ಯುವ ಬೆಳಗಾವಿ ಫೌಂಡೇಶನ್ ವತಿ ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ..
ಬೆಳಗಾವಿ : ಮಂಗಳವಾರ ದಿನಾಂಕ 23/01/2024ರಂದು ನಗರದ ರಾಣಿ ಪಾರ್ವತಿ ದೇವಿ ಮಹಾವಿದ್ಯಾಲಯದಲ್ಲಿ ಆರ್ಥಿಕವಾಗಿ ಹಿಂದುಳಿದ ವಿಧ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ಮಾಡಲಾಗಿದೆ..
ಅಲನ್ ವಿಜಯ್ ಮೋರೆ ಅವರ ನೇತೃತ್ವದ ಹಾಗೂ ಸಮರ್ಥ ನಾಯಕತ್ವದಲ್ಲಿ ಯುವ ಬೆಳಗಾವಿ ಫೌಂಡೇಶನ್ ನಗರದಲ್ಲಿ ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತಿದ್ದು ಸಮಾಜ ಸೇವೆಯಲ್ಲಿ ಅಗಾಧವಾದ ಕಾರ್ಯ ಮಾಡುತ್ತಿದೆ..
ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಅನಾಥ ರಕ್ಷಣೆ, ರಸ್ತೆ ದುರಸ್ತಿ, ಅಶಕ್ತರಿಗೆ ಸಹಾಯ ಹೀಗೆ ಹಲವಾರು ಸಮಾಜಮುಖಿ ಕಾರ್ಯ ಮಾಡುತ್ತಿದ್ದು, ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ..
ಅದೇರೀತಿ ಇತ್ತೀಚೆಗೆ ಬೆಳಗಾವಿಯ ಆರ್ಪಿಡಿ ಕಾಲೇಜಿನಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಯ ನೆರವಿಗೆ ಬಂದ ಸಂಸ್ಥೆ, ತನ್ನ ಉದಾತ್ತ ಪ್ರಯತ್ನದಲ್ಲಿ, ಮಹಾವಿದ್ಯಾಲಯದ ವಿಧ್ಯಾರ್ಥಿಗಳಾದ ಅನಿಕೇತ್ ಲಾಡ್, ಅಮೇಶ ದೇಸಾಯಿ, ಲಕ್ಕಿ ಸೋಲಂಕಿ, ಮತ್ತು ಸಂದೀಪ್ ಸೋಮನಟ್ಟಿ ಎಂಬ ವಿಧ್ಯಾರ್ಥಿಗಳಿಗೆ ಅವರ ಕಾಲೇಜು ಪ್ರಾಂಶುಪಾಲರಿಗೆ ಅಗತ್ಯ ಶುಲ್ಕವನ್ನು ನೀಡುವುದರ ಮೂಲಕ, ಬಡ ವಿಧ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾದರು.
ಈ ಮಹತಕಾರ್ಯವು ಶಿಕ್ಷಣವನ್ನು ಪ್ರೋತ್ಸಾಹಿಸಲು ಮತ್ತು ಅಗತ್ಯವಿರುವವರಿಗೆ ಉಜ್ವಲ ಭವಿಷ್ಯವನ್ನು ಬೆಳೆಸಲು ಫೌಂಡೇಶನ್ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ವರದಿ ಪ್ರಕಾಶ ಕುರಗುಂದ..