ಹೂಗಾರ ಗುರವ, ಜೀರ ಮತ್ತು ಪೂಜಾರ ಸಮಾಜಗಳಿಂದ ಸಚಿವರ ಭೇಟಿ..
ಸಮುದಾಯಗಳಿಂದ ಹೊರತಂದ 2024ರ ಕ್ಯಾಲೆಂಡರ್ ಬಿಡುಗಡೆ..
ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿರುವ ಈ ಸಮುದಾಯಗಳ ಸಮಸ್ಯೆಗಳೇನೆ ಇದ್ದರೂ, ಸರ್ಕಾರ ಸ್ಪಂದಿಸುತ್ತದೆ..
ಸಚಿವ ಸತೀಶ ಜಾರಕಿಹೊಳಿ..
ಗೋಕಾಕ : ರವಿವಾರ ದಿನಾಂಕ 21/01/2024ರಂದು, ರಾಜ್ಯ ಸರ್ಕಾರದ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು ಗೋಕಾಕೀನ ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿದ ಹೂಗಾರ, ಗುರವ, ಜೀರ ಮತ್ತು ಪೂಜಾರ ಸಮಾಜದ ಮುಖಂಡರು ತಮ್ಮ ಸಮುದಾಯದ ಕುರಿತಾಗಿ ಕೆಲ ವಿಷಗಳನ್ನು ಸಚಿವರೊಂದಿಗೆ ಹೇಳಿಕೊಂಡರು..
ಇದೇ ವೇಳೆ ಸಮುದಾಯದ ಮುಖಂಡರು ಸಚಿವರನ್ನು ಸತ್ಕರಿಸಿ, ಸಮುದಾಯಗಳಿಂದ ಹೊರತಂದ ಹೊಸ ವರ್ಷದ 2024ರ ಕ್ಯಾಲೆಂಡರ್ ಅನ್ನು ಸಚಿವರ ಕಡೆಯಿಂದ ಬಿಡುಗಡೆ ಗೊಳಿಸಲಾಯಿತು, ಕ್ಯಾಲೆಂಡರ್ ಬಿಡುಗಡೆ ಮಾಡಿ ಈ ಸಮುದಾಯಗಳ ಸೇವಾ ಸಂಘಗಳು ಮಾಡುವ ಸಾಮಾಜಿಕ ಕಾರ್ಯಗಳ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು..

ಸಮಾಜ ಕಟ್ಟುವ ಉತ್ತಮ ಕೆಲಸ ಮಾಡುವ ಈ ಸಮುದಾಯಗಳ ಸಮಸ್ಯೆಗಳು ಏನಾದರೂ ಇದ್ದರೆ, ನಮ್ಮ ಸರ್ಕಾರ ಅವುಗಳಿಗೆ ಸ್ಪಂದಿಸಿ, ಬಹೇಹರಿಸುತ್ತದೆ, ಈ ಸಮುದಾಯಗಳಿಂದ ನಾವು ಕೂಡಾ ಸದಾ ಜೋತೆಯಾಗಿರುತ್ತೇವೆ ಎಂದರು..
ಈ ಸಂದರ್ಭದಲ್ಲಿ ಹೂಗಾರ ಸಮುದಾಯದ ಪದಾಧಿಕಾರಿಗಳಾದ ಪ್ರಭು ಹೂಗಾರ ಹಾಗೂ ಇತರ ಸಮಾಜದ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು..
ವರದಿ ಪ್ರಕಾಶ್ ಕುರಗುಂದ..