ಬೆಳಗಾವಿ ಪಾಲಿಕೆಯ ಏಳನೆಯ ಪರಿಷತ್ ಸಭೆ..
ಸಭೆಯ ಸಮಯ ನುಂಗಿದ ಮಹಾಪೌರ ಮತ್ತು ಉಪಮಹಪೌರರ ತುರ್ತು ಅನುದಾನದ ಬಳಕೆ..
ವಿರೋಧ ಪಕ್ಷದ ನಗರ ಸೇವಕರ ಪ್ರಶ್ನೆಗೆ ಉತ್ತರಿಸದೇ ಅಸಹಾಯಕರಾದ ಮಹಾಪೌರರು..
138 ಪೌರ ಕಾರ್ಮಿಕರ ನೇಮಕದ ವಿಷಯಕ್ಕೆ ತೆರೆ ಎಳೆದ ಪಾಲಿಕೆ ಆಯುಕ್ತರು…
ಬೆಳಗಾವಿ : ಬುಧವಾರ ನಗರದ ಮಹಾನಗರ ಪಾಲಿಕೆಯ ಪರಿಷತ್ ಸಭಾಗೃಹದಲ್ಲಿ ಪಾಲಿಕೆಯ ಪರಿಷತ್ ಸಭೆಯು ಜರುಗಿದ್ದು, ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಗರ ಸೇವಕರು ಹಾಗೂ ಅಧಿಕಾರಿಗಳ ಮದ್ಯ ಆಗಬೇಕಾದ ಚರ್ಚೆ ಗಲಾಟೆಯ ಗೂಡಾಗಿದ್ದು, ಎಲ್ಲರೂ ತಮ್ಮ ತಮ್ಮ ಸ್ವಾರ್ಥಕ್ಕೆ ಸಭೆಯ ಸಮಯ ವ್ಯರ್ಥ ಮಾಡುತ್ತಿರುವರು ಎಂಬ ಭಾವನೆ ಮೂಡುವಂತಿತ್ತು..

ಮೊದಲಿಗೆ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಮುಜಮಿಲ್ಲ ಡೋಣಿ ಅವರು ಸಭೆಯಲ್ಲಿ ಯಾವುದೇ ವಿಷಯವನ್ನು ಅನುಮೋದನೆ ಮಾಡುವ ಮೊದಲು ಸಭೆಯ ಎಲ್ಲ ಸದಸ್ಯರ ಒಪ್ಪಿಗೆ ಇದೆಯೋ ಅಥವಾ ಇಲ್ಲೋ ಎಂಬುದರ ಮಾಹಿತಿ ಪಡೆದು ಅನುಮೋದನೆ ಮಾಡುವದು ಸೂಕ್ತ ಎಂಬ ಸಲಹೆ ನೀಡಿದರು..
ಮಹಾಂತೇಶ್ ನಗರದ ಬೀದಿ ದ್ವೀಪ ಅಳವಡಿಸುವ ಕುರಿತಾದ ವಿಷಯಕ್ಕೆ ಸಂಬಂಧಿಸಿದಂತೆ, ಕೆಲವು ಕಾಮಗಾರಿಗಳ ಕಡತಗಳನ್ನು ನಾಳೆ ಸಭೆ ಇರುತ್ತದೆಂದರೆ ಇಂದು ನಮಗೆ ತಿಳಿಸುತ್ತೀರಿ, ನಮಗೆ ಅದರ ಬಗ್ಗೆ ಅರ್ಥವೇ ಆಗುವ ಮೊದಲು, ಸಭೆಯಲ್ಲಿ ಆ ವಿಷಯದ ಅನುಮೋದನೆ ಆಗುತ್ತದೆ, ನಮಗೂ ಕಾಲಾವಕಾಶ ನೀಡಿ, ಈಗ ಮಂಡನೆಯಾದ ವಿಷಯವನ್ನು ಅನುಮೋದನೆ ಮಾಡದೇ ತಡೆಹಿಡಿಯಬೇಕು, ಪ್ರತಿ ಸಲ ಹೀಗೆ ಆಗುತ್ತದೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು..

