ಪಟ್ಟಣ ಸಹಕಾರ ಬ್ಯಾಂಕುಗಳ ಕ್ರಿಯಾಶೀಲತೆಗೆ ಕಾರ್ಯಾಗಾರಗಳು ಅತ್ಯವಶ್ಯ..
ಬೆಳಗಾವಿ : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ಬೆಳಗಾವಿ ಇವರ ಆಶ್ರಯದಲ್ಲಿ ನಗರದ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ಆಯೋಜಿಸಿದ್ದ ಬೆಳಗಾವಿ ವಿಭಾಗದ ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯ ಕಾರ್ಯನಿರ್ವಾಹಕರು ಮತ್ತು ಹಿರಿಯ ಅಧಿಕಾರಿಗಳ ಸರ್ವತೋಮುಖ ಬೆಳವಣಿಗೆಗಾಗಿ ಒಂದು ದಿನದ ರಾಜ್ಯಮಟ್ಟದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು..

ಸ್ಪರ್ಧಾತ್ಮಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಹಕಾರಿ ಬ್ಯಾಂಕುಗಳು ರಾಷ್ಟ್ರೀಕೃತ ಬ್ಯಾಂಕುಗಳ ಜೊತೆಗೆ ಪೈಪೋಟಿ ಅವಶ್ಯಕವಾಗಿದೆ ಆದ್ದರಿಂದ ತಾಲೂಕ ಜಿಲ್ಲಾ ರಾಜ್ಯ ಮಟ್ಟದ ತರಬೇತಿಗಳನ್ನು ಪ್ರತಿ ಜಿಲ್ಲೆಯಲ್ಲಿ ನೀಡಲಾಗುತ್ತಿದೆ ಎಂದರು.
ರಾಜ್ಯದ ಇತರ ಜಿಲ್ಲೆಗಳನ್ನು ಹೋಲಿಕೆ ಮಾಡಿದಾಗ ಬೆಳಗಾವಿ ಜಿಲ್ಲೆ ಕ್ರೆಡಿಟ್, ಅರ್ಬನ್, ಮಿಲ್ಕ್, ಶುಗರ್
ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರಿ ಸಂಸ್ಥೆಗಳು ಅತ್ಯುತ್ತಮವಾಗಿ ಅಭಿವೃದ್ಧಿ ಹೊಂದಿವೆ ಜೊತೆಗೆ ಸಹಕಾರಿ ಸಂಸ್ಥೆ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಸೈಬರ್ ಕ್ರೈಂ ಹೆಚ್ಚಾಗಿದ್ದು, ಇವುಗಳನ್ನು ನಿಯಂತ್ರಿಸುವಲ್ಲಿ ಬೆಳಗಾವಿ ಯೂನಿಯನ್ ಮುಂಚೂಣಿಯಲ್ಲಿದೆ ಎಂದರು.

ಯಾವುದೇ ಒಂದು ಸಂಸ್ಥೆ ಬೆಳೆಯಬೇಕಾದರೆ ಅಲ್ಲಿರುವ ಆಡಳಿತ ವರ್ಗಕ್ಕಿಂತ ಮುಖ್ಯ ಕಾರ್ಯನಿರ್ವಾಹಕರು, ಹಿರಿಯ ಕಿರಿಯ ಅಧಿಕಾರಿ, ಸಿಬ್ಬಂದಿಗಳ ಕಾರ್ಯವೈಖರಿ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ್ ಮಾತನಾಡಿ,
ಬೆಳಗಾವಿ ಜಿಲ್ಲೆಯ ಚಂದರಗಿಯ ಕ್ರೀಡಾ ಶಾಲೆ, ಘಟಪ್ರಭಾ ಜೆಜೆ ಆಸ್ಪತ್ರೆ, ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ, ಸಂತಿ ಬಸ್ತವಾಡದಲ್ಲಿರುವ ಭತ್ತದ ಸಹಕಾರಿ ಸಂಘ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುವುದರ ಮೂಲಕ ಬೆಳಗಾವಿ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

ಮುಖ್ಯ ಕಾರ್ಯನಿರ್ವಾಹಕರು ಮತ್ತು ಹಿರಿಯ ಕಿರಿಯ ಅಧಿಕಾರಿಗಳು ಉತ್ತಮ ಸೇವೆ ಸಲ್ಲಿಸಿದ್ದೀರಿ ಆದರೆ
ಇನ್ನೂ ಹೆಚ್ಚಿನ ಮಾಹಿತಿ ಪಡೆದು ಸಹಕಾರಿ ಬ್ಯಾಂಕುಗಳನ್ನು ರಾಜ್ಯ ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಶೈಲಾ ಬಿ. ವಿ ಮಾತನಾಡಿ
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಮುಖ್ಯ ಉದ್ದೇಶ ಶಿಕ್ಷಣ, ತರಬೇತಿ, ಪ್ರಚಾರ ಆದ್ದರಿಂದ ಮಹಾಮಂಡಳ ತರಬೇತಿ ನೀಡುವ ಮೂಲಕ ಶಿಕ್ಷಣ ನೀಡುತ್ತಿದೆ. ಅದರಂತೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಪ್ರಚಾರಕ್ಕಾಗಿ ವಾರಪತ್ರಿಕೆಯನ್ನು ತೆರೆಯಲಾಗಿದೆ ಇದರಲ್ಲಿ ಸರಕಾರದ ಕಾಯ್ದೆ, ಸುತ್ತೋಲೆ ಕಾರ್ಯಕ್ರಮ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಉಪನ್ಯಾಸಕ ಚಾರ್ಟೆಡ್ ಅಕೌಂಟೆಂಟ್ ಬಿ ವಿ ರವೀಂದ್ರ ಅವರು ಜಿ.ಎಸ್.ಟಿ, ಇನ್ಕಮ್ ಟ್ಯಾಕ್ಸ್, ಟಿ.ಡಿ.ಎ ಗಳ ಬಗ್ಗೆ ಉಪನ್ಯಾಸ ನೀಡುವ ಮೂಲಕ ಸಂಪೂರ್ಣ ಮಾಹಿತಿ ನೀಡಿದರು.
ಒತ್ತಡ ರಹಿತ ಜೀವನ ಹಾಗೂ ಸಕಾರಾತ್ಮಕ ಚಿಂತನೆ ಕುರಿತು ಎಚ್ಎ ಜಯಸಿಂಹ ಅವರು ಮಾಹಿತಿ ನೀಡಿದರು,
ಸೈಬರ್ ಕ್ರೈಂ ಕುರಿತು ನಿಂಗಪ್ಪ ಮಾಧರ್ ಅವರು ತರಬೇತಿ ನೀಡಿದರು.

ಈ ಸಂದರ್ಭದಲ್ಲಿ ಬೆಳಗಾವಿ ಸಹಕಾರಿ ಸಂಘಗಳ ಸಹಾಯಕ ನಿರ್ಬಂಧಕ ರವೀಂದ್ರ ಪಾಟೀಲ, ಸಂಪನ್ಮೂಲ ವ್ಯಕ್ತಿಗಳು ಎಚ್ ಎ ಜಯಸಿಂಹ, ನಿಂಗಪ್ಪ ಮಾದರ, ಸೇರಿದಂತೆ ಇತರರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ..