ಬೆಳಗಾವಿ ಪಾಲಿಕೆಯ ಎಸ್ಸಿ ಎಸ್ಟಿ ನೌಕರರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ…

ಬೆಳಗಾವಿ ಪಾಲಿಕೆಯ ಎಸ್ಸಿ ಎಸ್ಟಿ ನೌಕರರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ..

ಅಧ್ಯಕ್ಷರಾಗಿದ್ದ ಮಂಜುಶ್ರೀ ಎಂ ಅವರ ಸ್ಥಾನಕ್ಕೆ ಯಲ್ಲೇಶ ಎಲ್ ಬಚ್ಚಲಪುರಿ ಆಯ್ಕೆ..

ಸಂಘದ ಸದಸ್ಯರ ಸರ್ವಾನುಮತದಿಂದ ಆಯ್ಕೆಯಾದ ಮೂರು ಪದಾಧಿಕಾರಿಗಳು..

ಬೆಳಗಾವಿ : ಇಡೀ ರಾಜ್ಯದಲ್ಲಿಯೇ ತನ್ನ ವಿಶೇಷ ಕಾರ್ಯ ಹಾಗೂ ಘಟನಾವಳಿಗಳಿಂದ ಚರ್ಚೆಯಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆಯು ಬ್ರಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಂತರ ಎರಡನೆಯ ಮಹತ್ವದ ಪಾಲಿಕೆ ಆಗಿದ್ದು, ಈ ಪಾಲಿಕೆಯ ಎಸ್ಸಿ ಎಸ್ಟಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ ಸರ್ವರ ಸಹಮತದಿಂದ ಸರಾಗವಾಗಿ ನಡೆದಿದೆ..

ಶನಿವಾರ ದಿನಾಂಕ 16/12/2023 ರಂದು ಮಧ್ಯಾಹ್ನ ಒಂದು ಗಂಟೆಗೆ, ಬೆಳಗಾವಿ ಮಹಾನಗರ ಪಾಲಿಕೆಯ ಎಸ್ಸಿ ಎಸ್ಟಿ ನೌಕರರ ಸಂಘಟನೆಯ ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಜಂಟಿಯಾಗಿ ಭಾಗಿಯಾಗಿ, ಪಾಲಿಕೆಯ ಆವರಣದಲ್ಲಿ ಇರುವ ಡಾ ಬಾಬಾಸಾಹೇಬ್ ಅಂಬೇಡ್ಕರ ಅವರ ಸ್ಮಾರಕದ ಎದುರಿಗೆ ಸಾಮಾನ್ಯ ಸಭೆಯನ್ನು ಜರುಗಿಸಲಾಯಿತು..

ಸಭೆಯ ಉದ್ದೇಶ ಎಂದರೆ, ಪಾಲಿಕೆಯ ಎಸ್ಸಿ ಎಸ್ಟಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಎಂ ಮಂಜುಶ್ರೀಯವರು ಪಾಲಿಕೆಯಿಂದ ವರ್ಗಾವಣೆ ಆಗಿರುವ ಕಾರಣದಿಂದ ತೆರವಾದ ಸ್ಥಾನಕ್ಕೆ ಅಧ್ಯಕ್ಷರ ನೇಮಕ ಮಾಡುವ ಉದ್ದೇಶ ಇದ್ದಿದ್ದು, ಎಲ್ಲಾ ನೌಕರರು ಹಾಗೂ ಸಂಘದ ಪದಾಧಿಕಾರಿಗಳ ಸಹಮತದ ಒಪ್ಪಿಗೆಯೊಂದಿಗೆ ಪಾಲಿಕೆಯ ಸಿಬ್ಬಂದಿ ಯಲ್ಲೇಶ ಎಲ್ ಬಚ್ಚಲಪುರಿ ಅವರನ್ನು ಆಯ್ಕೆ ಮಾಡಲಾಗಿದೆ..

ಇನ್ನು ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ಡಾ, ಗಜಾನನ ಕಾಂಬಳೆ ಅವರನ್ನು ಆಯ್ಕೆ ಮಾಡಿದ್ದು, ಸಂಘದ ಕಾರ್ಯದರ್ಶಿ ಹುದ್ದೆಗೆ ಸಚಿನ ಕಾಂಬಳೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ..

ಲಕ್ಷ್ಮಿ ಸುಳಗೇಕರ, ಪಾಲಿಕೆಯ ಉಪಾಯುಕ್ತೆ ಅಭಿವೃದ್ಧಿ ಇವರು ಈ ಸಭೆಯ ಅಧ್ಯಕ್ಷ ಸ್ಥಾನ ವಹಿಸಿದ್ದು, ಭಾರತಿ ತಳವಾರ, ಸುರೇಶ್ ದ್ಯಾವನ್ನವರ, ಸಾತಕ್ಕ ತಳವಾರ, ರಾಜಶ್ರೀ ಜಾಧವ, ಭಾರತ ಕೋಲಕಾರ, ದೇವೇಂದ್ರ ಕಾಂಬಳೆ, ವಿಶಾಲ್ ವಚ್ಚುಕರ, ಸುರೇಶ್ ಮಾರ್ತೆನ್ನವರ್, ಸಂಜು ಕಂಗ್ರಾಳಿಕರ, ಜ್ಯೋತಿಬಾ ಅನಾಗೊಳ್ಕರ, ಚಂದ್ರು ಮುರಾರಿ, ಯಲ್ಲಪ್ಪ ಶಿರೋಳ, ಸುರೇಶ್ ಆಲೂರು, ಶಿವಾಜಿ ಮಾನೆ, ಸಂಜು ಪಾಟೀಲ್, ಅನಿಲ್ ದೇಸಾಯಿ, ಅಮಿತ್ ಯಳಕಾರ, ಮಲ್ಲಿಕಾರ್ಜುನ್ ಹಿರೊಳ್ಳಿ, ಮಹದೇವ್ ಗುಂಜಿಗಾವಿ, ಯಮನಪ್ಪ ದೊಡ್ಡಮನಿ, ಶ್ರೀಕಾಂತ ಇರಳೆ, ಆನಂದ ಇಟಗಿ, ಸಾಗರ ಕಾಂಬಳೆ ಹಾಗೂ ಪ್ರಮೋದ್ ಹಲಗೇಕರ ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಕುರಗುಂದ…