ಜಿಪಂ ಎದುರಿಗೆ ವಿಷ ಸೇವಿಸಲು ಮುಂದಾದ ಗುತ್ತಿಗೆದಾರ…

ಜಿಪಂ ಎದುರಿಗೆ ವಿಷ ಸೇವಿಸಲು ಮುಂದಾದ ಗುತ್ತಿಗೆದಾರ..

ಪಂಚಾಯತ ಅಭಿವೃದ್ದಿ ಅಧಿಕಾರಿಯ ಅಮಾನತ್ತಿಗೆ ಪಟ್ಟು..

ಬೆಳಗಾವಿ : ಶುಕ್ರವಾರ ನಗರದ ಜಿಪಂ ಕಚೇರಿಯ ಎದುರಿಗೆ ಜಿಲ್ಲೆಯ ಕರಗುಪ್ಪಿ ಗ್ರಾಮದ ಗ್ರಾಮ ಪಂಚಾಯತಿ ಗುತ್ತಿಗೆದಾರ ಅಶೋಕ ಚೌಗುಲಾ ಎಂಬ ವ್ಯಕ್ತಿ ತನ್ನ ಕುಟುಂಬ ಸಮೇತವಾಗಿ ವಿಷ ಸೇವಿಸುವ ನಿರ್ಧಾರ ಮಾಡಿದ್ದು, ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬೇಟಿ ನೀಡಿ ತಡೆದಿದ್ದಾರೆ..

ಕರಗುಪ್ಪಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎನ್ ಆರ್ ಜಿ ಅಡಿಯಲ್ಲಿ ಹತ್ತಾರು ಕಾಮಗಾರಿ ಕೈಗೊಂಡಿದ್ದು, ಕಾಮಗಾರಿ ಮುಗಿದು ನಾಲ್ಕು ಐದು ವರ್ಷಗಳಾದರೂ ಇನ್ನುವರೆಗೂ ಹಣ ಮಂಜೂರು ಮಾಡದೇ, ಪಂಚಾಯತಿ ಅಭಿವೃದ್ದಿ ಅಧಿಕಾರಿಯಾದ ಜಯಪ್ರಕಾಶ, ಪಂಚಾಯತಿ ಅಧ್ಯಕ್ಷರಾದ ಗುರುಸಿದ್ದಪ್ಪ ಪಾಯನ್ನನವರ ಹಾಗೂ ತಾಂತ್ರಿಕ ಸಹಾಯಕರಾದ ವಿಠ್ಠಲ್ ಬೊರನ್ನವರ ಇವರೆಲ್ಲಾ ಸೇರಿಕೊಂಡು ಈಗಾಗಲೇ ನನ್ನ ಕಡೆಯಿಂದ ಕಮಿಷನ್ ಪಡೆದು ಈಗ ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟು ನನ್ನ ಕಾಮಗಾರಿ ಬಿಲ್ ತಡೆ ಹಿಡಿದಿದ್ದಾರೆ ಎಂದು ಆರೋಪ ಮಾಡಿದ್ದರೆ..

ಈ ಮಾಡುವ ಸಂಬಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಈ ಸಮಸ್ಯೆ ಕುರಿತಾಗಿ ಮನವಿ ಕೊಟ್ಟರೂ, ಇಂದು ಕೊಡುತ್ತೇವೆ, ನಾಳೆ ಕೊಡುತ್ತೇವೆ, ತಾಂತ್ರಿಕ ದೋಷವಿದೆ ಎಂದು ಉದ್ದೇಶಪೂರ್ವಕವಾಗಿ ನನ್ನನ್ನು ಕಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದು, ಅವರ ಮೊಂಡತನದಿಂದ ಇಂದು ನಾವು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಕುಟುಂಬ ಸಮೇತವಾಗಿ ವಿಷ ಸೇವಿಸುವದೊಂದೆ ನಮಗೆ ದಾರಿ ಎಂದು ತಮ್ಮ ನೋವು ತೋಡಿಕೊಂಡರು..

ನಾನು ಮಾಡಿದ ಕೆಲಸದ ಬಾಕಿ ಹಣ ಮಂಜೂರು ಮಾಡಬೇಕು, ಅದೇರೀತಿ ತಕ್ಷಣ ಆ ಕರಗುಪ್ಪಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಅಮಾನತ್ತು ಮಾಡಬೇಕು ಅಂದಾಗಲೇ ನಾನಿಲ್ಲಿಂದ ಕದಲುವದು ಎಂಬ ಹಠ ಹಿಡಿದು ಕಚೇರಿಯ ಮುಂದೆಯೇ ಕುಳಿತಿದ್ದರು..

ವರದಿ ಪ್ರಕಾಶ್ ಕುರಗುಂದ..