ಬೆಳಗಾವಿಯಲ್ಲಿ ಬಿಜೆಪಿ ಮೂರ್ನಾಲ್ಕು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತದೆ..
ಬೆಳಗಾವಿಯಲ್ಲೇ ಮನೆ ಮಾಡುವೆ, ಬೆಳಗಾವಿ ಜನರ ಸಮಸ್ಯೆಗೆ ಸ್ಪಂದಿಸುವೆ..
ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್..
ಬೆಳಗಾವಿ : ಬುಧವಾರ ಬೆಳಗಾವಿ ನಗರದ ತುಂಬಾ ಬಿಜೆಪಿಯ ಪರವಾದ ಕೂಗು, ಹರ್ಶೋದ್ಘಾರ, ಘೋಷಣೆಗಳು ಮೊಳಗಿ ಇಡೀ ನಗರವೇ ಜೈ ಶ್ರೀರಾಮ್, ಜೈ ಬಿಜೆಪಿ, ಜೈ ಮೋದಿಜಿ ಎಂದು ಕೆಸರಿಮಯ ವಾತಾವರಣ ನಿರ್ಮಾಣವಾಗಿತ್ತು.
ನಗರದ ಚೆನ್ನಮ್ಮ ವೃತದ ರಾಣಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು, ನಂತರ ನೆರೆದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ನಮ್ಮ ನಾಯಕರಾದ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ನಾವಿಂದು ಎಲ್ಲರೂ ಒಗ್ಗಟ್ಟಾಗಿ ಸೇರಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವ ಗುರಿ ಹೊಂದಿದ್ದೇವೆ ಎಂದರು.

ಬೆಳಗಾವಿ ನನ್ನ ಉರು ಇದ್ದಂಗೆ, ನಾನು ಕೂಡಾ ಇಲ್ಲೇ ಮನೆ ಮಾಡಿ ಇರುವೆ, ಬೆಳಗಾವಿ ಜನರ ಯಾವುದೇ ಸಮಸ್ಯೆ ಇದ್ದರೂ ನಾನು ಸ್ಪಂದನೆ ನೀಡಿ, ಪರಿಹರಿಸುತ್ತೇವೆ, ಬೆಳಗಾವಿಯ ಸಕಲ ಅಭಿವೃದ್ದಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು..
ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿಕೊಂಡು ಬೈಕ್ ರ್ಯಾಲಿ ಮೂಲಕ ನನ್ನನ್ನು ಸ್ವಾಗತ ಮಾಡಿದ್ದನ್ನು ನೋಡಿದರೆ, ಈ ಸಲ ಬಿಜೆಪಿ ಪಕ್ಷ ಮೂರ್ನಾಲ್ಕು ಲಕ್ಷ ಲೀಡನಲ್ಲಿ ಗೆದ್ದು ಬರುವದು ಗ್ಯಾರೆಂಟಿ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ..

ಒಟ್ಟಿನಲ್ಲಿ ಬೆಳಗಾವಿ ಬಿಜೆಪಿಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ್ದು, ಈ ಪ್ರಚಾರದ ಬೈಕ್ ರ್ಯಾಲಿಯಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಎಲ್ಲಾ ಪದಾಧಿಕಾರಿಗಳು, ಸಾವಿರಾರು ಕಾರ್ಯಕರ್ತರು ಒಟ್ಟಿಗೆ ಸೇರಿ ಸಂಭ್ರಮಿಸುತ್ತಾ, ಬಿಜೆಪಿ ಜಯಭೇರಿ ಬಾರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವರದಿ ಪ್ರಕಾಶ ಕುರಗುಂದ….