ಬೆಳಗಾವಿಗೆ ಬಲಿಷ್ಠ ಅಭ್ಯರ್ಥಿಯನ್ನು ಕಣ್ಣಕ್ಕಿಳಿಸಿದ ಬಿಜೆಪಿ..
ಉತ್ತರ ಕನ್ನಡದಲ್ಲಿ ಅನಂತ ಕುಮಾರ್ ಹೆಗಡೆಗೆ ಕೊಕ್..
ಶೆಟ್ಟರ, ಜೊಲ್ಲೆ ಮತ್ತು ಕಾಗೇರಿಯವರು ಬಿಜೆಪಿಗೆ ಗೆಲುವಿನ ಬಲ ತರುತ್ತಾರಾ??
ಬೆಳಗಾವಿ : ಬೆಳಗಾವಿ ಜಿಲ್ಲೆಗೆ ಸಂಬಂದಪಡುವಂತೆ ಮೂರು ಲೋಕಸಭಾ ಕ್ಷೇತ್ರಗಳಾದ ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರ ಕನ್ನಡದಲ್ಲಿ ಬಿಜೆಪಿ ಪಕ್ಷ ಉತ್ತಮ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು, ಇವರ ವಿಜಯಯೊಂದಿಗೆ ಮತ್ತೆ ಕೇಂದ್ರದಲ್ಲಿ ಬಿಜೆಪಿ ತನ್ನ ವಿಜಯಪತಾಕೆ ಹಾರಿಸಬಹುದೇ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ..
ಹೌದು, ನಿನ್ನೆ ಬಿಜೆಪಿಯಿಂದ ಬಿಡುಗಡೆಗೊಂಡ ಐದನೆಯ ಪಟ್ಟಿಯಲ್ಲಿ ಬೆಳಗಾವಿಯಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಹಾಗೂ ಉತ್ತರ ಕನ್ನಡದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ನೀಡಿ ಪೈನಲ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ..
ಈಗಾಗಲೇ ಚಿಕ್ಕೋಡಿಯಿಂದ ಅನ್ನಾಸಾಹೇಬ ಜೊಲ್ಲೆ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದು, ಈ ಮೂರು ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವಿನೊಂದಿಗೆ ಮತ್ತೊಮ್ಮೆ ಮೋದಿಯ ಕೈ ಬಲಪಡಿಸುವ ಹುಮ್ಮಸ್ಸಿನಲ್ಲಿ ಬಿಜೆಪಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉತ್ಸುಕದಲ್ಲಿದ್ದಾರೆ.
ಒಟ್ಟಿನಲ್ಲಿ ಈ ಸಲದ ಲೋಕಸಭಾ ಚುನಾವಣೆ ಎರಡೂ ರಾಷ್ಟ್ರೀಯ ಪಕ್ಷಗಳಿಗೂ ದೊಡ್ಡ ಪರೀಕ್ಷೆಗಾಗಿ ಪರಿಣಮಿಸಿದ್ದು, ಇದರಲ್ಲಿ ಯಾರ ಆಟ ಗೆಲ್ಲುತ್ತದೆ ಎಂದು ಕಾದುನೋಡಬೇಕು..
ವರದಿ ಪ್ರಕಾಶ ಕುರಗುಂದ..