“ಲಿಂಗಾಯತರು ಹಿಂದೂಗಳಲ್ಲ,” ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ನಿರ್ಣಯ..”

“ಲಿಂಗಾಯತರು ಹಿಂದೂಗಳಲ್ಲ,” ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ನಿರ್ಣಯ..

ಲಿಂಗಾಯತ ಮಹಾಸಭೆಯ ಇಚ್ಚೆಯನ್ನೇ ಎತ್ತಿಹಿಡಿದ ವೀರಶೈವ ಅಧಿವೇಶನದ ನಿರ್ಣಯಗಳು..

ಲಿಂಗಾಯತ ಹಾಗೂ ಹಿಂದೂ ಧರ್ಮದ ಬಗೆಗಿನ ತಮ್ಮ ನಿಲುವನ್ನು ಪಂಚಪೀಠದ ಪಂಚಾಚಾರ್ಯರು ಸ್ಪಷ್ಟಪಡಿಸಲಿ..

ನಿವೃತ್ತ ಐಎಎಸ್ ಅಧಿಕಾರಿ ಶಿವಾನಂದ ಜಾಮದಾರ ಕೋರಿಕೆ..

ಬೆಳಗಾವಿ : ಮಂಗಳವಾರ ದಿನಾಂಕ 26/12/2023ರಂದು ನಗರದ ಕೊಲ್ಲಾಪುರ ವೃತ್ತದಲ್ಲಿ ಇರುವ ವಿಶ್ವಗುರು ಕಾಂಪ್ಲೆಕ್ಸನಲ್ಲಿ, ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ಸುದ್ದಿಗೋಷ್ಟಿ ನಡೆಸಿದ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾದ ಡಾ, ಶಿವಾನಂದ ಜಾಮದಾರ ಅವರು, ನಿನ್ನೆ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯಲ್ಲಿ ತಗೆದುಕೊಂಡು ಕೆಲ ನಿರ್ಣಯಗಳ ಬಗ್ಗೆ ಮಾತನಾಡುತ್ತಾ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು..

ದಾವಣಗೆರೆಯಲ್ಲಿ ನಡೆದ 24ನೆಯ ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ತಗೆದುಕೊಂಡು ಪ್ರಮುಖ ಎಂಟು ನಿರ್ಣಯಗಳಲ್ಲಿ, ಏಳು ನಿರ್ಣಯಗಳನ್ನು ಜಾಗತಿಕ ಲಿಂಗಾಯತ ಮಹಾಸಭೆಯ ಬೆಂಬಲಿಸುತ್ತದೆ ಜೊತೆಗೆ ವೀರಶೈವ ಮಹಸಭೆಯನ್ನು ಅಭಿನಂದಿಸುತ್ತದೆ ಎಂದ ಅವರು, ಮುಖ್ಯವಾಗಿ 5ನೆಯ ನಿರ್ಣಯದ ಬಗ್ಗೆ ಪ್ರಸ್ತಾಪಿಸಿದ ಅವರು, ಲಿಂಗಾಯತರು ಹಿಂದುಗಳಲ್ಲ, ಮುಂದೆ ಬರುವ ಜನಗಣತಿಯಲ್ಲಿ ಎಲ್ಲಾ ಲಿಂಗಾಯತರು ತಮ್ಮ ಧರ್ಮವನ್ನು ಹಿಂದೂ ಎಂದು ಬೆರೆಸಬಾರದು, ಅದಕ್ಕೆ ಬದಲಾಗಿ ತಮ್ಮನ್ನು “ಲಿಂಗಾಯತ – ವೀರಶೈವ” ಎಂದು ಬೆರೆಸಬೇಕು ಎಂದು ಕರೆ ಕೊಟ್ಟಿದೆ.. ಇದು ಅತ್ಯಂತ ಮಹತ್ವದ ಬೆಳವಣಿಗೆ.

