ಸತೀಶ ಜಾರಕಿಹೊಳಿ ಅವರ ಶಿಕ್ಷಣ ಕಾಳಜಿಯನ್ನು ಮುಂದುವರೆಸಿದ ಬೆಂಬಲಿಗರು..

ಲೋಕೋಪಯೋಗಿ ಸಚಿವರ ಬೆಂಬಲಿಗರಿಂದ ಕಲಿಕಾ ಸಲಕರಣೆ ವಿತರಣೆ..

ಸತೀಶ ಜಾರಕಿಹೊಳಿ ಅವರ ಶಿಕ್ಷಣ ಕಾಳಜಿಯನ್ನು ಮುಂದುವರೆಸಿದ ಬೆಂಬಲಿಗರು..

ಬೆಳಗಾವಿ : ಶುಕ್ರವಾರ ದಿನಾಂಕ:29/12/2023 ರಂದು ಕರ್ನಾಟಕ ಸರಕಾರ ಲೋಕೋಪಯೋಗಿ ಇಲಾಖೆಯ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಅನುಯಾಯಿಗಳು ಹಾಗೂ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಎಸ್.ಟಿ ಘಟಕದ ಅಧ್ಯಕ್ಷರಾದ ಬಾಳೇಶ್ ದಾಸನಟ್ಟಿ ಅವರು ಕನ್ನಡ ಮಾಧ್ಯಮ ಪ್ರಾಥಮಿಕ ಶಾಲಾ ವಿಧ್ಯಾರ್ಥಿಗಳಿಗೆ ಕಲಿಕಾ ಸಲಕರಣೆ ನೀಡುವುದರ ಮೂಲಕ ಸಚಿವ ಸತೀಶ್ ಜಾರಕಿಹೊಳಿ ಅವರ ಶಿಕ್ಷಣ ಪ್ರೋತ್ಸಾಹವನ್ನು ಮುಂದುವರೆಸಿದ್ದಾರೆ..

ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ, ಧರನಟ್ಟಿ ಗ್ರಾಮದ ಸಿಆರ್ ಪಿ ಕೇಂದ್ರಕ್ಕೆ ಒಳಪಡುವ ಶಾಲಾ ಮಕ್ಕಳಿಗೆ, ಅವರ ಶಾಲೆಯಲ್ಲಿ ನಡೆಸಿದ ಗಣಿತ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆಯ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ವಿವಿಧ ತರಗತಿಗಳಲ್ಲಿ ಸಾಧನೆಗೈದ ಮಕ್ಕಳಿಗೆ ಬಹುಮಾನ ವಿತರಣೆ ಮಾಡುತ್ತಾ ಮಾತನಾಡಿದ ಬಾಳೇಶ ದಾಸನಟ್ಟಿ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಎಸ್ಟು ಅಧ್ಯಯನ ಮಾಡಿದರೂ ಕಡಿಮೆಯೇ, ಅಧ್ಯಯನದ ಜೊತೆಗೆ ತಮ್ಮ ಆರೋಗ್ಯ ಕೂಡಾ ಕಾಪಾಡಿಕೊಂಡು ಹೋಗಿ, ತಮಗೆ ಇಷ್ಟವಾದ, ಆಸಕ್ತಿಯಿರುವ ವಿಷಯಗಳಲ್ಲಿ ಪ್ರಯತ್ನ ಮಾಡುತ್ತಾ ಸಾಧನೆ ಮಾಡಬೇಕು ಎಂಬ ಕಿವಿಮಾತು ಹೇಳಿದರು..

ಈ ಸಂದರ್ಭದಲ್ಲಿ ಶಾಲಾ
ಪ್ರಧಾನ ಗುರುಗಳಾದ ಆರ್. ಪಿ. ಚಬ್ಬಿ,. ಎಂ ಬಿ ತೋರಣಗಟ್ಟಿ, ರಂಗ ವಿರಪ್ಪ k h p s ಹುಲ್ಯಾನೂರು, ರವಿ ಆರ್ ಭಜಂತ್ರಿ ಭರಮಾನಟ್ಟಿ ಮತ್ತು ಜೆ ಪಾಟೀಲ್ ಕರವಿನಕುಂಪಿ ಅವರು ಉಪಸ್ಥಿತರಿದ್ದರು..

ಕಾರ್ಯಕ್ರಮದ ನಿರೂಪಣೆಯನ್ನು ಎಸ್.ಎಸ್ ತಾರಿಹಾಳ ಮಾಡಿದ್ದು, ವಂದಾರ್ಪಣೆಯನ್ನು ಬೀ.ಬಿ ಹಂದೂರು ನೆರವೇರಿಸಿದ್ದು, ಗ್ರಾಮದ ಮುಖಂಡರು, ರಾಜಕೀಯ ಧುರೀಣರು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗಿಯಾಗಿದ್ದರು…

ವರದಿ ಪ್ರಕಾಶ ಕುರಗುಂದ..