ಮಹಾಪೌರ ಸ್ಥಾನಕ್ಕೆ 2, ಉಪಮಹಪೌರ ಸ್ಥಾನಕ್ಕೆ 4, ನಾಮಪತ್ರ ಸಲ್ಲಿಕೆ…

ರಂಗೇರಿದ ಮಹಾಪೌರ ಹಾಗೂ ಉಪಮಹಪೌರ ಚುನಾವಣೆ..

ಮಹಾಪೌರ ಸ್ಥಾನಕ್ಕೆ 2, ಉಪಮಹಪೌರ ಸ್ಥಾನಕ್ಕೆ 4, ನಾಮಪತ್ರ ಸಲ್ಲಿಕೆ..

ಬೆಳಗಾವಿ : ಗುರುವಾರ ಬೆಳಗಾವಿ ಪಾಲಿಕೆಯ ಮಹಾಪೌರ ಹಾಗೂ ಉಪಮಹಾಪೌರ ಚುನಾವಣೆ ನಡೆಯುತ್ತಿದ್ದು , ಎಲ್ಲಾ ಜನಪ್ರತಿನಿಧಿಗಳು ಹಾಗೂ ನಗರ ಸೇವಕರು ಈ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದು, ಅತ್ಯಂತ ಕುತೂಹಲದಿಂದ ಕೂಡಿದ ಚುನಾವಣಾ ಪ್ರಕ್ರಿಯೆಯಂತೆ ಬಾಸವಾಗಿತ್ತು..

ಬಿಜೆಪಿ ಪಕ್ಷದ ನಗರ ಸೇವಕರ ಬಹುಮತ ಇರುವ ಬೆಳಗಾವಿ ಪಾಲಿಕೆಯಲ್ಲಿ, ಈ ಹಿಂದೆ ಮಹಾಪೌರ ಹಾಗೂ ಉಪಮಹಪೌರ ಬಿಜೆಪಿಯ ಅಭ್ಯರ್ಥಿಗಳೇ ಆಗಿದ್ದರು, ಈಗ ಮಹಾಪೌರ ಸ್ಥಾನಕ್ಕೆ ಮಹಿಳಾ ಎಸ್ಸಿ ಮೀಸಲು ಇರುವದರಿಂದ, ಬಿಜೆಪಿಯ ಎರಡು ಅಭ್ಯರ್ಥಿಗಳು ಈ ಮಹಾಪೌರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುತ್ತಾರೆ..

ಬಿಜೆಪಿ ನಗರ ಸೇವಕಿ ಲಕ್ಷ್ಮಿ ರಾಠೋಡ ಹಾಗೂ ಸವಿತಾ ಕಾಂಬ್ಳೆ ಅವರು ಮೆಯೇರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಉಪ ಮಹಾಪೌರ ಸ್ಥಾನ ಸಾಮಾನ್ಯ ವರ್ಗಕ್ಕೆ ಮಿಸಲಿದ್ದು, ಒಟ್ಟು ನಾಲ್ಕು ನಾಮಪತ್ರಗಳು ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಾಗಿದ್ದು, ಅದರಲ್ಲಿ ಆನಂದ ಚೌಹಾಣ್, ಮಾಧವಿ ರಂಗುಚೆ, ಶಹಮುಬ್ಬಿನ್ ಪಠಾಣ್, ಜ್ಯೋತಿ ಕಡೋಳ್ಕರ ನಾಮಪತ್ರ ಸಲ್ಲಿಸಿರುವ ಮಾಹಿತಿ ಇದೆ..

ಈಗ 11 ಗಂಟೆಯಿಂದ 1 ಗಂಟೆ ವರೆಗೆ ನಾಮಪತ್ರ ವಾಪಸ ಪಡೆಯುವ ಕಾಲಾವಕಾಶ ಇದ್ದು, ಒಂದರ ನಂತರ ಬಹುಮತದ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುವವರೆಗೆ ಕಾದು ನೋಡಬೇಕಾಗಿದೆ..

ವರದಿ ಪ್ರಕಾಶ ಕುರಗುಂದ..