ಬಿಜೆಪಿಗೆ ಮತ್ತಷ್ಟು ಬಲ ತಂದ ಕಿಂಗ ಮೇಕರ…

ಬಿಜೆಪಿಗೆ ಮತ್ತಷ್ಟು ಬಲ ತಂದ ಕಿಂಗ ಮೇಕರ …

ಶೆಟ್ಟರಗೆ ಸತ್ಕರಿಸಿ, ಶುಭಾಶಯ ತಿಳಿಸಿದ ಸಾಹುಕಾರ್..

ಬೆಳಗಾವಿ : ಗುರುವಾರ ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿ ಇರುವ ಮಂಗಳಾ ಸುರೇಶ್ ಅಂಗಡಿ ಅವರ ಪಕ್ಷದ ಕಚೇರಿಗೆ ಆಗಮಿಸಿದ ಮಾಜಿ ಸಚಿವರು ಹಾಗೂ ಗೋಕಾಕಿನ ಶಾಸಕರಾದ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಅವರನ್ನು ಭೇಟಿ ಮಾಡಿದ್ದಾರೆ..

ಮಧ್ಯಾಹ್ನ ಆಗಮಿಸಿದ ಸಾಹುಕಾರರು, ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಜಗದೀಶ ಶೆಟ್ಟರ ಅವರನ್ನು ಅಭಿನಂದಿಸಿ, ಜಿಲ್ಲಾ ಬಿಜೆಪಿಯ ಎಲ್ಲಾ ನಾಯಕರೂ ತಮ್ಮ ಜೊತೆಗೆ ಇದ್ದೇವೆ ಎಂಬ ಭರವಸೆ ನೀಡಿದ್ದಾರೆ..

ಚುನಾವಣೆಯ ಪ್ರಚಾರದ ಸ್ಥಿತಿಗತಿಗಳ ಬಗ್ಗೆ ಚರ್ಚೆ ಮಾಡಿದ ಶಾಸಕರು, ಬರುವ ದಿನಗಳಲ್ಲಿ ಯಾವ ರೀತಿಯಲ್ಲಿ ಪ್ರಚಾರ ಮಾಡಿ, ಜನಬಲ ಪಡೆದು, ಈ ಚುನಾವಣೆಯಲ್ಲಿ ವಿಜಯಿಯಾಗಬೇಕೆಂಬ ವಿಚಾರ ವಿನಿಮಯಗಳು ನಡೆದಿರಬಹುದೆಂಬ ಮಾಹಿತಿ ಇದೆ..

ಒಟ್ಟಿನಲ್ಲಿ ಸಾಹುಕಾರರ ಸಾಥ್ ಸಿಕ್ಕಿರುವ ಶೆಟ್ಟರ್ ಅವರ ಆತ್ಮವಿಶ್ವಾಸ ಇಮ್ಮಡಿಯಾಗಿದ್ದು, ಪೂರ್ಣ ಪ್ರಮಾಣದ ಪ್ರಚಾರದಲ್ಲಿ ರಮೇಶ್ ಜಾರಕಿಹೊಳಿ ಅವರು ಇಳಿದರೆ, ಬಿಜೆಪಿಯ ಬಾವುಟ ಮತ್ತಷ್ಟು ಮೇಲೆ ರಾರಾಜಿಸುತ್ತದೆ..

ಈ ಭೇಟಿಯ ಸಂದರ್ಭದಲ್ಲಿ ಬಿಜೆಪಿ ಬೆಳಗಾವಿ ಗ್ರಾಮೀಣ ಅಧ್ಯಕ್ಷರಾದ ಸುಭಾಸ ಪಾಟೀಲ, ಬಿಜೆಪಿ ಮುಖಂಡರಾದ ಕಿರಣ ಜಾಧವ, ಮುರುಗೆಂದ್ರಗೌಡ ಪಾಟೀಲ, ಮತ್ತಿತರ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು..

ವರದಿ ಪ್ರಕಾಶ ಕುರಗುಂದ..