ತಮ್ಮ ಭವಿಷ್ಯ ಬದಿಗಿಟ್ಟು, ಜನಸೇವೆಗೆ ಬಂದಿರುವ ಯುವಪ್ರತಿಭೆಗಳಿಗೆ ಆಶೀರ್ವದಿಸಿ…

ಬೆಳಗಾವಿ, ಚಿಕ್ಕೋಡಿಯ ಇಬ್ಬರೂ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೆವೆ..

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಪಥ..

ತಮ್ಮ ಭವಿಷ್ಯ ಬದಿಗಿಟ್ಟು, ಜನಸೇವೆಗೆ ಬಂದಿರುವ ಯುವಪ್ರತಿಭೆಗಳಿಗೆ ಆಶೀರ್ವದಿಸಿ..

ಸಚಿವ ಸತೀಶ ಜಾರಕಿಹೊಳಿ..

ಬೆಳಗಾವಿ : ಮಂಗಳವಾರ ನಗರದ ಗಾಂಧಿಭವನದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಮುಖಂಡರ ನೇತೃತ್ವದಲ್ಲಿ ಜರುಗಿದೆ..

ಮೊದಲಿಗೆ ಸಭೆಯನ್ನುದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಬೆಳಗಾವಿ ಉತ್ತರದ ಶಾಸಕರಾದ ರಾಜು ಶೇಟ್ ಅವರು, ಎಲ್ಲರೂ ಒಕ್ಕಟ್ಟಾಗಿ ಕೆಲಸ ಮಾಡಿ ನಮ್ಮ ಎರಡೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕು, ನಮ್ಮ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿಗಳನ್ನು ಎಲ್ಲರೂ ಅವಹೇಳನ ಮಾಡುತ್ತಾ, ಇವು ಆಗದ ಕೆಲಸ, ಹಣ ಎಲ್ಲಿಂದ ತರ್ತಾರೆ? ಅಂತ ಅಪಹಾಸ್ಯ ಮಾಡುವ ವಿರೋಧಿಗಳಿದ್ದರು, ಆದರೆ ಮೂರೇ ತಿಂಗಳಲ್ಲಿ ಆ ಐದು ಗ್ಯಾರೆಂಟಿಗಳನ್ನು ಪೊರೈಸುವದರೊಂದೀಗೆ ನಮ್ಮ ಸರ್ಕಾರ ನುಡಿದಂತೆ ನಡೆದು ವಿರೋಧಿಗಳಿಗೆ ತಕ್ಕ ಉತ್ತರ ನೀಡಿದೆ.

ಇನ್ನು ಬಿಜೆಪಿಯ ಹೊರಗಿನ ಅಭ್ಯರ್ಥಿಗೆ ಮತ ನೀಡುವುದರಿಂದ ಬೆಳಗಾವಿ ಉದ್ದಾರ ಆಗೋಲ್ಲ, ಈ ಹಿಂದೆ ಬೆಳಗಾವಿಗೆ ಸಿಗಬೇಕಾದ ಅನೇಕ ಯೋಜನೆಗಳು ಹುಬ್ಬಳ್ಳಿ ಧಾರವಾಡಕ್ಕೆ ಹೋಗಿ ಬೆಳಗಾವಿಗೆ ಅನ್ಯಾಯ ಆಗಿವೆ, ಇದನ್ನು ಮಾಡಿದವರು ಈಗ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿರುವ ಮಹನೀಯರೇ ಎಂದು ಕಿಡಿ ಕಾರಿದರು..

ಆದರೆ ಇಲ್ಲೇ ಇರುವ ನಮ್ಮ ಕೈಗೆ ಸಿಗುವ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮೃನಾಲ್ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸುವ ಮೂಲಕ ಈ ಜಿಲ್ಲೆಯ ಜನ ಸೇವೆ ಮಾಡುವ ಅವಕಾಶ ಮಾಡಿ ಕೊಡಬೇಕು, ನಮ್ಮ ಅಭ್ಯರ್ಥಿಯ ಜೊತೆ ನಾವೆಲ್ಲರೂ ಇದ್ದೇವೆ, ತಾವು ಅವರಿಗೆ ಆಶೀರ್ವಾದ ಮಾಡಿ ಬೆಳಗಾವಿ ಅಭಿವೃದ್ದಿ ಆಗಲು ಸಹಕರಿಸಬೇಕು ಎಂದರು..