1904 ರಲ್ಲಿ ಇದೇ ವೀರಶೈವ ಮಹಾಸಭೆ ತನ್ನ ಮೊದಲನೇ ಅಧಿವೇಶನದಲ್ಲಿ ತಗೆದುಕೊಂಡು ನಿರ್ಧಾರಕ್ಕೆ ಈ ನಿರ್ಣಯ ತದ್ವಿರುದ್ದವಾಗಿದ್ದು, 119 ವರ್ಷಗಳ ನಂತರ ಆದಂತ ಈ ಬದಲಾವಣೆ ಸ್ವಾಗತಾರ್ಹ ಎಂದ ಅವರು, ಈ ನಿರ್ಣಯದ ಪರಿಣಾಮವಾಗಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಜಾಗತಿಕ ಲಿಂಗಾಯತ ಮಹಾಸಭೆ, ಬಸವ ಸಮಿತಿ, ಬಸವ ಧರ್ಮ ಮಹಾಸಭೆ ಮತ್ತು ಅನೇಕ ಲಿಂಗಾಯತ ಸಂಘಟನೆಗಳು ಒಂದಾಗಿ ಹೋರಾಡುವ ಕಾಲ ಒದಗಿ ಬಂದಂತೆ ತೋರುತ್ತಿದೆ ಎಂದಿದ್ದಾರೆ..

ಆದರೆ ಈ ಹಿಂದೆ ವೀರಶೈವರು ಹಿಂದೂಗಳೇ ಎಂದು ಪ್ರಸ್ತಾಪಿಸುತ್ತಾ ಬಂದಿರುವ ಪಂಚಪೀಠದ ಪಂಚಾಚಾರ್ಯರಲ್ಲಿ ಮೂವರು ಪಂಚಾಚಾರ್ಯರು ಈ ವೀರಶೈವ ಮಹಾಸಭೆಯಲ್ಲಿ ಹಾಜರಿದ್ದು ಅವರ ಎದುರಲ್ಲೇ ಈ “ಲಿಂಗಾಯತರು ಹಿಂದೂಗಳಲ್ಲ” ಎಂಬ ನಿರ್ಣಯ ಆಗಿದ್ದು, ಶ್ರೀಗಳಿಗೆ ಬಿಸಿತುಪ್ಪ ಆದಂತಿತ್ತು, ಶ್ರೀಶೈಲ ಸ್ವಾಮಿಗಳು, ಕಾಶಿಯ ಜಗದ್ಗುರುಗಳು ಮೊನ್ನೆಯ ವೀರಶೈವರು ಹಿಂದೂ ಧರ್ಮದ ಭಾಗವೆಂದು ಹೇಳಿದ್ದು ಗಮನಿಸುವ ಸಂಗತಿ ಎಂದ ಅವರು, ನಿರ್ಣಯಕ್ಕೆ ರಂಭಾಪುರಿ ಸ್ವಾಮಿಗಳೂ ತಮ್ಮ ಅಸಂತೋಷ ವ್ಯಕ್ತಪಡಿಸಿದ್ದಾರೆ ಎಂದರು..

2017 ರಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟವನ್ನು ಬಲವಾಗಿ ವಿರೋಧಿಸಿದ ಈ ಪಂಚಾಚಾರ್ಯರು, ತಾವೆಂದೂ ಹಿಂದೂ ಧರ್ಮವನ್ನು ಒಡೆಯಲು ಬಿಡುವುದಿಲ್ಲ ಎಂದು ಅಂದಿನ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದರು, ಜೊತೆಗೆ ಆ ಸರ್ಕಾರವನ್ನು ನಾವೇ ಸೋಲಿಸಿದ್ದೇವೆ ಎಂದು ಬಿಗಿದ್ದರು, ಈಗ ವೀರಶೈವ ಮಹಾಸಭೆಯಲ್ಲಿ ಆದ ನಿರ್ಯದ ನಂತರ ಪಂಚಾಚಾರ್ಯರು ಹಿಂದೂ ಹಾಗೂ ಲಿಂಗಾಯತರ ಬಗ್ಗೆ ಇದ್ದ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು..

ಈ ಸುದ್ದಿಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಮಹಪ್ರಧಾನ ಕಾರ್ಯದರ್ಶಿಯಾದ ಶಿವಾನಂದ ಜಾಮದಾರ, ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷರಾದ ಬಸವರಾಜ್ ರೊಟ್ಟಿ, ಮಹಾಸಭೆಯ ಪದಾಧಿಕಾರಿಗಳಾದ ಬೂದಿಹಾಳ, ಮತ್ತಿತರ ಸದಸ್ಯರು ಹಾಗೂ ಸಮುದಾಯದ ಮುಖಂಡರು ಭಾಗಿಯಾಗಿದ್ದರು..

ವರದಿ ಪ್ರಕಾಶ್ ಕುರಗುಂದ..