ವರ್ಷದ ಮೊದಲ ಮಳೆಗೆ ತಂಪಾದ ಕುಂದಾನಗರಿ..
ನಾಡಿನ ಜೀವಸಂಕುಲಕ್ಕೆ ಸಂತಸ ತಂದ ಮೇಘರಾಜ..
ಬೆಳಗಾವಿ : ನಗರದಲ್ಲಿ ಇಂದು ಸುರಿದ ಧಾರಾಕಾರ ಮಳೆಗೆ ಸುಡುಬಿಸಿಲಿನಿಂದ ಕೆಂಪಾದ ಬೆಳಗಾವಿ ಇಂದು ತಂಪಾಗಿ ಎಲ್ಲೆಡೆ ಮನಸ್ಸಿಗೆ ಮುದ ನೀಡುವ ವಾತಾವರಣ ನಿರ್ಮಾಣವಾಗಿತ್ತು..
ಮಧ್ಯಾಹ್ನದಿಂದಲೇ ನಗರದಲ್ಲಿ ಮೋಡಕವಿದ ವಾತಾವರಣ ಸೃಷ್ಟಿಯಾಗಿದ್ದು, “ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ” ಎಂಬ ಹಾಡು ಮನಸ್ಸಿನಲ್ಲಿ ಗುಣಗುಣಿಸುತ್ತಿತ್ತು..

ಬೆಳಗಾವಿಯ ಜನರು ಕಾತುರದಿಂದ ಆತುರದಿಂದ ಕಾಯುತ್ತಿರುವ ಮಳೆಯು ಈ ವರ್ಷ ಆದಷ್ಟು ಬೇಗ ಬಂದಿದ್ದು ಬೆಳಗಾವಿಗರಿಗೆ ಅತ್ಯಂತ ಸಂತಸದ ವಿಷಯವಾಗಿದೆ, ಯಾಕೆಂದರೆ ಕಳೆದ ವರ್ಷ ಅತೀ ಕಡಿಮೆ ಮಳೆ ಆಗಿದ್ದು, ಜನರು, ಪ್ರಾಣಿ ಪಕ್ಷಿಗಳು, ಇತರೆ ಜೀವಸಂಕುಲದ ಹಾಗೂ ಇಡೀ ಜಿಲ್ಲೆಯೇ ನೀರಿಲ್ಲದೇ ಬೇಸಿಗೆಯ ಬೆಗುದಿಗೆ ನರಳುತ್ತಿತ್ತು..
ಈ ವರ್ಷ ಸ್ವಲ್ಪ ನಗರಕ್ಕೆ ಸ್ವಲ್ಪ ಬೇಗನೆ ವರ್ಷಧಾರೆ ಆಗಮಿಸಿದ್ದು, ನಾಡಿಗೆ ಸಂಪೂರ್ಣವಾಗಿ ಮಳೆಯಾಗಿ, ಎಲ್ಲಾ ಕಡೆಗೆ ಸಮೃದ್ಧಿಯ ಸುಸಮಯ ಬರು ಎಂದು ಆ ಮೇಘರಾಜನಲ್ಲಿ ಕೇಳಿಕೊಳ್ಳುತಾ, ವರ್ಷದ ಮೊದಲ ಮಳೆಗೆ ತುಂಬು ಹೃದಯದ ಸ್ವಾಗತ ಕೋರೋಣ..
ವರದಿ ಪ್ರಕಾಶ್ ಕುರಗುಂದ..