ನೇಕಾರರ ಪರವಾಗಿ ನಿಂತು ಸೌಲಭ್ಯ ನೀಡಿದ್ದು ಕಾಂಗ್ರೆಸ್ ಸರ್ಕಾರ…

ಬೆಳಗಾವಿ ಲೋಕಸಭಾ ಚುನಾವಣೆ :

ದಕ್ಷಿಣ ಮತಕ್ಷೇತ್ರದ ಕಾರ್ಯಕರ್ತರ ಹಾಗೂ ಬಿಎಲ್ಒಗಳ ಸಭೆ..

ನೇಕಾರರ ಪರವಾಗಿ ನಿಂತು ಸೌಲಭ್ಯ ನೀಡಿದ್ದು ಕಾಂಗ್ರೆಸ್ ಸರ್ಕಾರ..

ಸಚಿವ ಸತೀಶ ಜಾರಕಿಹೊಳಿ..

ಬೆಳಗಾವಿ : ಬೆಳಗಾವಿ ದಕ್ಷಿಣದಲ್ಲಿ ನಮ್ಮ ಪಕ್ಷ ಗೆಲ್ಲಲು ಈ ಸಭೆ ಮಾಡುತ್ತಿದ್ದೇವೆ, ಬರುವಂತ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಏಕೆ ಗೆಲ್ಲಬೇಕು ಎಂದು ನಿಮಗೆ ಈಗಾಗಲೇ ತಿಳಿದಿದೆ, ಜನರಿಗೆ ಉಪಯೋಗವಾಗುವಂಥ ಗ್ಯಾರೆಂಟಿ ಯೋಜನೆಗಳನ್ನು ನಾವು ಇಡೀ ರಾಜ್ಯಕ್ಕೆ ನೀಡಿದ್ದೇವೆ, ನುಡಿದಂತೆ ನಡೆಸಿದ್ದೇವೆ ಇಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದ್ದಾರೆ..

ಮಂಗಳವಾರ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಜನರಿಗೆ ಬೇಕಾದ ಸೌಲಭ್ಯಗಳನ್ನು ನಮ್ಮ ಸರ್ಕಾರ ನೀಡಿದೆ, ಜನರ ಕಲ್ಯಾಣಕ್ಕಾಗಿ ಕಾಂಗ್ರೆಸ್ಸಿಗೆ ನೀವು ಬೆಂಬಲ ನೀಡಬೇಕು ಎಂದು ಕರೆ ನೀಡಿದರು.

ಬೆಳಗಾವಿಯ ದಕ್ಷಿಣದಲ್ಲಿ ಇಲ್ಲಿವರೆಗೆ ನಮ್ಮ ಪಕ್ಷ ತೃಪ್ತಿಕರ ಪಲಿತಾಂಶ ನೀಡಿಲ್ಲ, ಅದಕ್ಕೆ ನಾವು ಇಲ್ಲಿ ಹೆಚ್ಚಿನ ಕಾಳಜಿ ನೀಡಿ, ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ.

ಅಭ್ಯರ್ಥಿ ಯಾರೇ ಆದರೂ ಎಲ್ಲರೂ ಸೇರಿ ಗೆಲ್ಲಿಸೋಣ.
ಕಳೆದ ಹತ್ತು ವರ್ಷದಲ್ಲಿ ಬೆಳಗಾವಿ ದಕ್ಷಿಣದಲ್ಲಿ ನಾಲ್ಕು ಚುನಾವಣೆ ಮಾಡಿದ್ದೇವೆ, ಈ ಚುನಾವಣೆಯಲ್ಲಿ, ಈ ಕ್ಷೇತ್ರದಲ್ಲಿ ನೀವು ಕೇವಲ 60 ಸಾವಿರ ಓಟು ನೀಡಿ ಸಾಕು, ನಮ್ಮ ಅಭ್ಯರ್ಥಿಯನ್ನು ನಾವು ಗೆಲ್ಲಿಸುತ್ತೆವೆ ಎಂದರು.