ಅದಕ್ಕೆ ಆಡಳಿತ ಪಕ್ಷದ ಅಧ್ಯಕ್ಷರಾದ ರಾಜಶೇಖರ ದೋಣಿ ಅವರು ಇದೊಂದು ದೊಡ್ಡ ವಿಷಯವಲ್ಲ, ಆ ಕೆಲಸ ನಡೆಯುವ ಸಲುವಾಗಿ ಇದನ್ನು ಅನುಮೋದನೆ ಮಾಡಲಿ ಎಂದು ಮನವಿ ಮಾಡಿದರು, ಆದರೆ ವಿರೋಧ ಪಕ್ಷದವರು ಇದಕ್ಕೆ ಒಪ್ಪದೇ ಸಂಜೆವರೆಗೆ ಆದ್ರೂ ಇದನ್ನು ತಡೆ ಹಿಡಿಯಿರಿ ಎಂದರು, ಆದರೆ ಆಡಳಿತ ಪಕ್ಷದ ನಗರ ಸೇವಕರು ಇದನ್ನು ಒಪ್ಪದೇ ಈ ವಿಷಯ ಪಾಸ್ ಆಗಲೇ ಬೇಕು ಎಂದರು, ಕೊನೆಗೆ ವಿರೋಧ ಪಕ್ಷದ ಒತ್ತಾಯದ ಮೇರೆಗೆ ಸಂಜೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅನುಮೋದನೆಗೆ ಒಪ್ಪಿಗೆ ನೀಡಿ ಎಂದರು..
ಮಹಾಪೌರ ಹಾಗೂ ಉಪಮಹಪೌರರ ತುರ್ತು ಅನುದಾನದಲ್ಲಿ ಯಾವ ಅಭಿವೃದ್ದಿ ಕೆಲಸ ಆಗಿದೆ ಎಂದು ಪ್ರಶ್ನೆ ಮಾಡಿದ ವಿರೋಧ ಪಕ್ಷದ ನಾಯಕರು, ಐದು ಕಾಮಗಾರಿ ಮಾಡುವದಾಗಿ ಎಂದು ಅಧಿಕಾರಿಗಳ ಮಾಹಿತಿ ನೀಡಿದಾಗ ಆ ಕಾರ್ಯಗಳ ಬಗ್ಗೆ ವಿರೋಧ ಪಕ್ಷದ ಎಲ್ಲಾ ನಗರ ಸೇವಕರೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು..

ಎಮರ್ಜೆನ್ಸಿ ಕೆಲಸಕ್ಕೆ ಮಹಾಪೌರರು ಅನುದಾನ ಇರುತ್ತದೆ, ಎಲ್ಲಾ 58 ನಗರ ಸೇವಕರ ಸಮಸ್ಯೆಗಳಿಗೆ ನೀಡದೆ, ಸಮುದಾಯ ಭವನ ನಿರ್ಮಾಣಕ್ಕೆ ಹಾಗೂ ಮಹಾದ್ವಾರ ನಿರ್ಮಾಣಕ್ಕೆ ಕೊಡುವದು ಎಷ್ಟು ಸರಿ, ನೀವು ಕೇವಲ ಆಡಳಿತ ಪಕ್ಷದ ಬಿಜೆಪಿ ನಗರ ಸೇವಕರ ಮಹಾಪೌರ ಅಲ್ಲಾ, ಒಟ್ಟು 58 ನಗರ ಸೇವಕರ ಪ್ರತಿನಿಧಿ, ತಮ್ಮ ಹೆಸರಿನಲ್ಲಿರುವ ಅನುದಾನ ಸದ್ಬಳಕೆ ಆಗಲಿ, ನಗರ ಸೇವಕರ ಸಮಸ್ಯೆಗೆ ಬಳಸಿ ಎಂದು ಸೂಚನೆ ನೀಡಿದರು..
ಒಂದು ಕೋಟಿ ಐವತ್ತು ಲಕ್ಷದ ಅನುದಾನದಲ್ಲಿ ನೀವು ಎಷ್ಟು ಯಾವ ಉದ್ದೇಶಕ್ಕಾಗಿ ಬಳಸಿದ್ದಿರಿ ಎಂಬ ಪ್ರಶ್ನೆಗೆ ಉತ್ತರವನ್ನೇ ನೀಡದೇ, ನಗರ ಸೇವಕರ ಅನುದಾನ ನೀವು ಬಳಕೆ ಮಾಡಿ, ನಮ್ಮ ಅನುದಾನದ ಮೇಲೆ ಏಕೆ ಚರ್ಚೆ ಮಾಡುವಿರಿ ಎಂದರು..
ವಿರೋಧ ಪಕ್ಷದ ನಗರ ಸೇವಕಿ ತನ್ನ ವಾರ್ಡಿನ ರಸ್ತೆಯ ಸಮಸ್ಯೆ ಎಳೆಎಳೆಯಾಗಿ ಹೇಳಿದಾಗ ಇದು ಎಮರ್ಜೆನ್ಸಿ ವಿಷಯ ಎನ್ನಿಸುವುದಿಲ್ಲ ನಿಮಗೆ ಎಂದು ಕಿಡಿ ಕಾರಿದರು, ಸರಿಯಿಲ್ಲದ ರಸ್ತೆಯಿಂದ ಒಬ್ಬ ತಾಯಿಯ ಮಗು ಅಸುನೀಗಿದ, ದಿನಾಲೂ ಹಲವಾರು ಅಪಘಾತಗಳು ಸಂಭವಿಸುತ್ತಿವೆ, ಕೇವಲ ಎರಡು ಲಕ್ಷ ಖರ್ಚು, ಇದಕ್ಕೆ ಎಮರ್ಜೆನ್ಸಿ ಅನುದಾನ ಉಪಯೋಗ ಮಾಡದೇ, ಸಮುದಾಯ ಭವನ ಹಾಗೂ ಮುಖ್ಯ ದ್ವಾರಗಳ (ಕಮಾನ್)ನಿರ್ಮಾಣಕ್ಕೆ ಉಪಯೋಗ ಮಾಡೋದು ಸರಿ ಅಲ್ಲಾ ಎಂದರು..