ಇನ್ನು ಮೃನಾಲ ಹೆಬ್ಬಾಳ್ಕರ್ ಅವರು ಮಾತನಾಡಿ, ಬರುವಂತ 2024ರ ಚುನಾವಣೆಗೆ ಇಬ್ಬರು ಯುವಕರಿಗೆ ನಮ್ಮ ನಾಯಕರು ಅವಕಾಶ ನೀಡಿದ್ದಾರೆ, ಬೆಳಗಾವಿಗೆ ನನ್ನನ್ನು ಹಾಗೂ ಚಿಕ್ಕೋಡಿಗೆ ನನ್ನ ಅಕ್ಕನವರಾದ ಪ್ರಿಯಾಂಕ ಜಾರಕಿಹೊಳಿ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ, ಯುವಕರ ಮೇಲೆ ಭರವಸೆ ಇಟ್ಟು ಟಿಕೆಟ್ ನೀಡಿದ ಪಕ್ಷಕ್ಕೆ ನಾವೆಲ್ಲರೂ ಸೇರಿ ವಿಜಯ ತಂದು ಕೊಡುವ ಕೆಲಸ ಮಾಡಬೇಕು ಎಂದರು..

ಇಲ್ಲಿಯ ಜನರು ಮಾತು ನೀಡಿದರೆ ಆಯ್ತು, ನಿಮ್ಮ ಜೊತೆಗೆ ಇದ್ದೆ ಇರುತ್ತಾರೆ, ವಿಭಿನ್ನ ವೈಶಿಷ್ಟ್ಯದ ಜನರು ಇಲ್ಲಿ ಇದ್ದು ನಾವು ಮಾಡುವ ಉತ್ತಮ ಕಾರ್ಯಕ್ಕಾಗಿ ನಮಗೆ ಯಾವಾಗಲೂ ಸಹಕಾರ ನೀಡಿ ಹರಸುವ ಹಾಗೆ, ಈ ಚುನಾವಣೆಯಲ್ಲಿಯೂ ನಮ್ಮ ಮೇಲೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು..

ಇನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ಈ ಬಾರಿ ಯುವಕರ ಹಾಗೂ ಮಹಿಳೆಯರಿಗೆ ಪ್ರಾಶಸ್ತ್ಯ ನೀಡಿದೆ, ನಮ್ಮ ಎಲ್ಲಾ ನಾಯಕರ ಆಶೀರ್ವಾದದಿಂದ ನನ್ನ ಮಗ ಮೃಣಾಲ ಹೆಬ್ಬಾಳ್ಕರ್ ಗೆ ಟಿಕೆಟ್ ಸಿಕ್ಕಿದೆ, ಆದರೆ ನಾನು ಪ್ರಮಾಣ ಮಾಡಿ ಹೇಳುವೆ ಈ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಹಾಗೂ ಬೆಳಗಾವಿ ಕ್ಷೇತ್ರಗಳನ್ನು ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸದ ನುಡಿಗಳನ್ನು ಆಡಿದರು..

ಇಡೀ ವಿಶ್ವದಲ್ಲಿಯೇ ಸಾಮಾನ್ಯ ಜನರ ಪರವಾಗಿ, ಮಹಿಳೆಯರ ಪರವಾಗಿ ಇರುವ ಸರ್ಕಾರ ಎಂದರೆ ಅದು ಕಾಂಗ್ರೆಸ್ ಸರ್ಕಾರ ಎಂದ ಅವರು, ನನ್ನ ಮಗ ಸರ್ವೇಜನ ಸುಕಿನೋಭವಂತೋ ಎಂಬ ನೀತಿಯಲ್ಲಿ ಇಂದು ಚುನಾವಣೆ ಸ್ಪರ್ಧೆ ಮಾಡುತ್ತಿದ್ದಾನೆ, ನಿಮ್ಮ ದ್ವನಿಯಾಗಿ, ಲೋಕಸಭೆಯಲ್ಲಿ ನಮ್ಮ ಸಮಸ್ಯೆಗಳ ಬಗ್ಗೆ ದ್ವನಿ ಎತ್ತಲೂ ಇಂತಹ ಯುವಕರಿಗೆ ಅವಕಾಶ ಸಿಗಬೇಕು ಎಂದರು..

ಕೇಂದ್ರದ ಅನುದಾನ ತರುವಲ್ಲಿ ಆಸಕ್ತಿ ಇರುವ ತರುಣ ಈ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬೇಕಾಗಿದ್ದಾರೆ, ಅದಕ್ಕಾಗಿ ನಮ್ಮ ಜಿಲ್ಲಾ ಸುಭದ್ರತೆಗೆ ಈ ಲೋಕಲ್ ಅಭ್ಯರ್ಥಿಗೆ ತಮ್ಮ ಆಶೀರ್ವಾದ ಬೇಕು ಎಂದರು..

