ಮಹಾರಾಷ್ಟ್ರ ಪರವಾಗಿದ್ದ ಸೂಚನಾ ಫಲಕಗಳ ವಿರುದ್ಧ ಕಿಡಿಕಾರಿದ ಕನ್ನಡಿಗರು…

ಮಹಾರಾಷ್ಟ್ರ ಪರವಾಗಿದ್ದ ಸೂಚನಾ ಫಲಕಗಳು ವಿರುದ್ಧ ಕಿಡಿಕಾರಿದ ಕನ್ನಡಿಗರು..

ತಕ್ಷಣವೇ ಅವುಗಳನ್ನು ತೆರವು ಗೊಳಿಸುತ್ತೇವೆ..

ಪಾಲಿಕೆಯ ಅಧಿಕಾರಿಗಳ ಸ್ಪಷ್ಟನೆ..

ಬೆಳಗಾವಿ : ಸರಕರಿ ಆದೇಶದಂತೆ ವಾಣಿಜ್ಯ ಮಳಿಗೆಗಳು ಹಾಗೂ ಅಂಗಡಿಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಇರಬೇಕೆಂದು ರಾಜ್ಯ ಸರಕಾರ ನೀಡಿದ ಆದೇಶದ ಗಡುವು ಮುಗಿದರೂ ಕೂಡಾ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ಮಾಡದೆ ಇರುವುದನ್ನು ಖಂಡಿಸಿ ಕರುನಾಡು ವಿಜಯಸೇನೆ ವತಿಯಿಂದ ಗುರುವಾರ ಪಾಲಿಕೆಯ ಎದುರಿಗೆ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಸರಕಾರದ ವಿರುದ್ಧ ಘೋಷಣೆ ಮೊಳಗಿಸಿದ ಕನ್ನಡ ಪರ ಹೋರಾಟಗಾರರು ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿ ನಗರದ ಸಮಾದೇವ ಗಲ್ಲಿಯ ಮಾರುತಿ ದೇವಸ್ಥಾನ ಎದುರುಗಡೆ ಇರುವ ಸಂಯುಕ್ತ ಮಹಾರಾಷ್ಟ್ರ ಚೌಕ ಎಂಬ ನಾಮಫಲಕ, ಅನಗೋಳ ಸೇರಿದಂತೆ ವಿವಿಧಡೆ ಮಹಾರಾಷ್ಟ್ರ ರಾಜ್ಯದ ಪರವಾಗಿ ನಾಮಫಲಕಗಳ ಇದ್ದು, ತಕ್ಷಣ ಅವುಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಸರಕಾರದ ಗಡವು ಮುಗಿದಿದ್ದರೂ ಕೂಡ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿರುವುದಿಲ್ಲ ಒಂದು ವೇಳೆ ಕಾರ್ಯಾಚರಣೆ ಕೈಗೊಂಡಿದ್ದರೆ ಅದರ ಸಂಪೂರ್ಣ ಮಾಹಿತಿಯನ್ನು ನಮಗೆ ಲಿಖಿತ ರೂಪದಲ್ಲಿ ನೀಡಿ ಎಂದು ಕನ್ನಡ ಪರ ಹೋರಾಟಗಾರರು ಒತ್ತಾಯಿಸಿದರು.

ಈ ವೇಳೆ ಕರುನಾಡು ವಿಜಯಸೇನೆ ಯುವ ಘಟಕದ ಉಪಧ್ಯಕ್ಷ ಅನಿಲ ದಡ್ಡಿ ಮಾತನಾಡಿ ಪಾಕಿಸ್ತಾನ್‌ ಜಿಂದಾಬಾದ್ ಎಂದು ಘೋಷಣೆ ಕೂಗಿದವರ ವಿರುದ್ದ ತಕ್ಷಣಕ್ಕೆ ಕ್ರಮ ತೆಗೆದುಕೊಳ್ಳುವ ನೀವುಗಳು ಕರ್ನಾಟಕದಲ್ಲಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಹಾಗೂ ಮಹಾರಾಷ್ಟ್ರನಾಮಫಲಕಗಳನ್ನು ಅಳವಡಿಸಿ ವರ್ಷಗಳು ಕಳೆದರೂ ಕೂಡಾ ಯಾಕೇ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹರಿಹಾಯ್ದರು.

ನೀವು ತಕ್ಷಣ ಇತರೆ ಭಾಷೆಗಳಿಂದ ಕೂಡಿರುವ ನಾಮಫಲಕಗಳನ್ನು ತೆರೆವುಗೊಳಿಸದೆ ಇದ್ದರೆ ಕರುನಾಡ ವಿಜಯಸೇನೆ ಈ ಕೂಡಲೇ ಕಾರ್ಯಾಚರಣೆಗೆ ಇಳಿಯಬೇಕಾಗುತ್ತದೆ. ಈ ವೇಳೆ ಯಾವುದೇ ರೀತಿಯ ಅವಗಡ ಸಂಭವಿಸಿದರೆ ಇದಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳ ನೇರವಾಗಿ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಅದರಂತೆ ಇನ್ನೂ ಮುಂದೆ ಕಡ್ಡಾಯವಾಗಿ ಎಲ್ಲ ವಾಣಿಜ್ಯ ಮಳಿಗೆಗಳು ಹಾಗೂ ಎಲ್ಲಾ ಸರಕಾರಿ ಕಚೇರಿಯಗಳು, ಆಸ್ಪತ್ರೆ, ಬ್ಯಾಂಕುಗಳ ನಾಮಫಲಕಗಳ ಮೇಲೆ ಕಡ್ಡಾಯವಾಗಿ ಕನ್ನಡವನ್ನು ಅಳವಡಿಸಬೇಕೆಂದು ಆಗ್ರಹಿಸಿದರು.

ಕರುನಾಡು ವಿಜಯಸೇನೆ ಯುವ ಘಟಕದ ಅಧ್ಯಕ್ಷ ಸಂಪತ್ತ ದೇಸಾಯಿ, ಯುವ ಘಟಕದ ಉಪಧ್ಯಕ್ಷ ಅನಿಲ ದಡ್ಡಿ ಕನ್ನಡಪರ ಹೋರಾಟಗಾರ್ತಿ ಕಸ್ತೂರಿಬಾಯಿ ಶೈಲಾ ಕಾಂಬಳೆ ಸೇರಿದಂತೆ ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದರು.

ವರದಿ ಪ್ರಕಾಶ ಕುರಗುಂದ..