ಬೆಳಗಾವಿ ಜಿಲ್ಲಾ ರೈತರ ಸಮಸ್ಯೆಗಳ ಕುರಿತಾಗಿ ಜಿಲ್ಲಾಧಿಕಾರಿಗಳಿಗೆ ಮನವಿ…

ಬೆಳಗಾವಿ ಜಿಲ್ಲಾ ರೈತರ ಸಮಸ್ಯೆಗಳ ಕುರಿತಾಗಿ ಜಿಲ್ಲಾಧಿಕಾರಿಗಳಿಗೆ ಮನವಿ..

ರೈತರ ಬಗ್ಗೆ ಬೇಜವಾಬ್ದಾರಿ ಮಾತು ಆಡಿದ ಸಚಿವ ಶಿವಾನಂದ ಪಾಟೀಲ್ ಅವರಿಗೆ ತರಾಟೆ..

ನಿಪ್ಪಾಣಿ ರೈತರ ಸಮಸ್ಯ ಬಗೆಹರಿಯದಿದ್ದರೆ ಉಗ್ರ ಹೋರಾಟ..

ರಾಜ್ಯಾಧ್ಯಕ್ಷರಾದ ಗಣೇಶ ಎಂ ಇಳಿಗೇರ ಎಚ್ಚರಿಕೆ..

ಬೆಳಗಾವಿ : ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರಿಗೆ ಧರಣಿ ನಿರತರಾದ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು, ಉತ್ತರ ಕರ್ನಾಟಕ ಅಧ್ಯಕ್ಷರಾದ ಗಣೇಶ್ ಇಳಿಗೇರ್ ಅವರ ನೇತೃತ್ವದಲ್ಲಿ ರೈತರ ವಿವಿಧ ಬೇಡಿಕೆಗಳಿಗಾಗಿ ಹಾಗೂ ಸಕ್ಕರೆ ಸಚಿವರ ಬೇಜವಾಬ್ದಾರಿ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು..

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷರಾದ ಗಣೇಶ್ ಇಳಿಗೇರ್ ಅವರು, ಬೆಳಗಾವಿಯ ಎಸ್ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ, ಮೊನ್ನೆ ನಡೆದ ಕೈಗಾರಿಕಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ ಅವರು “ರೈತರು ಬರಗಾಲ ಬರಲೆಂದು ಕಾಯುತ್ತಿರುತ್ತಾರೆ” ಎಂಬ ವಿವಾದಾತ್ಮಕ ಹೇಳಿಕೆ ನೀಡಿ ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಸಚಿವರು ರೈತರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹ ಪಡಿಸಿದರು..

ಅದೇ ರೀತಿ ಜಿಲ್ಲೆ ಬರಗಾಲ ಎಂದು ಘೋಷಣೆ ಆಗಿ, ಗೋಕಾಕ್, ಮೂಡಲಗಿ, ರಾಯಬಾಗ ಹಾಗೂ ಅಥಣಿಗಳಲ್ಲಿ, ಕುಡಿಯುವ ನೀರಿನ ಅಭಾವವಿದ್ದು, ಆದಷ್ಟೂ ಬೇಗ ಹಿಡಕಲ್ ಜಲಾಶಯದಿಂದ ಬಲದಂಡೆ ಹಾಗೂ ಎಡದಂಡೆ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಬೇಕು, ಆ ಭಾಗದ ಜನರಿಗೆ, ದನಕರುಗಳಿಗೆ, ಕುಡಿಯುವ ನೀರಿನ ಅಭಾವ ತುಂಬಾ ಇದ್ದು ಆದಷ್ಟೂ ಬೇಗ ಜಿಲ್ಲಾಧಿಕಾರಿಗಳು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನೀರು ಬಿಡುವಂತೆ ಆದೇಶಿಸಬೇಕು ಎಂದರು..

ಇನ್ನು ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸೆಂಡುರ ಎಂಬ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ, ಅಲ್ಲಿಯ ರೈತರ ಜಮೀನಿನ ಸ್ಥಳವನ್ನು, ಒಂದು ಖಾಸಗಿ (ವೈಂಡ್ ಮಿಲ್ಲ) ಕಂಪನಿಯು ಅನಧಿಕೃತವಾಗಿ ಅತಿಕ್ರಮಣ ಮಾಡಿದ್ದು, ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವ ಕ್ರಮವು ಆಗಿಲ್ಲ, ಬದಲಾಗಿ ರೈತರ ಮೇಲೆಯೇ ದಬ್ಬಾಳಿಕೆ ನಡೆಯುತ್ತಿದೆ, ಕಾರಣ ಆ ರೈತರಿಗೆ ನ್ಯಾಯ ನೀಡಬೇಕು, ರೈತರ ಜಮೀನು ಅವರಿಗೆ ಮರಳುವಂತೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದರು.

ಈ ಪ್ರತಿಭಟನೆಯ ಸಂಧರ್ಭದಲ್ಲಿ ರಾಜ್ಯಾಧ್ಯಕ್ಷರ ಜೊತೆಗೆ, ರಾಜ್ಯ ಸಂಚಾಲಕರಾದ ಪುಜ್ಯಶ್ರಿ ದರಿದೇವರಜ್ಜ, ಶಿವಾನಂದ ಇಳಿಗೆರ, ಸತ್ಯಪ್ಪ ಮಲ್ಲಾಪುರ, ಸಿದ್ದಪ್ಪ ಹಣಗಂಡಿ, ಈರಣ್ಣ ವಕ್ಕುಂದ ಹಾಗೂ ರೈತ ಮುಖಂಡರು ಭಾಗಿಯಾಗಿದ್ದರು..

ವರದಿ ಪ್ರಕಾಶ ಕುರಗುಂದ.