ಪ್ರತಿ ಹಳ್ಳಿಯಲ್ಲಿಯೂ ತಾವು ಕೆಲಸ ಮಾಡಿ, ಬಿಎಲ್ಒ ಗಳು ಸರಿಯಾಗಿ ತಮ್ಮ ಕರ್ತವ್ಯ ಅರಿತು ತ್ವರಿತವಾಗಿ ಕೆಲಸ ಮಾಡಿ ತಮ್ಮ ಶಕ್ತಿ ತೋರಿಸಿ, ನಾವು ಎಲ್ಲಾ ಶಕ್ತಿ ನಿಮಗೆ ನೀಡುತ್ತೆವೆ, ಆ ಶಕ್ತಿಯಿಂದ ಇಲ್ಲಿರುವ ಬಲಿಷ್ಠ ಗಿಡವನ್ನು ಬೀಳಿಸಿ, ದೊಡ್ಡ ಕೆಬ್ಬಿನ ಇದ್ದರೂ ಅದನ್ನು ಕಾಸಿ ಬಡಿದು ಬಗ್ಗಿಸಿ ಎಂದರು..

ಚುನಾವಣೆಗೆ ಇನ್ನು 45 ದಿನ ಬಾಕಿ ಇದೆ, ಹೇಗಾದರೂ ಮಾಡಿ ಆ ಕಾರ್ಯ ಮಾಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದು ಸೂಚಿಸಿದರು..

ಬಿಜೆಪಿಯವರು, ಚುನಾವಣೆ ಸಮಯದಲ್ಲಿ ನೇಕಾರರ ವಿದ್ಯುತ್ ಬಿಲ್ ದರವನ್ನು ಎರಿಸಿದ್ದರು, ಅದನ್ನು ನೇಕಾರರು ಯೋಚಿಸಬೇಕು, ಇನ್ನಾದರೂ ಬದಲಾವಣೆ ಮಾಡಬೇಕು, ತಿಂಗಳಿಗೆ 2000 ತಗೋತಿದಾರೆ ಅವರೆಲ್ಲರಿಗೂ ತಿಳಿಸಿ ಹೇಳಿ ಎಂದರು..

ನಮ್ಮ ಸರ್ಕಾರ ಬಡವರ ಪರವಾದ ಸರ್ಕಾರ, ಬಿಜೆಪಿ ಹವಾದಲ್ಲಿರುವ, ಬರೀ ಮಾತಿನ ಸರ್ಕಾರ, ಸ್ವಿಸ್ ಬ್ಯಾಂಕ್ ಅಂದ್ರು, ಸರ್ಜಿಕಲ್ ಸ್ಟ್ರೈಕ್ ಅಂದ್ರು, ಈಗ ರಾಮ ಅನ್ನುತ್ತಿದ್ದಾರೆ, ದೇಶ ಕಟ್ಟಿದ ದೇಶ ನಮ್ಮದು, ಎಲ್ಲಾ ಕ್ಷೇತ್ರಗಳನ್ನು ಕಟ್ಟಿ ಬೆಳೆಸಿದ್ದೇನೆ, ಈಗ ಇವರು ಬಂದು ಆಡಳಿತ ನಡೆಸುತ್ತಿದ್ದಾರೆ ಅಷ್ಟೇ ಎಂದರು.

ಖಂಡಿತವಾಗಿ ಚಿಕ್ಕೋಡಿ ಹಾಗೂ ಬೆಳಗಾವಿ ಗೆಲ್ಲಿಸುತ್ತೆವೆ ನಿಮ್ಮ ಕಾರ್ಯ ಮುಖ್ಯ , ರಾಜ್ಯದಲ್ಲಿಯೂ ಅತ್ಯಧಿಕ ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ ಎಂದರು.

ದಕ್ಷಿಣದವರು ಇವತ್ತಿನಿಂದ ಕೆಲಸಕ್ಕೆ ಹತ್ತಬೇಕು, ಕಾಂಗ್ರೆಸ್ ಅಭ್ಯರ್ಥಿಗೆ ನಮ್ಮ ಕೊಡುಗೆ ಏನು ಎಂದು ಈ ಸಮಯದಲ್ಲಿ ತೋರಿಸಬೇಕು ಎಂದರು..

ವರದಿ ಪ್ರಕಾಶ ಕುರಗುಂದ..