ಬೆಳಗಾವಿ ಬಿಜೆಪಿ ಭದ್ರಕೋಟೆ, ಎ ಶಿರ್ಪ ಟ್ರೇಲರ್ ಹೈ, ಪಿಕ್ಚರ್ ಅಭಿ ಬಾಕಿ ಹೈ..
ಬೆಳಗಾವಿಗೆ ಶೆಟ್ಟರ್ ಅವರ ಕೊಡುಗೆಯನ್ನು ನಾವು ಮರೆಯಬಾರದು..
ಬೆಳಗಾವಿಯಲ್ಲಿ ಬಿಜೆಪಿ 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತದೆ..
ಶಾಸಕ ಅಭಯ ಪಾಟೀಲರ ವಿಶ್ವಾಸ..
ಬೆಳಗಾವಿ : ನಾವು ಕೇವಲ 500 ಕಾರ್ಯಕರ್ತರಿಗೆ ಬರಲಿಕ್ಕೆ ಹೇಳಿದರೆ, ಇಂದು 4500 ಬೈಕಗಳು ಬಂದಿವೆ ಎಂದರೆ ಬಿಜೆಪಿ ಗತ್ತು ಹೇಗಿದೆ ಎಂದು ನೋಡಿರಿ, ಬೆಳಗಾವಿ ಬಿಜೆಪಿ ಕೋಟೆ, ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ, ಇದು ಬರೀ ಟ್ರೇಲರ್ ಅಷ್ಟೇ, ಪಿಚ್ಚರ್ ಇನ್ನು ಬಾಕಿ ಇದೆ ಎಂದು ವಿರೋಧಿಗಳಿಗೆ ಸರಿಯಾಗಿ ಠಕ್ಕರ ನೀಡಿದ್ದಾರೆ..
ಬುಧವಾರ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಅವರ ಚುನಾವಣಾ ಪ್ರಚಾರವಾಗಿ ಬೈಕ್ ರ್ಯಾಲಿ ಏರ್ಪಡಿಸಿದ್ದು, ಬೆಳಗಾವಿಯ ಉತ್ತರ, ದಕ್ಷಿಣ ಹಾಗೂ ಗ್ರಾಮೀಣ ಕ್ಷೇತ್ರದ ಸಾವಿರಾರು ಕಾರ್ಯಕರ್ತರು ಭಾಗಿಯಾಗಿ, ಬಿಜೆಪಿ, ಮೋದಿ, ಶೆಟ್ಟರ ಬಗ್ಗೆ ಘೋಷಣೆ, ಜೈಕಾರ ಕೂಗುತ್ತಾ ಬೆಳಗಾವಿಯಲ್ಲಿ ಬಿಜೆಪಿಯ ಇಮ್ಮಡಿಗೊಳಿಸಿದ್ದಾರೆ..

ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬೆಳಗಾವಿ ದಕ್ಷಿಣದ ಶಾಸಕರಾದ ಅಭಯ ಪಾಟೀಲ್ ಅವರು, ಜಗದೀಶ ಶೆಟ್ಟರ ಅವರ ಕುರಿತು ಕಾಂಗ್ರೆಸ್ ನವರು ಅಪಪ್ರಚಾರ ಮಾಡುವದನ್ನು ಬಿಡಲಿ, ಬೆಳಗಾವಿಗೆ ಅವರ ಕೊಡುಗೆ ತುಂಬಾ ಇದೆ, ಅವರೂ ಬೆಳಗಾವಿಯವರೇ, ಸರ್ಕಾರದ ಅನುದಾನ, ವಿವಿಧ ಯೋಜನೆಗಳು, ಪಕ್ಷದ ಸಂಘಟನೆ, ಕೋವಿಡ್ ಸಮಯದಲ್ಲಿ ಬೆಳಗಾವಿಗೆ ಮಾಡಿದ ಕಾರ್ಯ ನಾವು ಯಾವತ್ತೂ ಮರೆಯಬಾರದು ಎಂದರು..

ಯಾರು ಏನೇ ಮಾತಾಡಿದರು, ಬಿಜೆಪಿ ಬೆಳಗಾವಿಯಲ್ಲಿ ಮೂರು ಲಕ್ಷ ಮತಗಳ ಅಂತರದಲ್ಲಿ ಗೆದ್ದು ಬರುತ್ತದೆ, ಅದಕ್ಕೆ ನಮ್ಮ ಕಾರ್ಯಕರ್ತರೇ ಸಾಕ್ಷಿ ಎಂದಿದ್ದಾರೆ..
ವರದಿ ಪ್ರಕಾಶ್ ಕುರಗುಂದ..