2012ರ ಭ್ರಷ್ಟಾಚಾರ ಆರೋಪದ ಪ್ರಕರಣಕ್ಕೆ ಮರುಜೀವ..
ಶಾಸಕ ಅಭಯ ಪಾಟೀಲರ ಸಮೇತ ಕೆಲವರಿಗೆ ಸರ್ವೋಚ್ಚ ನ್ಯಾಯಾಲಯದ ದ್ವೀಸದಸ್ಯ ಪೀಠದಿಂದ ನೋಟಿಸ್..
ಭ್ರಷ್ಟಾಚಾರದ ವಿರುದ್ಧ ಈ ಹೋರಾಟದಲ್ಲಿ ನ್ಯಾಯ ಸಿಗುವ ಭರವಸೆ ಇದೆ..
ಸಾಮಾಜಿಕ ಹೋರಾಟಗಾರ ಸುಜಿತ ಮುಳಗೋಡ ಸ್ಪಷ್ಟನೆ..
ಬೆಳಗಾವಿ : ಶನಿವಾರ ನಗರದ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೆಳಗಾವಿಯ ಸಾಮಾಜಿಕ ಹೋರಾಟಗಾರ ಸುಜಿತ್ ಮುಳಗೋಡ ಅವರು, ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ ಪಾಟೀಲ ಅವರು ಆದಾಯ ಮೀರಿ ಆಸ್ತಿ ಸಂಪಾದಿಸಿದ್ದಾರೆಂಬ ಆರೋಪದ ಬಗ್ಗೆ ದೂರು ನೀಡಿದ್ದ ಪ್ರಕ್ರಿಯೆಯ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದ್ದಾರೆ..
ಸಾಮಾಜಿಕ ಹೋರಾಟಗಾರ ಸುಜಿತ್ ಮುಳಗೋಡ ಅವರು 2012ರಲ್ಲಿ, ಶಾಸಕ ಅಭಯ ಪಾಟೀಲ ಅವರ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆಯ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲು ಮಾಡಿದ್ದು, ಮಾರ್ಚ್ 2023ರ ವರೆಗೆ ಅದು ವಿಚಾರಣೆ ನಡೆದು, 2023 ಮಾರ್ಚ ತಿಂಗಳಲ್ಲಿ ಉಚ್ಛ ನ್ಯಾಯಾಲಯ ಈ ಪ್ರಕರಣದಲ್ಲಿ ತಾಂತ್ರಿಕ ದೋಷವಿದೆ ಎಂದು, ಪ್ರಕರಣವನ್ನು ತಿರಸ್ಕಾರ ಮಾಡಿತ್ತು.

ಇದಾದ ನಂತರ ಪ್ರಕರಣದ ಮೆರಿಟ್ ವಿಚಾರವನ್ನು ಆಧಾರವಾಗಿಟ್ಟುಕೊಂಡು ಮತ್ತೆ ಲೋಕಾಯುಕ್ತ ಐಜಿಪಿ ಅವರನ್ನು ಭೇಟಿ ಆಗಿ, ಪ್ರಕರಣ ಮುಂದುವರೆಸಲು ಮನವಿ ಮಾಡಲಾಗಿ, ಅವರು ಪ್ರಕರಣದ ಮುಂದಿನ ತನಿಖೆಗಾಗಿ, ಲೋಕಾಯುಕ್ತ ಕಾನೂನು ಘಟಕಕ್ಕೆ ಕಳಿಸಲು, ಜಿಲ್ಲಾ ಲೋಕಾಯುಕ್ತ ಕಚೇರಿಗೆ ಸೂಚಿಸಿದರು, ಆದರೆ ಲೋಕಾಯುಕ್ತ ಕಾನೂನು ಘಟಕದಿಂದ ಪ್ರಕರಣ ಮುಂದಿನ ತನಿಖೆಗೆ ಹೊಗುವದು ವಿಳಂಬವಾಯಿತು..
ಆದಕಾರಣ ದೂರುದಾರಣಾದ ನಾನೇ ಸ್ವತಃ 08/01/2024 ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣದ ಮುಂದಿನ ತನಿಖೆಗಾಗಿ ಅಪೀಲ್ ಮಾಡಿದ್ದು, ಸರ್ವೋಚ್ಚ ನ್ಯಾಯಾಲಯದ ದ್ವೀಪೀಠ ಸದಸ್ಯತ್ವದ ಕಡೆಯಿಂದ ಪ್ರಕರಣ ನಿನ್ನೆ ಬೋರ್ಡಿಗೆ ಬಂದಿದ್ದು, ಶಾಸಕರು, ಲೋಕಾಯುಕ್ತರು, ಹಾಗೂ ಸಭಾಪತಿಯವರಿಗೆ ನೋಟಿಸ್ ಜಾರಿಯಾಗಿದ್ದು, 19/02/2024ಕ್ಕೆ ಪ್ರಕರಣದ ವಿಚಾರಣೆ ನಡೆಯುವದು ಎಂಬ ಮಾಹಿತಿ ನೀಡಿದ್ದಾರೆ..

ನ್ಯಾಯಾಲಯದ ಮೇಲೆ ತುಂಬ ವಿಶ್ವಾಸ ಇದ್ದು ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ನ್ಯಾಯ ಸಿಗುವುದೆಂಬ ಭರವಸೆ ಇದೆ ಎಂದ ಸುಜಿತ್ ಮುಳಗೋಡ್ ಅವರ ಜೊತೆ ಅವರ ನ್ಯಾಯವಾದಿಗಳು ಕೂಡಾ ಈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ..