ನಾವೀನ್ಯತೆಯಿಂದ ಗ್ರಾಹಕರನ್ನು ಕೈಬೀಸಿ ಕರೆಯುತ್ತಿರುವ ಬೆಳಗಾವಿಯ ಮಲಬಾರ್ ಗೋಲ್ಡ್..
ಕೆಜಿಎಪ್ ನಾಯಕಿ ಶ್ರೀನಿಧಿ ಶೆಟ್ಟಿ ಅವರಿಂದ ಚಾಲನೆ..
ಬೆಳಗಾವಿ : ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಗರದ ಕಾಲೇಜ್ ರಸ್ತೆಯಲ್ಲಿರುವ ಮಲಬಾರ್ ಚಿನ್ನ ಮತ್ತು ವಜ್ರದ ಮಾರಾಟ ಮಳಿಗೆಯನ್ನು ನವೀಕರಣಗೊಳಿಸಿದ್ದು, ಕನ್ನಡ ಚಿತ್ರರಂಗದ ಖ್ಯಾತ ನಟಿ ಶ್ರೀನಿಧಿ ಶೆಟ್ಟಿ ಅವರಿಂದ ಮಳಿಗೆಗೆ ಚಾಲನೆ ದೊರಕಿದೆ..

ಬೆಳಿಗ್ಗೆಯಿಂದಲೆ ಮಲಬಾರ್ ಚಿನ್ನ ಮತ್ತು ವಜ್ರದ ಮಾರಾಟ ಮಳಿಗೆಗೆ ನೂರಾರು ಗ್ರಾಹಕರು ಆಗಮಿಸಿದ್ದು, ಹೊಸ ವಿನ್ಯಾಸದ, ವಿವಿಧ ಬಗೆಯ ಹೊಸ ಶೈಲಿಯ ಆಭರಣಗಳಿಂದ ಕೂಡಿದ ಗ್ರಾಹಕ ಆಕರ್ಷಣೆಯ ಈ ಶೋ ರೂಮ್ಗೆ ಜನಸಾಗರವೇ ಜಮೆ ಆಗಿತ್ತು..
ಸಮಯಕ್ಕೆ ಸರಿಯಾಗಿ ಮುಖ್ಯ ಅತಿಥಿಯಾಗಿ ಆಗಮಿಸಿದ ನಟಿ ಶ್ರೀನಿಧಿ ಶೆಟ್ಟಿ ಅವರು, ಆಭರಣ ಮಳಿಗೆಗೆ ಆಗಮಿಸಿ, ಎಲ್ಲರಿಗೂ ಶುಭಾಶಯ ತಿಳಿಸಿ, ಹೊಸ ವಿನ್ಯಾಸದ ಮಳಿಗೆಗೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು, ಅದೇ ರೀತಿ ಸೇರಿದ ಸಾವಿರಾರು ಅಭಿಮಾನಿಗಳೊಂದಿಗೆ ಫೋಟೋ ತೆಗೆಸಿಕೊಂಡು, ಅಮ್ಮ ಅಭಿಮಾನಿಗಳನ್ನು ಸಂತಸ ಪಡಿಸಿದರು..

ಕೊನೆಗೆ ಶೋ ರೂಮ್ ಹೊರಗಡೆ ಹಾಕಿದ ಭವ್ಯ ವೇದಿಕೆಯಲ್ಲಿ ನೆರೆದ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ನಟಿ, ಬೇಳಗಾವಿಗರ ಪ್ರೀತಿಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಎಲ್ಲರಿಗೂ ಪ್ರೀತಿಯಿಂದ ನಮಸ್ತೆ, ಹೈ ಎನ್ನುತ್ತಾ, ಪ್ಲೈ ಕಿಸ್ ಕೊಟ್ಟು ತಮ್ಮ ಕೃತಜ್ಞತೆ ತಿಳಿಸಿದರು.
ಮಲಬಾರ್ ಶೋ ರೂಂ ಬಗ್ಗೆ ಮಾತನಾಡಿದ ಶ್ರೀನಿಧಿ ಶೆಟ್ಟಿ ಅವರು, ಬೆಳಗಾವಿಯಲ್ಲಿ ಇದೊಂದು ಅತ್ಯುತ್ತಮ ಆಭರಣ ಮಳಿಗೆಯಾಗಿದ್ದು, ಬಹು ಆಕರ್ಷಣೀಯ, ವಿಭಿನ್ನ ಶೈಲಿಯ ಆಭರಗಳು ಇಲ್ಲಿ ಲಭ್ಯವಿದ್ದು, ಬೆಳಗಾವಿಯ ನಾಗರಿಕರು ಎಲ್ಲರೂ ಈ ಆಭರಣ ಅಂಗಡಿಗೆ ಬಂದು ವ್ಯಾಪಾರ ಮಾಡಬೇಕು, ಅದರಿಂದ ಮತ್ತೆ ಇನ್ನೊಂದು ಕಾರ್ಯಕ್ರಮಕ್ಕೆ ಮಲಬಾರ್ ಗೋಲ್ಡ್ ಗೆ ನಾನು ಬೆಳಗಾವಿಗೆ ಬರುವಂತೆ ಆಗಬೇಕು ಎಂದರು..

ಉತಮ ಗುಮಟ್ಟಕ್ಕೆ ಹೆಸರುವಾಸಿಯಾದ ಮಲಬಾರ್ ಗೊಲ್ಡಲ್ಲಿ ಬೆಳಗಾವಿ ಜನರು ಆದಷ್ಟೂ ಹೆಚ್ಚು ಹೆಚ್ಚು ಆಭರಣ ಖರೀದಿ ಮಾಡಿ ಪ್ರೋತ್ಸಾಹಿಸಿ ಎಂದು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದರು..
ಈ ನವೀಕರಣ ಬಂಗಾರ ಮಳಿಗೆಯ ಚಾಲನಾ ಕಾರ್ಯಕ್ರಮದಲ್ಲಿ ಮಲಬಾರ್ ಗೊಲ್ಡಿನ ರಾಜ್ಯದ ವ್ಯಾಪಾರಿ ಪ್ರಮುಖರು, ಪ್ರಾದೇಶಿಕ ವ್ಯವಸ್ಥಾಪಕರು, ಸ್ಥಳೀಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು..

ವರದಿ ಪ್ರಕಾಶ ಕುರಗುಂದ..