ಇನ್ನು ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಮಾತನಾಡಿ, ಮೇ ಏಳಕ್ಕೆ ಚುನಾವಣೆ ನಡೀತಾ ಇದೆ, ಬೆಳಗಾವಿ, ಚಿಕ್ಕೋಡಿ ಗೆಲ್ಲಿಸಲು ನಮ್ಮ ನಾಯಕರು ಆದೇಶ ಮಾಡಿದ್ದಾರೆ, ಇದು ನಮ್ಮ ಜವಾಬ್ದಾರಿ ಅಷ್ಟೇ ಅಲ್ಲಾ, ಕಾರ್ಯಕರ್ತರಾದ ನಿಮ್ಮ ಜವಾಬ್ದಾರಿ ಕೂಡಾ ಬಹಳ ಇದೆ, ಪ್ರತಿ ಮನೆಮನೆಗೆ ಹೋಗಿ ಗ್ಯಾರೆಂಟಿ ಯೋಜನೆಗಳ ಬಗ್ಗೆ ತಿಳಿಸಬೇಕು..

ರಾಜ್ಯ ಸರ್ಕಾರದ ಪ್ರಮುಖ ಕೊಡುಗೆಗಳು ಸಿಎಂ ಸಿದ್ದರಾಮಯ್ಯ ಅವರ ಜನಪರ ಕಾರ್ಯಗಳ ಬಗ್ಗೆ ಜನತೆಗೆ ತಿಳಿಸಬೇಕು, ಜೊತೆಗೆ ಪ್ರಧಾನಿ ಮೋದಿ ಅವರ ವೈಫಲ್ಯ, ಸುಳ್ಳು ಭರವಸೆಗಳನ್ನು ಜನತೆಗೆ ಅರ್ಥ ಮಾಡಿಸಬೇಕು, ಈಗ ಹತ್ತು ವರ್ಷದಿಂದ ಅವರು ಗಾಳಿಯಲ್ಲಿ ಗುಂಡು ಹೊಡೆಯುವ ಬಂಡಲ್ ಮಾತುಗಳ ನಿಜ ರೂಪವನ್ನು ಜನತೆಗೆ ತಿಳಿಸಬೇಕು.

ಬರೀ ಪುಷ್ಪಕ ವಿಮಾನದ ಮಾತುಗಳನ್ನು ಆಡುವ ಅವರು ಬೇಕೋ? ಅಥವಾ ಎಲ್ಲಾ ಕೆಲಸ ಮಾಡುವ ಕಾಂಗ್ರೆಸ್ ಪಕ್ಷ ಬೇಕೋ ಎಂದು ನೀವೇ ತೀರ್ಮಾನಿಸಿ, ದೀನದಲಿತರ, ನಿರುದ್ಯೋಗದ, ಹಿಂದೂಳಿದವರ ಬಗ್ಗೆ ಸ್ವಲ್ಪವೂ ಮಾತಾಡದೇ ಬರಿ ಸುಳ್ಳು ಮಾತಾಡುವ ಪಕ್ಷವನ್ನು ನಂಬದಿರಿ ಎಂದರು..

ಭವಿಷ್ಯತ್ತಿನ ನಾಯಕ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಆಶೀರ್ವಾದ ಮಾಡಿ, ಈಗಿನ ಯುವ ಅಭ್ಯರ್ಥಿಗಳು ಎಲ್ಲಿಯಾದರೂ ಹೋಗಿ ಕೆಲಸ ಮಾಡುವ ಪ್ರತಿಭೆ ಅವಕಾಶ ಇವೆ, ಅವರು ಐಷಾರಾಮಿ ಜೀವನ ನಡೆಸಬಹುದಿತ್ತು ಆದರೆ ಈ ರಾಜಕೀಯಕ್ಕೆ ಬಂದು ನಿಮ್ಮ ಸೇವೆ ಮಾಡಲು ಬಯಸಿದ್ದಾರೆ, ಅವರ ಭವಿಷ್ಯವನ್ನು ತ್ಯಾಗ ಮಾಡಿ ಬಂದಿದ್ದಾರೆ, ಅದಕ್ಕಾಗಿ ನಿಮ್ಮ ಸಹಕಾರ ಬಹಳ ಮುಖ್ಯ ಇದೆ ಎಂದಿದ್ದಾರೆ..

ವರದಿ ಪ್ರಕಾಶ ಕುರಗುಂದ..