ಸೌಹಾರ್ದ ಕರ್ನಾಟಕ ವೇದಿಕೆಯಿಂದ ಹುತಾತ್ಮ ದಿನದ ವಿಶೇಷ ಆಚರಣೆ..

ಸೌಹಾರ್ದ ಕರ್ನಾಟಕ ವೇದಿಕೆಯಿಂದ ಹುತಾತ್ಮ ದಿನದ ವಿಶೇಷ ಆಚರಣೆ..


ಸರ್ವ ಧರ್ಮದ ಸೌಹಾರ್ದತೆಯಿಂದ ಬಾಳಿದರೆ ದೇಶದ ಪರಂಪರೆ ಉಳಿಯುವುದು..

ಕಾರಂಜಿಮಠದ ಶ್ರೀಗಳ ಕಿವಿಮಾತು..

ಬೆಳಗಾವಿ : ದೇಶದ ಏಳಿಗೆಗಾಗಿ ಎಲ್ಲ ಧರ್ಮಗಳನ್ನು ಗೌರವಿಸಿ, ಪ್ರೀತಿಸುವ ಮನೋಭಾವನೆ ಬೆಳೆಸಿಕೊಳ್ಳೋಣ ಜೊತೆಗೆ ನಾವೆಲ್ಲರೂ ಒಗ್ಗಟ್ಟಾಗಿ ಸೌಹಾರ್ದತೆಯಿಂದ ಬದುಕಿದರೆ ಮಾತ್ರ ನಮ್ಮ ಪರಂಪರೆ ಉಳಿಯಲು ಸಾಧ್ಯ ಎಂದು ಕಾರಂಜಿಮಠದ ಗುರುಸಿದ್ದ ಮಹಾಸ್ವಾಮಿಗಳು ತಿಳಿಸಿದರು.

ಇಲ್ಲಿನ ‌ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸೌಹಾರ್ದ ಕರ್ನಾಟಕ ವೇದಿಕೆಯ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನದ ಅಂಗವಾಗಿ ಸೌಹಾರ್ದತಾ ಮಾನವ ಸರಾಪಳಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ದೇಶದಲ್ಲಿ ಸುಖಃಶಾಂತಿ ನೆಮ್ಮದಿ ನೆಲೆಸಬೇಕಾಗಿದೆ. ಆದ್ದರಿಂದ ಸರ್ವಧರ್ಮಗಳ ಸಮಾಜ ಸುಧಾರಕರು, ಚಿಂತಕರು ಒಗ್ಗಟ್ಟಾಗಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ನಡೆಯಬೇಕಾಗಿದೆ ಎಂದರು.

ಮೌಲಾನಾ ಮುಸ್ತಾಕ್ ಅಹಮ್ಮದ್ ಅಶ್ರಪ್ ಮಾತನಾಡಿ, ನೋಟಿನ ಮೇಲೆ ದೇವರ ಪೋಟೋ ಹಾಕುವುದರಿಂದ ದೇಶದ ಧರ್ಮಗಳನ್ನು ಬೇರೆ-ಬೇರೆ ಮಾಡಲಾಗುತ್ತಿದೆ. ಇದು ಸರಿಯಲ್ಲ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಗಾಂಧಿಜೀಯವರ ಭಾವಚಿತ್ರವೆ ಇರಬೇಕೆಂದರು.

ಕ್ರೈಸ್ತ ಪಾದ್ರಿ ಡಾ. ಪಾಧರ್ ಮೆನಿನೊ ಗೋನ್ಸಾಲ್ವೀಸ್ ಮಾತನಾಡಿ, ಪ್ರಕೃತಿ ಸೌಂಧರ್ಯವನ್ನು ಪ್ರೀತಿಸುವ ಉತ್ತಮ ವ್ಯಕ್ತಿ ನಾವಾಗಬೇಕು ಹರತು, ಪ್ರಕೃತಿ ನೀಡಿರುವ ಧರ್ಮಗಳನ್ನು ಒಂದೇ ಧರ್ಮಕ್ಕೆ ಸೀಮಿತಗೊಳಿಸಿ ನಾಡಿನಲ್ಲಿ ಸೌಹಾರ್ದತೆ ಹಾಳು ಮಾಡಬಾರದು ಎಂದು ವಿಷಾದ ವ್ಯಕ್ತಪಡಿಸಿದರು.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾತ್ಮಾ ಗಾಂಧಿಜೀಯವರು ಸಮಾಜದ ಸುಧಾರಣೆಗಾಗಿ ಹೋರಾಟ ಮಾಡಿದ್ದಾರೆ‌. ಸಮಾಜದಲ್ಲಿ ಜಾತಿ, ಧರ್ಮಗಳನ್ನು ಬಿಟ್ಟು ಬಸವಣ್ಣನವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗೋಣ ಎಂದರು.

ಕಾರ್ಮಿಕ ಜಿಲ್ಲಾ ಕಾರ್ಯದರ್ಶಿ, ಜೆ.ಎಮ್ ಜೈನೆಕರ್ ಮಾತನಾಡಿ, ದೇವರ ಹೆಸರಿನಲ್ಲಿ ಧರ್ಮ ಒಡೆಯುವ ಮನಸ್ಥಿತಿ ನಿರ್ಮಾಣವಾಗುತ್ತಿದೆ ಇದನ್ನು ತಡೆಯಲು ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಪರಂಪರೆಯ ಸೌಹಾರ್ದತೆಯನ್ನು ಉಳಿಸೋಣ ಎಂದರು.

ಬಳಿಕ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಮಹತ್ಮ ಗಾಂಧೀಜಿಯವರ ಹುತಾತ್ಮ ದಿನದ ಅಂಗವಾಗಿ ಸೌಹಾರ್ದ ಕರ್ನಾಟಕ ಸಂಘಟನೆಯಿಂದ ಸೌಹಾರ್ದ ಮಾನವ ಸರಪಳಿ ಅಭಿಯಾನದಲ್ಲಿ ನೂರಾರು ಜನರು ಭಾಗಿಯಾಗಿ ಮಾನವ ಸರಪಳಿಗೆ ಕೈಜೋಡಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಸರಜೂ ಕಾಟ್ಕರ್‌, ವಾಯ್‌ ಬಿ.ಹಿಮ್ಮಡಿ, ನಾಗೇಶ ಸಾತೇರಿ ಸೇರಿದಂತೆ ಇತತರು ಇದ್ದರು.

ವರದಿ ಪ್ರಕಾಶ ಕುರಗುಂದ..