ಮಾಜಿ ಶಾಸಕ ಸಂಜಯ ಪಾಟೀಲ ಮನೆಮುಂದೆ ಗಲಾಟೆ ಮತ್ತು ಅವಾಚ್ಯ ಶಬ್ದಗಳ ನಿಂದನೆ..
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಹಲವು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು..
ಬೆಳಗಾವಿ : ಶುಕ್ರವಾರ ದಿನಾಂಕ 13/04/2024ರ ರಾತ್ರಿ ಬಿಜೆಪಿಯ ಮಾಜಿ ಶಾಸಕ ಹಾಗೂ ಮಾಜಿ ಗ್ರಾಮೀಣ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿದ್ದ ಸಂಜಯ ಪಾಟೀಲ್ ಅವರ ಮನೆಗೆ ಕಾನೂನುಬಾಹಿರವಾಗಿ ಪ್ರವೇಶಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪಾಟೀಲರ ಆಪ್ತನ ಮೇಲೆ ಹಲ್ಲೆ ಮಾಡಿರುವರು ಎಂದು ಸಂಜಯ ಪಾಟೀಲ ಅವರು ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ…
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು, ತಮ್ಮ ಬೆಂಬಲಿಗರಿಗೆ ಪ್ರಚೋದನೆ ನೀಡಿ, ಸುಮಾರು 100 ಜನರನ್ನು ತಮ್ಮ ಮನೆಗೆ ಕಳುಹಿಸಿ ಗೂಂಡಾ ವರ್ತನೆ ಮಾಡಿ, ಮಾರಣಾಂತಿಕ ಹಲ್ಲೆಗೆ ಮುಂದಾಗಿದ್ದರು ಎಂಬ ಆರೋಪ ಮಾಡಿ ಪ್ರಕರಣ ದಾಖಲು ಮಾಡಿದ್ದಾರೆ..
ಲಕ್ಷ್ಮಿ ಹೆಬ್ಬಾಳ್ಕರ್, ಆಯೇಷಾ ಸನದಿ, ಸುಜಯ ಜಾಧವ, ಜಯಶ್ರೀ ಸೂರ್ಯವಂಶಿ, ಪ್ರಭಾವತಿ ಮಾಸ್ತಮರಡಿ, ಮುಸ್ತಾಕ್ ಮುಲ್ಲಾ, ಸದ್ದಾಂ ವೈಭವನಗರ, ರೋಹಿಣಿ ಬಾಬಟೆ, ಸಂಗನಗೌಡ ಪಾಟೀಲ್, ಇತರರು ಸೇರಿ ನೂರು ಜನರ ಮೇಲೆ ಹ ಆರೋಪದ ಪ್ರಕರಣ ದಾಖಲು ಆಗಿದೆ..
ವರದಿ ಪ್ರಕಾಶ ಕುರಗುಂದ..