ಬಾಳು ನರಸು ಕೋಲಕಾರ ನಿಧನ…

ಬಾಳು ನರಸು ಕೋಲಕಾರ ನಿಧನ.

ಬೆಳಗಾವಿ : ತಾಲೂಕಿನ ಅಗಸಗಿ ಗ್ರಾಮದ ಅಂಬೇಡ್ಕರ್ ಗಲ್ಲಿಯ ನಿವಾಸಿ ಬಾಳು (ಆನಂದ) ನರಸು ಕೋಲಕಾರ(48) ಬುಧವಾರ ದಿ 3‌ ರಂದು ಮಧ್ಯಾಹ್ನ ತೀವ್ರ ಅನಾರೊಗ್ಯದಿಂದ ನಿಧನರಾಗಿದ್ದು, ಮೃತರು ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಒರ್ವ ಪುತ್ರ, ಒರ್ವ ಸಹೋದರ, ಮೂವರು ಸಹೋದರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತ ಬಾಳು ಕೋಲಕಾರ ಅವರು ಅನಾರೋಗ್ಯಕ್ಕೂ‌ ಮುಂಚೆ ಸಂಗ್ಯಾ ಬಾಳ್ಯಾ ಸೇರಿದಂತೆ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರು, ಅಲ್ಲದೇ ದಲಿತ ಸಂಘರ್ಷ ಸಮಿತಿಯ ಸಕ್ರಿಯ ಕಾರ್ಯಕರ್ತರಾಗಿ ಹಲವಾರು ವರ್ಷ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು.

ಅವರ ನಿಧನದಿಂದ ಅವರ ಕುಟುಂಬಕ್ಕೆ ಹಾಗೂ ದಲಿತ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ, ಪ್ರಕೃತಿ ಅವರ ಕುಟುಂಬಕ್ಕೆ ದುಖ ಭರಿಸುವ ಶಕ್ತಿ ನೀಡಲಿ ಎಂದು ಕೇಳಿಕೊಂಡ ಹಿತೈಷಿಗಳು..

ವರದಿ ಸಂತೋಷ ಮೇತ್ರಿ.