ಬೆಳಗಾವಿಯಲ್ಲಿ ರಾಮಭಕ್ತ ಹನುಮನ ಆರಾಧನೆ…

ಬೆಳಗಾವಿಯಲ್ಲಿ ರಾಮಭಕ್ತ ಹನುಮನ ಆರಾಧನೆ..

ಬೆಳಗಾವಿ : ದಿನಾಂಕ 16/01/2024 ಮುಂಜಾನೆ 8,30 ಸಮಯಕ್ಕೆ ಸರಿಯಾಗಿ ಅಖಂಡ ಅಹೋರಾತ್ರಿ ಹನುಮಾನ ಚಾಲೀಸಾ ಪಠಣ ಕಾರ್ಯಕ್ರಮ ವಿದ್ಯುಕ್ತವಾಗಿ ಹನುಮಾನ ಚಾಲೀಸಾ ಪರಿವಾರ ಮತ್ತು ರಾಮಭಕ್ತರ ಸಮ್ಮುಖದಲ್ಲಿ ಪ್ರಾರಂಭವಾಗಿದೆ.

ಈ ವೇಳೆ ಗೌರವಾಧ್ಯಕ್ಷರಾದ ಮುನಿಸ್ವಾಮಿ ಭಂಡಾರಿ , ಮಾತನಾಡಿ ಕಳೆದ 500ವರ್ಷಗಳ ನಂತರ ಈ ಸಂಭ್ರಮ ಎಲ್ಲರೂ ಸೇರಿ ಆಚರಿಸಲು ಅವಕಾಶ ಸಿಕ್ಕಿದೆ, ರಾಮ ಭಕ್ತ ಹನುಮಂತನ ಆರಾಧನೆ ಮಾಡುವ ಮೂಲಕ ಆಧ್ಯಾತ್ಮ ಸಾಧನೆ ಮಾಡಲು ಅಖಂಡ ಹನುಮಾನ ಚಾಲೀಸಾ ಒಂದು ಅವಕಾಶ.

ಪ್ರತಿ ಮನೆಯ ಪ್ರತಿ ವ್ಯಕ್ತಿ ಇದರಲ್ಲಿ ಭಾಗವಹಿಸಿ ಸಾಧಕರಾಗೋಣ, ಸ್ವತ ನಮ್ಮ ಕುಟಂಬ ಪ್ರತಿನಿತ್ಯ ಭಾಗವಹಿಸುತ್ತೇವೆ ಎಲ್ಲರೂ ಭಾಗವಹಿಸಿ ಹನುಮಾನ ಚಾಲೀಸಾ ಪಠಣ ಮಾಡೋಣ 22 ಜನೇವರಿ ಪ್ರತಿಷ್ಟಾಪನೆಯ ನಿಮಿತ್ತ ಮಾಡುವ ಈ ಭಕ್ತಿಯ ಪಠಣ ಪ್ರಭು ಶ್ರೀರಾಮನ ಚರಣಕ್ಕೆ ಅರ್ಪಿಸಲು ಹೆಚ್ಚು ಜನರು ತಮಗೆ ಅನುಕೂಲ ಆದ ಸಮಯ ಹೆಸರು ನೊಂದಾಯಿಸಿ ಹಗಲು ರಾತ್ರಿ ನಿರಂತರ ಹನುಮಾನ ಚಾಲೀಸಾ ಪಠಣ ಮಾಡೋಣ ಎಂಬ ಕರೆ ನೀಡಿದರು.

ಎಲ್ಲರನ್ನು ಸ್ವಾಗಿತಿಸುತ್ತ ಪ್ರಾಸ್ತಾವಿಕ ಮಾತನಾಡಿದ ಕ್ರಷ್ಣ ಭಟ್ ನಾವು ಎದುರು ನೋಡುತ್ತಿರುವ ಭವ್ಯ ರಾಮಮಂದಿರದ ನೇತೃತ್ವ ವಹಿಸಿದ ಮಾನ್ಯ ಅಶೋಕ ಸಿಂಘಾಲಜಿಯವರು ವಿಶ್ವ ಹಿಂದು ಪರಿಷತ್ತ ಕಾರ್ಯಲಯ ಸಮರಸತಾ ಭವನ ಉದ್ಘಾಟಿಸಿದ್ದಾರೆ.

