ಬೆಳ್ಳಂಬೆಳಿಗ್ಗೆ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ವೃದ್ಧೆಯ ಸಾವು..

ಬೆಳ್ಳಂಬೆಳಿಗ್ಗೆ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ವೃದ್ಧೆಯ ಸಾವು..

ಸರ್ಕಾರಿ ಬಸ್ ಗಾಲಿಗೆ ಸಿಲುಕಿ ಸ್ಥಳದಲ್ಲಿಯೇ ಅಸುನೀಗಿದ ವೃದ್ದೆ..

ಬೆಳಗಾವಿ : ಸೋಮವಾರ ಬೆಳಿಗ್ಗೆ 9-30ರ ಸುಮಾರಿಗೆ ನಗರದ ಚನಮ್ಮ ವೃತ್ತದಲ್ಲಿ ಕೆಎಲ್ಇ ಕಡೆಯಿಂದ ಬರುವ ಸರ್ಕಾರಿ ಬಸ್ಸಿನ ಹಿಂಬದಿಯ ಗಾಲಿಗೆ ಸಿಲುಕಿ ವೃದ್ದೆ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ..

ವೃದ್ದೆ ಒಬ್ಬಳೇ ಇದ್ದ ಕಾರಣ ಯಾವ ಉರು, ಏನು ಹೆಸರು ಎಂಬ ಮಾಹಿತಿ ಲಭ್ಯವಿಲ್ಲ, ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರಿ ಹಾಗೂ ನಾಗರಿಕ ಪೊಲೀಸ್ ಸಿಬ್ಬಂದಿಗಳು ರಸ್ತೆಯಲ್ಲಿ ನುಚ್ಚುನುರಾಗಿ ಬಿದ್ದಿದ್ದ ಅಜ್ಜಿಯ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

ಇನ್ನು ಸರ್ಕಾರಿ ಬಸ್ಸ ಹಾಗೂ ಚಾಲಕನನ್ನು ತನಿಖೆಗಾಗಿ ಸಂಭಂದಪಟ್ಟ ಪೊಲೀಸ್ ಠಾಣೆಗೆ ಒಯ್ಯಲಾಗಿದ್ದು, ಬೆಳಗಾವಿಯ ಜನತೆಗೆ ಸೋಮವಾರದ ಬೆಳಗಿನ ಶಾಕ್ ರೀತಿಯಲ್ಲಿ ಈ ರಸ್ತೆ ಅಪಘಾತ ಆಗಿದ್ದು, ನೋಡುಗರಿಗೆ ಆತಂಕ ಉಂಟುಮಾಡುವ ಸನ್ನಿವೇಶ ಸೃಷ್ಟಿಯಾಗಿತ್ತು..

ವರದಿ ಪ್ರಕಾಶ್ ಕುರಗುಂದ..