ಎನ್ಪಿಎಸ್ ಸರ್ಕಾರಿ ನೌಕರರ ಮೊಗದಲ್ಲಿ ಮಂದಹಾಸ ಮೂಡಿಸಿದ ಲೋಕೋಪಯೋಗಿ ಸಚಿವರು..
ನಮ್ಮ ಪಕ್ಷದ ಪ್ರಣಾಳಿಕೆಯಲ್ಲೇ ಇರುವಾಗ ಮಾಡೇ ಮಾಡುತ್ತೇವೆ..
ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟನೆ..
ಬೆಳಗಾವಿ : ಶನಿವಾರ ನಗರದ ಕಾಂಗ್ರೆಸ್ ಭವನದಲ್ಲಿ ಸಾರ್ವಜನಿಕರ ಭೇಟಿಗಾಗಿ ಆಗಮಿಸಿದ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯ ಸರ್ಕಾರದಲ್ಲಿ ಕರ್ತವ್ಯ ನಿರ್ವಹಿಸುವಂತ ಎನ್ಪಿಎಸ್ ನೌಕರರ ಬಹುದಿನಗಳ ಬೇಡಿಕೆಯ ಕುರಿತಾಗಿ ಕೇಳಲಾದ ಪ್ರಶ್ನೆಗೆ ಸಕಾರಾತ್ಮಕವಾಗಿ ಉತ್ತರ ನೀಡಿದ್ದಾರೆ..

ಕೆಲ ದಿನಗಳ ಹಿಂದೆ ರಾಜ್ಯದ ಎನ್ಪಿಎಸ್ ನೌಕರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ, ತಮಗೂ ಕೂಡಾ ಓಪಿಎಸ್ ಜಾರಿಯಾಗಬೇಕು ಎಂಬ ತಮ್ಮ ಬೇಡಿಕೆಯನ್ನು ಇಟ್ಟಿದ್ದು, ಸಿಎಂ ಅವರು ಬರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಅನುಕೂಲಕರ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದು, ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಚರ್ಚೆ ಆಗಲಿಲ್ಲ..
ಅದಕ್ಕಾಗಿ ಈ ವಿಷಯದ ಕುರಿತಾಗಿ ಬರುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಆಗುತ್ತದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ನೌಕರರ ಈ ಬೇಡಿಕೆ ಈಗಾಗಲೇ ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಇದ್ದಿದ್ದು, ಆದಷ್ಟು ಬೇಗ ಸಚಿವ ಸಂಪುಟದಲ್ಲಿ ಚರ್ಚಿಸಿ, ಈ ಬೇಡಿಕೆಯನ್ನು ಪೂರೈಸುವ ಕಾರ್ಯ ಮಾಡುತ್ತೇವೆ ಎಂದಿದ್ದಾರೆ..

ಸಚಿವರ ಈ ಸಕಾರಾತ್ಮಕ ಸ್ಪಂದನೆಯಿಂದ ಎನ್ಪಿಎಸ್ ಸರ್ಕಾರಿ ನೌಕರರಿಗೆ ಸಂತಸವಾಗಿದ್ದು, ಬಹುದಿನಗಳಿಂದ ತಮ್ಮ ಈ ಬೇಡಿಕೆಗಾಗಿ ನಾನಾ ರೀತಿಯ ಹೋರಾಟ ಮಾಡುತ್ತಾ ಬಂದಿರುವ ನೌಕರ ವರ್ಗಕ್ಕೆ ಗೆಲುವಿನ ಭರವಸೆ ಸಿಕ್ಕಂತಾಗಿದೆ..
ವರದಿ ಪ್ರಕಾಶ್ ಕುರಗುಂದ..