ಬೆಳಗಾವಿಯ ಎರಡು ಹಿರಿಯ ಪ್ರಚಾರಕರಾದ ಮಾನ್ಯ ಸದಾನಂದಜೀ ಕಾಕಡೆ ಮತ್ತು ಬಾಬುರಾವ ದೇಸಾಯಿಯವರು ಬಹುದಿನದ ಕನಸು ಈ ಭವನವಾಗಿದ್ದು, ಅವರೆಲ್ಲ ಅಯೋಧ್ಯೆಯ ಹೋರಾಟದಲ್ಲಿ ಅಶೋಕ ಸಿಂಘಾಲಜಿಯವರಿಗೆ ಹೆಗಲಿಗೆ ಹೆಗಲುಕೊಟ್ಟು ಪರಿಶ್ರಮ ಪಟ್ಟ ಕಾರಣ ಲಕ್ಷಾಂತರ ಜನರ ತ್ಯಾಗ ಬಲಿದಾನದಿಂದ ಭವ್ಯ ರಾಮಮಂದಿರ ಆಗುತ್ತಿರುವ ಈ ಶುಭ ಸಂದರ್ಭದಲ್ಲಿ ಸಮಾಜದ ಎಲ್ಲ ಬಂದು ಬಗಿನಿಯರು, ತಾಯಿಂದಿರು ಸಮರಸತಾ ಭವನದಲ್ಲಿ ನಡೆಯುವ ಅಖಂಡ ಹನುಮಾನ ಚಾಲೀಸಾ ಪಠಣ ಮಾಡುವ ಮೂಲಕ ಪ್ರಭು ಶ್ರೀರಾಮನ ಚರಣಕ್ಕೆ ಸಮರ್ಪಿಸುವ ಈ ಪುಣ್ಯ ಯಜ್ಞದಲ್ಲಿ ಪ್ರತಿ ಮನೆಯ, ಪ್ರತಿ ವ್ಯಕ್ತಿ ಭಾಗವಹಿಸುವಂತೆ ವಿನಂತಿಸಿದರು.

ಈ ಸಂಧರ್ಭದಲ್ಲಿ ಜೇಠಾಬಾಯಿ ಪಟೇಲ ಹನುಮಾನ ಚಾಲೀಸಾ ಸೇವಾ ಪರಿವಾರದ ಅಧ್ಯಕ್ಷರು, ಮಹಾಪೌರರಾದ ಶೋಭಾ ಸೋಮನ್ನಾಚೆ, ರಾಜಶೇಖರ ಪಾಟೀಲ, ರಾಮ ಭಂಡಾರಿ ರಾಮಜಮ್ನಾನಿ, ರಾಜೇಶ್ವರಿ ಸಂಬರಗೀಮಠ, ಸಂತೋಷ ವಾದ್ವಾ, ಬಿಪಿನಬಾಯಿ ಪಟೇಲ, ಡಾ ಸುಭಾಷ ಪಾಟೀಲ, ಶ್ರೀಕಾಂತ ಕದಮ್, ರೋಹಿತ ರಾವಲ,ಮಹೇಶ ಪೋರವಾಲ, ಸತೀಶ ಬಾಚೀಕರ, ದಿನೇಶ ಪಾಟೀಲ, ಆನಂದ ಕರಲಿಂಗಣ್ಣವರ, ಗಣೇಶ ಚೌಗಲೆ, ನಾಗೇಶ ಕಾಂಬಳೆ, ರಾಘವೇಂದ್ರ ಕಟ್ಟಿ ಹಾಗೂ ನೂರಾರು ರಾಮ ಭಕ್ತರು ಭಾಗವಹಿಸಿದ್ದರು.

ವರದಿ ಪ್ರಕಾಶ್ ಕುರಗುಂದ..