ಬೆಳಗಾವಿಯಲ್ಲಿ ಎಬಿವಿಪಿ ಪ್ರತಿಭಟನೆ…

ಬೆಳಗಾವಿಯಲ್ಲಿ ಎಬಿವಿಪಿ ಪ್ರತಿಭಟನೆ..

ಬೆಳಗಾವಿ : ಹುಬ್ಬಳಿಯ ಬಿವಿಬಿ ಕಾಲೇಜಿನ ಎಂಸಿಎ ವಿಧ್ಯಾರ್ಥಿನಿಯಾದ ನೇಹಾ ಹಿರೇಮಠ ಅವರನ್ನು ಲವ್ ಜಿಹಾದಿಯ ಕಾರಣಕ್ಕಾಗಿ, ಪಯಾಜ್ ಎಂಬ ಯುವಕ ನಡೆಸಿರುವ ಹತ್ಯೆಯ ಕೃತ್ಯವನ್ನು ಖಂಡಿಸಿ, ನಗರದಲ್ಲಿಂದು ಎಬಿವಿಪಿ ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು..

ಶಾಲಾ ಕಾಲೇಜು ಜ್ಞಾನದ ದೇಗುಲಗಳು, ಇಂತಲ್ಲಿ ಹಾಡುಹಗಲೇ ಹತ್ಯೆಯ ಘಟನೆ ನಡೆಯುತ್ತದೆ ಎಂದರೆ ಇಡೀ ವಿಧ್ಯಾರ್ಥಿ ವಲಯದಲ್ಲಿಯೇ ಭಯದ ವಾತಾವರಣ ನಿರ್ಮಾಣವಾಗುತ್ತದೆ, ಪಯಾಜ್ ಎಂಬ ಯುವಕ ಪ್ರೀತಿಯ ವಿಷಯವಾಗಿ, ಪ್ರೀತಿ ನಿರಾಕರಣೆಯ ಕಾರಣ ಇಟ್ಟುಕೊಂಡು, ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಯನ್ನು ಅಮಾನವೀಯವಾಗಿ ಒಂಬತ್ತು ಸಾರಿ, ಚಾಕುವಿನಿಂದ ಇರಿದು ಕ್ರೂರತನ ತೋರಿದ್ದಾನೆ.

ರಾಜಾರೋಷವಾಗಿ ಕಾಲೇಜಿಗೆ ನುಗ್ಗಿ ಹತ್ಯೆ ಮಾಡುವ ಇಂತಹ ಕ್ರೂರರನ್ನು, ಆದಷ್ಟು ಬೇಗ ಬಂಧಿಸಿ, ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆದಷ್ಟು ಬೇಗ ಇಂತವರಿಗೆ ಉಗ್ರ ಶಿಕ್ಷೆ ನೀಡಬೇಕು, ಜೊತೆಗೆ ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ನೀಡಬೇಕೆಂದು ಎಬಿವಿಪಿ ಘಟಕ ಆಗ್ರಹಿಸಿತು..

ಇಂತಹ ಘಟನೆಗಳು ಆಗುವ ಮುಂಚೆಯೇ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಮುಂಜಾಗ್ರತೆ ಕೈಗೊಂಡು, ಶಾಲಾ ಕಾಲೇಜು ವಲಯಗಳಲ್ಲಿ ಮಪ್ತಿ ಪೊಲೀಸ್ ಸಿಬ್ಬಂದಿಗಳನು ನಿಯೋಜಿಸಿ, ಇಂತಹ ಕೃತ್ಯ ನಡೆಯದಂತೆ ತಡೆಯಬೇಕು, ಆ ಮೂಲಕ ವಿದ್ಯಾರ್ಥಿವಲಯದಲ್ಲಿ ನೆಮ್ಮದಿಯಿಂದ ಅಧ್ಯಯನ ಮಾಡುವ ವಾತಾವರಣ ನಿರ್ಮಿಸಬೇಕು ಎಂದು ಮನವಿ ಮಾಡಲಾಯಿತು..

ವರದಿ ಪ್ರಕಾಶ ಕುರಗುಂದ..