ಯಂಗ್ ಬೆಳಗಾವಿ ಪೌಂಡೇಶನ್ ವತಿಯಿಂದ 100kg ಅಕ್ಕಿಯ ಕೊಡುಗೆ..
ಸಮಾಜಸೇವೆಗೆ ಮಾದರಿಯಾದ ಯುಂಗ್ ಬೆಳಗಾವಿ ಪೌಂಡೇಶನ್ ಸಂಸ್ಥೆ..
ಬೆಳಗಾವಿ : ನಗರದಲ್ಲಿ ಎಂದಿನಂತೆ ಅಲನ್ ವಿಜಯ್ ಮೋರೆ ಅವರ ನೇತೃತ್ವದ “ಯಂಗ್ ಬೆಳಗಾವಿ ಫೌಂಡೇಶನ್” ವತಿಯಿಂದ, ಜೈಭಾರತಮಾತಾ ನಗರದ ಗ್ರಾಮೀಣ ಪ್ರದೇಶಗಳಿಗೆ ಮತ್ತು ಬೆಳಗಾವಿಯ ಕೆಲ ನಿರಾಶ್ರಿತರ ಕಾಳಜಿ ಕೇಂದ್ರಕ್ಕೆ 100 ಕೆಜಿ ಅಕ್ಕಿ ಚೀಲಗಳ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ..

ಪ್ರತಿ ದಿನ, ಪ್ರತಿ ತಿಂಗಳು ಯಾವುದಾದರೂ ಒಂದು ಸಮಾಜಮುಖಿ ಕೆಲಸದಲ್ಲಿ ಭಾಗಿಯಾಗಿ, ಆ ಮೂಲಕ ಬಡ ನಿರ್ಗತಿಕರಿಗೆ ಸಹಾಯ ಹಸ್ತ ನೀಡುವ ಈ ಸಂಸ್ಥೆಯ ಕಾರ್ಯ ಎಲ್ಲರೂ ಮೆಚ್ಚುವಂತಹದಾಗಿದ್ದು, ಸಮಾಜಕ್ಕೆ ಮಾದರಿಯಾಗಿದೆ..
ಸಹಾಯ ಪಡೆದುಕೊಂಡ ಸ್ಥಳೀಯರು ಹಾಗೂ ಕಾಳಜಿ ಕೇಂದ್ರದ ಸದಸ್ಯರು ಸಂಸ್ಥೆಯ ಈ ಸಹಾಯಕ್ಕೆ ಸಂತಸಗೊಂಡು ಧನ್ಯವಾದ ತಿಳಿಸಿ, ಮತ್ತಷ್ಟು ಸಮಾಜಮುಖಿ ಕಾರ್ಯ ಮಾಡುವ ಶಕ್ತಿ ಈ ಸಂಸ್ಥೆಗೆ ಲಭಿಸಲಿ ಎಂದು ಪ್ರಾರ್ಥಿಸಿದರು..
ಈ ಸಹಾಯಹಸ್ತ ಸಂದರ್ಭದಲ್ಲಿ ಅದ್ವೈತ್ ಚವ್ಹಾಣ ಪಾಟೀಲ್, ಸಂದೀಪ್ ಸೋಮನಟ್ಟಿ, ಆದಿತ್ಯ ಗಾವಡೆ, ಲಕ್ಕಿ ಸೋಲಂಕಿ, ಶ್ರೀಕರ್, ನಿತಿನ್ ಸೇರಿದಂತೆ ಸಂಸ್ಥೆಯ ಇನ್ನಿತರ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ..