ಪಾಲಿಕೆಯ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸಮಿತಿಯ ಸಾಮಾನ್ಯ ಸಭೆ…

ಪಾಲಿಕೆಯ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸಮಿತಿಯ ಸಾಮಾನ್ಯ ಸಭೆ..

ಪೌರ ಕಾರ್ಮಿಕರಿಗೆ ಅನ್ಯಾಯ ಮಾಡಿದವರು ಯಾರೂ ಉದ್ದಾರ ಆಗೋಲ್ಲ..

ಅಸಮಾಧಾನ ಹೊರಹಾಕಿದ ಸಮಿತಿಯ ಅಧ್ಯಕ್ಷ ಹಾಗೂ ನಗರ ಸೇವಕರಾದ ರವಿ ಧೋತ್ರೆ..

ಬೆಳಗಾವಿ : ಶುಕ್ರವಾರ ದಿನಾಂಕ 22/12/2023 ರಂದು ಪಾಲಿಕೆಯ ಸ್ಥಾಯಿ ಸಮಿತಿಯ ಸಭಾಗೃಹದಲ್ಲಿ ಸಾಮಾಜಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸಮಿತಿಯ ಸಭೆಯನ್ನು ಕರೆಯಲಾಗಿದ್ದು, ಸಭೆಯ ಅಧ್ಯಕ್ಷತೆ ವಹಿಸಿದ್ದ ರವಿ ಧೋತ್ರೆ ಅವರು ಕೆಲ ವಿಷಯಗಳಲ್ಲಿ ಅಧಿಕಾರಿಗಳ ನಡೆಯಿಂದ ತಮ್ಮ ಅಸಮಾಧಾನ ನುಡಿಗಳನ್ನು ಹೊರಹಾಕಿದ್ದಾರೆ..

ಪಾಲಿಕೆಯ ಪರಿಷತ್ತ ಕಾರ್ಯದರ್ಶಿ ಹಾಗೂ ಉಪಾಯುಕ್ತರಾದ (ಆಡಳಿತ) ಉದಯಕುಮಾರ ತಳವಾರ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಭೆಯಲ್ಲಿ ಚರ್ಚಿಸಲಾಗುವ ವಿಷಯಗಳ ಕಾರ್ಯಸೂಚಿಯನ್ನು ಸಭೆಗೆ ವಿವರಿಸಿ, ಸಮಿತಿಯ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ವಿಷಯಗಳಲ್ಲಿ ಸಲಹೆ ಸೂಚಿಸಲಾಯಿತು..

ಸಭೆಯಲ್ಲಿ ಮುಖ್ಯವಾಗಿ, ಬೆಳಗಾವಿ ನಗರದಲ್ಲಿರುವ ಉದ್ಯಾನವನಗಳ ನಿರ್ವಹಣೆಗಾಗಿ ಕಾವಲುಗಾರರ ನೇಮಕದ ಟೆಂಡರ್ ಅನುಮೋದನೆಗಾಗಿ ಇದ್ದ ಕಡತವನ್ನು ಅಭಿವೃದ್ಧಿ ಸ್ಥಾಯಿ ಸಮಿತಿಯಿಂದ ಆರೋಗ್ಯ ಸ್ಥಾಯಿ ಸಮಿತಿಗೆ ವರ್ಗಾವಣೆ ಕುರಿತು ಚರ್ಚಿಸಿ, ಸಭೆಯ ಒಮ್ಮತದ ನಿರ್ಧಾರ ಮೇಲೆ ಆರೋಗ್ಯ ಸ್ಥಾಯಿ ಸಮಿತಿಗೆ ಕಡತವನ್ನು ವರ್ಗಾವಣೆ ಮಾಡಿಕೊಳ್ಳಲಾಯಿತು.

ಕೆಲ ನಗರ ಸೇವಕರು ತನ್ನ ವಾರ್ಡಿನಲ್ಲಿರುವ ಸಮಸ್ಯೆಗಳನ್ನು ಹೇಳಿಕೊಂಡಾಗ, ಸಭೆಯ ಅಧ್ಯಕ್ಷರಾದ ರವಿ ಧೋತ್ರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿ ಆದಷ್ಟು ಬೇಗ ವಾರ್ಡಿನ ಕೆಲಸಗಳು ಆಗಬೇಕು ಎಂದರು.