ಮಧ್ಯಪ್ರವೇಶಿಸಿದ ಬಿಜೆಪಿ ನಗರ ಸೇವಕ ಹಣಮಂತ ಕೊಂಗಾಲಿ ಅವರು ಎಮರ್ಜೆನ್ಸಿ ಪಂಡ ಅನ್ನೋದು ಎಲ್ಲಿದೆ ಎಂದು ತೋರಿಸಿ ಎಂದರು, ಇದಕ್ಕೆ ಅಭಿವೃದ್ಧಿ ಉಪಾಯುಕ್ತರು, ಮಹಾಪೌರರು ಇಚ್ಛೆಗೆ ಬಿಟ್ಟಿದ್ದು ಎಂದು ಸ್ಪಷ್ಟೀಕರಣ ನೀಡಿದ್ದು, ಆಗ ವಿರೋಧ ಪಕ್ಷದ ನಗರ ಸೇವಕ ಅಜೀಂ ಪಟವೆಕರ ಮಾತನಾಡಿ ಒಬ್ಬ ಹೆಣ್ಣುಮಗಳ ಗರ್ಭಪಾತ ನಿಮಗೆ ಈ ಎಮರ್ಜೆನ್ಸಿ ವಿಷಯ ಅನಿಸುವುದಿಲ್ಲವೇ? ಎಂಬ ಪ್ರಶ್ನೆ ಮಾಡಿದರು..
ಕೊನೆಗೂ ಕೂಡಾ ಮಹಾಪೌರ ಉಪಮಹಾಪೌರರ ತುರ್ತು ಅನುದಾನದ ಬಳಕೆಯ ಬಗ್ಗೆ ಉತ್ತರ ನೀಡದ ಮಹಾಪೌರರು, ಅಧಿಕಾರಿಗಳಿಂದ ಹಾಗೂ ಬಿಜೆಪಿ ನಗರ ಸೇವಕರ ಕಡೆಯಿಂದ ಉತ್ತರ ಪಡೆಯುತ್ತಾ, ಆಡಳಿತ ಪಕ್ಷದ ನಗರ ಸೇವಕರ ನಡೆಯಂತೆ ತಮ್ಮ ನಿರ್ಣಯಗಳನ್ನು ಮಂಡಿಸಿದರು.

ಇನ್ನು 138 ಪೌರ ಕಾರ್ಮಿಕರ ನೇಮಕದ ವಿಷಯದಲ್ಲಿ ತನಿಖೆಯನ್ನು ಲೋಕಾಯುಕ್ತರಿಗೆ ನೀಡಿದ ವಿಷಯ ಎಲ್ಲಿಯವರೆಗೆ ಬಂದಿದೆ ಎಂದು ಎಂಇಎಸ್ ನಗರ ಸೇವಕರು ಕೇಳಿದಾಗ, ಅದಕ್ಕೆ ಉತ್ತರಿಸಿದ ಪಾಲಿಕೆಯ ಆಯುಕ್ತರು ರಾಜ್ಯ ಸರ್ಕಾರದ ನಡೆಯಂತೆ ಪೌರ ಕಾರ್ಮಿಕರ ನೇಮಕದ ವಿಷಯದ ಕುರಿತಾದ ಎಲ್ಲಾ ಸಮಸ್ಯೆ ಮುಗಿದಿದ್ದು, ನಾವು ಲೋಕಾಯುಕ್ತ ತನಿಖೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನಡೆಸಿಲ್ಲ ಎಂಬ ಮಾತಿನಿಂದ ಆ ವಿಷಯಕ್ಕೆ ತೆರೆ ಎಳೆದಿದ್ದಾರೆ..
ವರದಿ ಪ್ರಕಾಶ ಕುರಗುಂದ..