“ಸಂವಿಧಾನ ಜಾಗೃತಿ ಜಾಥಾ” ಅಭಿಯಾನಕ್ಕೆ ಅದ್ಬುತ ಪ್ರತಿಕ್ರಿಯೆ..
ಸಾರ್ವಜನಿಕರಿಗೆ ಸದುಪಯೋಗವಾದ “ಜಾಗೃತಿ ಜಾಥಾ” ಅಭಿಯಾನ..
ಬೆಳಗಾವಿ : ಇದೆ ಜನೆವರಿ 26ರ ಗಣರಾಜ್ಯೋತ್ಸವ ದಿನದಂದು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಸಿದ್ಧವಾದ “ಸಂವಿಧಾನ ಜಾಗೃತಾ ಜಾಥಾ” ವಾಹನವನ್ನು, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ವೀಕ್ಷಣೆ ಮಾಡಿ, ಚಾಲನೆ ನೀಡಿ, ಅದರಲ್ಲಿ ಪಯಣಿಸಿ, ಸಂವಿಧಾನದ ಜಾಗೃತಿಯ ಮಹತ್ವದ ಬಗ್ಗೆ ಮಾತನಾಡಿದ್ದರು.

ಅದೇ ದಿವಸ ಜಾಗೃತಿ ಜಾಥಾ ವಾಹನವು ಬೆಳಗಾವಿ ನಗರದ ಮಹತ್ವಪೂರ್ಣ ಸ್ಥಳಗಳಿಗೆ ಸಂಚರಿಸಿ, ಮಹಾನಗರ ಪಾಲಿಕೆಗೂ ಆಗಮಿಸಿದಾಗ ಅಲ್ಲಿಯ ಸಿಬ್ಬಂದಿಗಳು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ವಾಹನವನ್ನು ಸ್ವಾಗತ ಮಾಡಿಕೊಂಡು, ಸಂವಿಧಾನದ ಬಗೆಗೆ ಇರುವ ಉಲ್ಲೇಕಗಳನ್ನೆಲ್ಲ ಆಸಕ್ತಿಯಿಂದ ಅರಿತುಕೊಂಡು, ಇಲಾಖೆಗಳು ಮಾಡಿದ ಈ ಮೌಲ್ಯಯುತ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು..
ಅದೇ ರೀತಿ “ಸಂವಿಧಾನ ಜಾಗೃತಿ ಜಾಥಾ” ವಾಹನವು ಕಳೆದ ಎರಡು ದಿನಗಳಿಂದ ಬೆಳಗಾವಿ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಚರಿಸುತ್ತಾ, ತನ್ನ ವೈವಿಧ್ಯಮಯ, ಆಕರ್ಷಕ ಬಿತ್ತಿ ಚಿತ್ರಗಳು, ಅಲಂಕಾರಿಕ ಬರಹಗಳಿಂದ ಸಂವಿಧಾನದ ಕುರಿತಾದ ಅನೇಕ ವಿಷಯಗಳನ್ನು ಸಾಮಾನ್ಯರಿಗೆ ತಿಳಿಯುವಂತೆ ಮಾಡಿದ್ದು ವಿಶೇಷವಾಗಿದೆ..

ಸಂತಿಬಸ್ತವಾಡ, ದೆಸೂರ, ವಾಗವಡೆ, ಮಾರ್ಕಂಡೇಯ ನಗರ, ಇನ್ನಿತರ ಗ್ರಾಮಗಳಲ್ಲಿ ಸಂಚರಿಸಿ, ಅಲ್ಲಿರುವ ಗ್ರಾಮಸ್ಥರಿಗೆ, ಪಂಚಾಯತಿ ಸದಸ್ಯರು ಅಧಿಕಾರಿ ಹಾಗೂ ಸಿಬ್ಬಂದಿಗೆ, ಸಂಘ-ಸಂಸ್ಥೆಗಳ ಸದಸ್ಯರಿಗೆ, ಯುವಕ ಯುವತಿಯರಿಗೆ, ಸಮಸ್ತ ಗ್ರಾಮಸ್ಥರಿಗೆ ಸಂವಿಧಾನದ ಸಾರ ಮತ್ತು ಅದರ ಪ್ರಾಮುಖ್ಯತೆ ಬಗ್ಗೆ ತಿಳಿದುಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿತ್ತು..
ಈ ಒಂದು ಅತ್ಯವಶ್ಯಕ ಅಭಿಯಾನವನ್ನು ಪ್ರಾರಂಭಿಸಿ, ಸಂವಿಧಾನದ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವ, ಬೆಳಗಾವಿಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾರ್ವಜನಿಕರು ಈ ಅಭಿಯಾನದ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾತಿದೆ..
ವರದಿ ಪ್ರಕಾಶ ಕುರಗುಂದ..