ಇನ್ನು 150 ಜನ ಪೌರ ಕಾರ್ಮಿಕರ ನೇಮಕದ ಬಗ್ಗೆ ಮಾತನಾಡಿದ ಅಧ್ಯಕ್ಷರು, ಅವರು ಯಾವ ಮಾನದಂಡದ ಮೇಲೆ ಆಯ್ಕೆ ಆಗಿದ್ದಾರೆ ಎಂದು ಇನ್ನು ನಿಗೂಢವಾಗಿದ್ದು ಅವರು ಪ್ರಚಲಿತವಾಗಿ ಕೆಲಸ ಮಾಡುತ್ತಿದ್ದಾರೋ, ಇಲ್ಲವೋ ಗೊತ್ತಿಲ್ಲ, ಮತ್ತೆ ಉಳಿದ ಕಾರ್ಮಿಕರು ಇಲ್ಲಿ ಬಹುದಿನಗಳಿಂದ ಕಾರ್ಯ ಮಾಡುತ್ತಿದ್ದು ಅಂತವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.

ಪಾಪ ಏಷ್ಟೋ ಜನ ಪೌರ ಕಾರ್ಮಿಕರು ಬಹು ವರ್ಷಗಳಿಂದ ಪಾಲಿಕೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ, ಅಂತ ಕೆಲವರಿಗೆ ಅನ್ಯಾಯ ಆಗಿದೆ, ಕಷ್ಟಪಟ್ಟು ಬೆಳಿಗ್ಗೆಯಿಂದ ತಮ್ಮ ಕಾರ್ಯದಲ್ಲಿ ನಿರತರಾಗಿ, ನಗರವನ್ನು ಸ್ವಚ್ಛವಾಗಿ ಇಡುವ ಪೌರ ಕಾರ್ಮಿಕರ ವಿಷಯದಲ್ಲಿ ಅನ್ಯಾಯ ಮಾಡಿದ ಯಾರೂ ಉದ್ದಾರ ಆಗೋಲ್ಲ ಎಂದಿದ್ದಾರೆ..

ಈಗ ಖಾಯಂ ಆಗಿರುವ ಆ ಪೌರ ಕಾರ್ಮಿಕರು ಸದಾ ಸೇವೆಯಲ್ಲಿ ಇರಬೇಕು, ಒಂದು ವೇಳೆ ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ಕ್ರಮ, ಪ್ರತಿ ವಾರ್ಡಿನಲ್ಲಿಯೂ ಆ ಪೌರ ಕಾರ್ಮಿಕರು ಕಾರ್ಯನಿರತರಾಗಿರಬೇಕು ಎಂದರು..

ಇನ್ನು ಪರಿಷತ್ ಕಾರ್ಯದರ್ಶಿಗಳು ಸಭೆಯನ್ನು ಅತ್ಯುತ್ತಮವಾಗಿ ನಡೆಸಿದ್ದಲ್ಲದೇ ರಾಜ್ಯದಲ್ಲಿ ಹೊಸದಾಗಿ ಹರಡುತ್ತಿರುವ ಕರೋನಾ ರೂಪಾಂತರಿ ವೈರಸ್ ಬಗ್ಗೆ ಪಾಲಿಕೆಯಿಂದ ಹಾಗೂ ಆರೋಗ್ಯ ಸ್ಥಾಯಿ ಸಮಿತಿಯಿಂದ ತಗೆದುಕೊಳ್ಳುವ ಮುಂಜಾಗ್ರತೆ ಕ್ರಮದ ಬಗ್ಗೆ ಮಾಹಿತಿ ನೀಡಿ, ಸಭೆಯಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ಸಲ್ಲಿಸಿ, ಸಭೆಯನ್ನು ಸಮಾಪ್ತಿಗೊಳಿಸಿದರು..

ವರದಿ ಪ್ರಕಾಶ್ ಕುರಗುಂದ..