ಬಿಜೆಪಿಯಲ್ಲಿ ವಂಶವಾದವನ್ನು ನಿರ್ಮೂಲನೆ ಮಾಡುವದೇ ನನ್ನ ಗುರಿ..

ಬಿಜೆಪಿ ಶಾಸಕ ಬಸನಗೌಡ ಯತ್ನಾಳ ಸ್ಪಷ್ಟನೆ

ಬೆಳಗಾವಿ : ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಮೊದಲ ದಿನ ಭಾಗಿಯಾಗಲು ಆಗಮಿಸಿದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ ಅವರು ಬಿಜೆಪಿಯಲ್ಲಿ ನಡೆಯುತ್ತಿರುವ ವಂಶ ರಾಜಕಾರಣದ ವಿರುದ್ಧ ಕಿಡಿ ಕಾರಿದ್ದಾರೆ..

ಮೊದಲಿಗೆ ಪಂಚ ರಾಜ್ಯಗಳ ಚುನಾವಣೆಯಲ್ಲಿನ ವಿಜಯದ ಬಗ್ಗೆ ಪ್ರಸ್ತಾಪಿಸಿದ ಅವರು ಈ ಗೆಲುವು ಮೋದಿ ಅವರ ಗೆಲುವು, ಅವರ ನೇತೃತ್ವ ಒಪ್ಪಿಕೊಂಡು ಗೆಲುವು ಸಿಕ್ಕಂತಿದೆ, ದೇಶಕ್ಕೆ ಮೋದಿ ಒಬ್ಬರೇ ಗ್ಯಾರೆಂಟಿ, ಇಲ್ಲಿ ಹೊಂದಾಣಿಕೆ ರಾಜಕಾರಣ ಇಲ್ಲಾ, ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡೋದು ನಮ್ಮ ಪಕ್ಷದ ದ್ಯೇಯ, ಇಡೀ ದೇಶದಲ್ಲೇ ಅದನ್ನು ಕಾಯ್ದುಕೊಂಡು ಹೋಗುತ್ತೇವೆ..

ಪ್ರಾಮಾಣಿಕರು, ದೇಶಭಕ್ತರು ಮಾತ್ರ ಬಿಜೆಪಿ ಇರಬೇಕು, ವಂಶವಾದವನ್ನು ನಿರ್ಮೂಲನೆ ಮಾಡುವದೇ ನನ್ನ ಗುರಿ, ಈಗ ರಾಜ್ಯದಲ್ಲಿ ಬಿಜೆಪಿ ಪಕ್ಷದ ಅಧ್ಯಕ್ಷ ಆಗಿರುವ ವಿಜಯೇಂದ್ರ ಅವರ ವಿಷಯವಾಗಿ ಮಾತನಾಡಿದ ಅವರು, ಆದ ತಪ್ಪುಗಳು
ಎಲ್ಲಾ ರೆಪರಿ ಆಗುತ್ತವೆ ಎಂದರು.

ಉತ್ತರ ಕರ್ನಾಟಕದ ಅನ್ಯಾಯವಾಗಿದೆ, ಇಲ್ಲಿ ಪಕ್ಷದ ಉನ್ನತ ಹುದ್ದೆಗಳನ್ನು ಸಿಗಬೇಕು, ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗುವವರೆಗೆ ಶಾಸಕಾಂಗ ಸಭೆಗೆ ಹಾಜರಾಗುವುದಿಲ್ಲ ಎಂದರು..

ವರದಿ ಪ್ರಕಾಶ ಕುರಗುಂದ..