ಜನರ ಅಭಿಪ್ರಾಯ ಸಂಗ್ರಹಿಸಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ..

ಜನರ ಅಭಿಪ್ರಾಯ ಸಂಗ್ರಹಿಸಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ಬೆಳಗಾವಿ: 2014 ರ ಚುನಾವಣೆ ದೇಶದ ಹಿತದೃಷ್ಟಿಯಿಂದ ದೊಡ್ಡ ಚುನಾವಣೆ ಆಗಿತ್ತು, ಈ ಬಾರಿಯ ಚುನಾವಣೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ, ಜನರ ಅಭಿಪ್ರಾಯ ಸಂಗ್ರಹಿಸಿ, ನಮ್ಮ ಸಂಕಲ್ಪ ಪತ್ರ ಬಿಡುಗಡೆ ಮಾಡಿದ್ದೇವೆ.‌ ಮೋದಿ ಗ್ಯಾರಂಟಿ ಹೆಸರಿನ ಮೇಲೆ ನಾವು ಮಾಡಿರುವ ಸಂಕಲ್ಪ ಹಾಗೂ ವಾಗ್ದಾಣವ‌ನ್ನು ಈಗಾಗಲೇ ನಾವು ತಿಳಿಸಿದ್ದೇವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರು ತಿಳಿಸಿದ್ದಾರೆ.

ಮಂಗಳವಾರ ಲಕ್ಷ್ಮಿ ಕಾಂಪ್ಲೆಕ್ಷನಲ್ಲಿ ಮಾದ್ಯಮಗೊಷ್ಠಿ ನಡೆಸಿ ಮಾತನಾಡಿದ ಅವರು, ಇಲ್ಲಿಯವರೆಗೆ ಬೇರೆ ಬೇರೆ ರಾಜಕೀಯ ಪ್ಷಕಗಳು ಜಾತಿ ಆಧಾರದ ಮೇಲೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಈ ವ್ಯವಸ್ಥೆಯ ನಾಲ್ಕು ವರ್ಗಗಳನ್ನು ಗಮನದಲ್ಲಿ ಇಟ್ಟುಕೊಂಡು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.‌ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ದೇಶದ ಅಭಿವೃದ್ಧಿ ದೃಷ್ಟಿಯಿಂದ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.‌

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ “ಒಂದು ದೇಶ ಒಂದು ಚುನಾವಣೆ” ಮಾಡುತ್ತೇವೆ.‌ ಜೊತೆಗೆ ಗರಿಬ್ ಕಲ್ಯಾಣ ಯೋಜನೆಯಡಿ ಮುಂದಿನ ಐದು ವರ್ಷ ಪ್ರತಿ ವ್ಯಕ್ತಿಗೆ “ಐದು ಕೆಜಿ ಅಕ್ಕಿ” ವಿತರಣೆ ಮಾಡುತ್ತೇವೆ.‌ ಇಂದು ನಾವು ಆರ್ಥಿಕ ಸ್ಥಿಯಲ್ಲಿ ಸುಧಾರಣೆ ಆಗಿದ್ದು, ಐದನೆಯ ಸ್ಥಾನದಲ್ಲಿದ್ದೇವೆ ಅದನ್ನು ಮೂರನೆ ಸ್ಥಾನಕ್ಕೆ ತರುತ್ತೇವೆ.‌ ಆಯುಸ್ಮಾನ ಯೋಜನೆಯಡಿ ತೃತಿಯ ಲಿಂಗ ಹಾಗೂ 70 ವಯಸ್ಸು ಆದವರಿಗೂ ವಿಸ್ತರಣೆ ಮಾಡುತ್ತೇವೆ.‌ ಬರುವ ಐದು ವರ್ಷದಲ್ಲಿ ಮೂರು ಕೋಟಿ ಮನೆಗಳ ನಿರ್ಮಾಣದ ಗುರಿ ಇದೆ ಎಂದರು.

ಒಂದೆ ಭಾರತ ರೈಲ್ವೆ ಜೊತೆಗೆ ದೇಶದ ನಾಲ್ಕು ದಿಕ್ಕಿಗೆ ಬುಲೆಟ್ ರೈಲ್ವೆ ಯೋಜನೆ ಮಾಡಲಿದ್ದೇವೆ.‌ ಮುದ್ರಾ ಯೋಜನೆಯಡಿ 10 ಲಕ್ಷ ಇದ್ದ ಸಾಲದ ಮೊತ್ತವನ್ನು 20 ಲಕ್ಷಕ್ಕೆ ಹೆಚ್ಚಿಗೆ ಮಾಡಲಿದ್ದೇವೆ ಜಗತ್ತಿನ ಬೇರೆ ಬೇರೆ ರಾಜಕೀಯ ಪಕ್ಷಗಳು ನಮ್ಮ ಚುನಾವಣೆ ನೋಡಲು ಬರುತ್ತಿದ್ದಾರೆ. ಬೇರೆ ಬೇರೆ ದೇಶದ 15 ರಾಷ್ಟ್ರೀಯ ಪಕ್ಷಗಳು ನಮ್ಮ ಚುನಾವಣೆ ನೋಡಲು ಬರುತ್ತಿದ್ದಾರೆ ಎಂದು ತಿಳಿಸಿದರು.‌

ಈ ಬಾರಿಯ ಚುನಾವಣೆಯಲ್ಲಿ “ನಾನು ಮೋದಿಯ ಪರಿವಾರ ಎಂಬ ಕ್ಯಾಂಪೇನ್ ನಡೆಯುತ್ತಿದೆ. ಬೇರೆ ಬೇರೆ ಕ್ಷೇತ್ರದ ಜನರು ನಾನು ಮೋದಿ ಪರಿವಾರ, ಮೋದಿಗಾಗಿ ಈ ಭಾನುವಾರ ಹೀಗೆ ಮೂರು ಭಾನುವಾರ ಅಭಿಯಾನ ನಡೆಯಲಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಾಡಾಡಿಯವರು ತಿಳಿಸಿದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ..