ಬೆಳಗಾವಿಯಲ್ಲಿ ರಂಗಸಂಪದ ವತಿಯಿಂದ “ಕಾರಂತ ನಾಟಕೋತ್ಸವ”…

ಬೆಳಗಾವಿಯಲ್ಲಿ ರಂಗಸಂಪದ ವತಿಯಿಂದ “ಕಾರಂತ ನಾಟಕೋತ್ಸವ”..

ರಂಜನೀಯ ಹಾಸ್ಯ ಹಾಗೂ ರಾಜಕೀಯ ವಿಡಂಬನಾತ್ಮಕ ನಾಟಕಗಳ ಪ್ರದರ್ಶನ..

ಕನ್ನಡಿಗರಿಗಾಗಿ ಪ್ರಥಮ ಭಾರಿಗೆ ಕನ್ನಡ ಭವನದಲ್ಲಿ ನಾಟಕ ಪ್ರದರ್ಶನ..

ಡಾ ಅರವಿಂದ ಕುಲಕರ್ಣಿ…

ಬೆಳಗಾವಿ : ಬುಧವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಬೆಳಗಾವಿ ರಂಗಸಂಪದ ಅಧ್ಯಕ್ಷ ಹಾಗೂ ಪ್ರದರ್ಶನವಾಗುತ್ತಿರುವ ನಾಟಕಗಳ ನಿರ್ದೇಶಕರಾದ ಅರವಿಂದ ಕುಲಕರ್ಣಿ ಅವರು ನಗರದಲ್ಲಿ ಹಮ್ಮಿಕೊಂಡಿರುವ “ಕಾರಂತ ನಾಟಕೋತ್ಸವದ” ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ..

ರಂಗಸಂಪದ ಬೆಳಗಾವಿ ನಾಟಕ ತಂಡವು 1978 ರಲ್ಲಿ ಸ್ಥಾಪನೆಗೊಂಡು, ಸತತ 45 ವರ್ಷಗಳ ಕಾಲ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ರಂಗ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದು, ಇದೇ ಶನಿವಾರ ದಿನಾಂಕ 23/12/2023ರಂದು ಸಾಯಂಕಾಲ 6-30 ಕ್ಕೆ ಬೆಳಗಾವಿ ನಗರದ ಕನ್ನಡ ಭವನದಲ್ಲಿ ಎರಡು ದಿನಗಳ ಕಾಲ ನಾಟಕೋತ್ಸವ ನಡೆಯಲಿದೆ ಎಂಬ ಮಾಹಿತಿ ನೀಡಿದ್ದಾರೆ..

ಈಗಾಗಲೇ ಬೆಳಗಾವಿ ಧಾರವಾಡ ಉಡುಪಿ ವಿಜಯಪುರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡು ಜನಮನ ಗೆದ್ದಿರುವ, “ಮುದ್ದಣ್ಣನ ಪ್ರಮೋಷನ್ ಪ್ರಸಂಗ” ಹಾಗೂ ರಾಜಕೀಯ ವಿಡಂಬನೆಯ ನಾಟಕವಾದ “ಮರಣ ಮೃದಂಗ” ಎರಡೂ ನಾಟಕಗಳು ಕ್ರಮವಾಗಿ ಶನಿವಾರ ಮತ್ತು ಭಾನುವಾರ ಪ್ರದರ್ಶನ ಆಗುತ್ತವೆ, ರಂಗಸಂಪದ ಸದಸ್ಯತ್ವ ಹೊಂದಿದ ಸದಸ್ಯರಿಗೆ ಅವರ ಗುರುತಿನ ಚೀಟಿ ಹಾಗೂ ಉಳಿದ ಪ್ರೇಕ್ಷಕರಿಗೆ ನೂರು ರೂಪಾಯಿಗಳ ಪ್ರವೇಶ ಪೀ ಮೂಲಕ ನಾಟಕ ವೀಕ್ಷಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ..

ಎರಡೂ ನಾಟಕಗಳು ಬದುಕಿನ ಪ್ರಸಂಗಗಳಿಗೆ ಅತೀ ಹತ್ತಿರವಾಗಿದ್ದು, ಎಲ್ಲರಿಗೂ ಮನರಂಜನೆ ಜೊತೆಗೆ ಉತ್ತಮ ಸಂದೇಶ ಮತ್ತು ವಿಚಾರಗಳನ್ನು ತಿಳಿಸುವ ಕಾರಣ ಎಲ್ಲರೂ ಇಂತಹ ನಾಟಕಗಳನ್ನು ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿಕೊಂಡರು..

ಈ ಸುದ್ದಿಗೋಷ್ಠಿಯಲ್ಲಿ ರಾಮಚಂದ್ರ ಕಟ್ಟಿ, ಗುರುನಾಥ ಕುಲಕರ್ಣಿ, ಡಾ ಅರವಿಂದ ಕುಲಕರ್ಣಿ, ಹಾಗೂ ಯ ರು ಪಾಟೀಲ್ ಅವರು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಕುರಗುಂದ..