ರಸ್ತೆಯನ್ನೇ ನಿಲ್ದಾಣ ಮಾಡಿಕೊಂಡ ಭಂಡರಿಗೆ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು..
ಸಾರ್ವಜನಿಕರ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಟ್ಟ ಸಂಚಾರಿ ಪೊಲೀಸ್ ಸಿಬ್ಬಂದಿ..
ಬೆಳಗಾವಿ : ನಗರದ ವಿವಿಧ ಭಾಗಗಳಲ್ಲಿ ದ್ವಿಚಕ್ರ ವಾಹನ ಸವಾರರು ನಿಲ್ದಾಣವಲ್ಲದ ಸ್ಥಳಗಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ, ಅದರಿಂದ ಸಂಚಾರಕ್ಕೆ ತೊಂದರೆಯಾಗುವ ದೃಶ್ಯ ಸರ್ವೇ ಸಾಮಾನ್ಯವಾಗಿರುತ್ತದೆ.

ಆದರೆ ಇಂತಹ ಅಶಿಸ್ತಿನ ಪರಿಸ್ಥಿತಿಯನ್ನು ನಿಯಂತ್ರಿಸಲು ಇಂದು, ನಗರ ಸಂಚಾರಿ ಪೊಲೀಸ್ ಸಿಬ್ಬಂದಿಯು ಪೀಲ್ಡಿಗಿಳಿದಿದ್ದು, ರಸ್ತೆ ಆವರಿಸಿ, ವಾಹನ ನಿಲುಗಡೆ ಮಾಡಿದ ವಾಹನ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ..
ಇಂದು ಮಂಗಳವಾರ ಆಗಿದ್ದು, ಎಂದಿನಂತೆ ನಗರದ ಪೋರ್ಟ್ ರಸ್ತೆಯಲ್ಲಿ ಹಳೆಯ ದ್ವಿಚಕ್ರ ವಾಹನಗಳ ಮಾರಾಟದ ಕಾರ್ಯ ಅತ್ಯಂತ ಜೋರಾಗಿದ್ದು, ಶನಿದೇವರ ಮಂದಿರದಿಂದ, ದೇಶಪಾಂಡೆ ಪೆಟ್ರೋಲ್ ಬಂಕ್ ವರೆಗೆ ಹತ್ತಾರು ಅಂಗಡಿಯವರು ನೂರಾರು ಬೈಕುಗಳನ್ನು ತಮ್ಮ ಅಂಗಡಿ ಮುಂದಿನ ರಸ್ತೆಯಲ್ಲಿ ನಿಲ್ಲಿಸಿ, ವ್ಯಾಪಾರ ಮಾಡುತ್ತಿದ್ದರು..

ಇದು ನಗರ ಸಂಚಾರದ ಮುಖ್ಯ ರಸ್ತೆ ಆಗಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿ ಅನೇಕ ಸಲ ಸಂಚಾರದ ಅಸ್ತುವ್ಯಸ್ಥತೆ ಉಂಟಾಗಿತ್ತು, ಆದ್ದರಿಂದ ಇಂದು ನಗರ ಸಂಚಾರಿ ಪೊಲೀಸ್ ಸಿಬ್ಬಂದಿಯು ಕಾರ್ಯಪ್ರವೃತ್ತರಾಗಿ ಪೋರ್ಟ ರಸ್ತೆಯಲ್ಲಿ ನಿಲ್ಲಿಸಲಾದ ಸುಮಾರು 200 ರಿಂದ 300ಕ್ಕೂ ಅಧಿಕ ದ್ವಿಚಕ್ರ ವಾಹನಗಳನ್ನು ಅಂಗಡಿಗಳಲ್ಲಿ, ಅವರ ಸ್ಥಳಗಳಲ್ಲಿ ನಿಲ್ಲಿಸುವಂತೆ ಹೇಳಿ, ಇಲ್ಲವಾದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಗದರಿಸಿ, ಸಂಚಾರಿ ಶಿಸ್ತನ್ನು ತರುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿದ್ದಾರೆ..
ಈ ವೇಳೆ ಮಾತನಾಡಿದ ಸಂಚಾರಿ ಪೊಲೀಸ್ ಸಿಬ್ಬಂದಿಗಳು, ಸಾರ್ವಜನಿಕರೂ ಕೂಡಾ ತಮ್ಮ ಜವಾಬ್ದಾರಿ ಅರಿತು ಸರ್ಕಾರ ಹಾಗೂ ಇಲಾಖೆಗಳ ನಿಬಂಧನೆಗಳನ್ನು ಪಾಲಿಸುವದರೊಂದಿಗೆ ಸಾರ್ವಜನಿಕ ಸುವ್ಯವಸ್ಥೆಗೆ ಸಹಕರಿಸಬೇಕು, ಇಲಾಖೆಗಳೇ ಎಲ್ಲವನ್ನೂ ಮಾಡಲು ಅಸಾಧ್ಯ, ಸಾರ್ವಜನಿಕರೂ ಕೂಡಾ ಸಹಕಾರ ನೀಡಿದಾಗ ಸಮಾಜ ಪ್ರಗತಿಯತ್ತ ಸಾಗುತ್ತದೆ ಎಂದರು.
ವರದಿ ಪ್ರಕಾಶ್ ಕುರಗುಂದ..