ರಾಮದುರ್ಗ ತಾಲ್ಲೂಕಿನಲ್ಲಿ ಬಿಜೆಪಿಗೆ ಸಂಪೂರ್ಣ ಬೆಂಬಲ ಸೂಚಿಸಿದ ಮತದಾರರು…

ರಾಮದುರ್ಗ ತಾಲ್ಲೂಕಿನಲ್ಲಿ ಬಿಜೆಪಿಗೆ ಸಂಪೂರ್ಣ ಬೆಂಬಲ ಸೂಚಿಸಿದ ಮತದಾರರು…

ಜಗದೀಶ್ ಶೆಟ್ಟರಗೆ ಜನರ ಜೈಕಾರ..

ಬೆಳಗಾವಿ: ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ರಾಮದುರ್ಗ ವಿಧಾನಸಭಾ ಕ್ಷೇತ್ರದ ಬಾಗೋಜಿಕೊಪ್ಪ, ಚಿಕ್ಕೊಪ್ಪ, ಹೊಸಳ್ಳಿ ಹಾಗೂ ಹುಲಕುಂದ ಗ್ರಾಮಗಳಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು, ಮಿಂಚಿನ ಸಂಚಾರ ನಡೆಸಿ ಮತಯಾಚನೆ ಮಾಡಿದರು.‌

ಇಂದು ರಾಮದುರ್ಗ ತಾಲೂಕಿನ್ಯಾದ್ಯಂತ ಜಗದೀಶ ಶೆಟ್ಟರ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಮಿಂಚಿನ ಸಂಚಾರ ನಡೆಸಿದರು.‌ ಈ ವೇಳೆ ವಿವಿಧ ದೇವಸ್ಥಾನ, ಹಾಗೂ ಮಠಗಳಿಗೆ ಭೇಟಿ ನೀಡಿ ಆಶಿರ್ವಾದ ಪಡೆದರು.‌ ವಿವಿಧ ಗ್ರಾಮಗಳಲ್ಲಿ ಸಭೆ ನಡೆಸಿದರು‌. ಸಭೆಯಲ್ಲಿ ಮಾತನಾಡದಿ ಜಗದೀಶ್ ಶೆಟ್ಟರ್ ಅವರು, ಭಾರತ ದೇಶಕ್ಕೆ ಜಗತ್ತಿನಲ್ಲಿ ಗೌರವ ಕೊಡಿಸುವ ಕೆಲಸ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಾರೆ. ತಮ್ಮ ಆಡಳಿದ 10 ವರ್ಷದಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಯಾವುದೇ ಒಂದು ಭ್ರಷ್ಟಾಚಾರದ ಆರೋಪ ಇಲ್ಲದೆ.‌ ಅತ್ಯುತ್ತಮವಾದ ಆಡಳಿತವನ್ನು ನರೇಂದ್ರ ಮೋದಿಯವರು ಕೊಟ್ಟಿದ್ದಾರೆ. ಇಡೀ ಜಗತ್ತಿಗೆ ನಂಬರ್ ಒನ್ ನಾಯಕ ಎಂದರೆ ಅದು ನರೇಂದ್ರ ಮೋದಿಯವರು. ಬೆಳಗಾವಿ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮತಯಾಚನೆ ಮಾಡಿದರು.

ರಾಮದುರ್ಗ ತಾಲೂಕಿಗೆ ಮೀನಿ ವಿಧಾನಸೌಧ ಕೊಟ್ಟಿದ್ದು ಜಗದೀಶ್ ಶೆಟ್ಟರ್

ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಮಾತನಾಡಿ, ರಾಜ್ಯದಲ್ಲಿ ಅನೇಕ ಅಹಿತಕರ ಘಟನೆಗಳು ನಡೆಯುತ್ತಿದೆ. ಹುಬ್ಬಳ್ಳಿಯಲ್ಲಿ ನೇಹಾ ಎಂಬ ವಿದ್ಯಾರ್ಥಿಯ ಕೊಲೆ ಆಗಿದೆ. ಗದಗನಲ್ಲಿ ನಾಲ್ಕು ಜನರ ಕೊಲೆ ಆಗಿದೆ. ‌ಈ ರೀತಿ ಘಟನೆಗಳು ಖಂಡನಿಯ. ಜಗದೀಶ್ ಶೆಟ್ಟರ್ ಅವರು ಕಂದಾಯ ಸಚಿವರಿದ್ದಾಗ ರಾಮದುರ್ಗ ತಾಲೂಕಿಗೆ ಮೀನಿ ವಿಧಾನಸೌಧ ಮಂಜುರು ಮಾಡಿದರು. ‌ಜಗದೀಶ್ ಶೆಟ್ಟರ್ ಅವರು ಸಾಕಷ್ಟು ಅನುಭವ ಇರುವ ರಾಜಕಾರಣಿ. ‌ಅವರು ಪ್ರಭಲ ವ್ಯಕ್ತಿಯಾಗಿ ಕೆಲಸ ಮಾಡುತ್ತಾರೆ.‌ ಜಗದೀಶ್ ಶೆಟ್ಟರ್ ಅವರು ಗೆದ್ದ ಬಳಿಕ ರೈಲ್ವೇ ಸಚಿವರಾಗುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು. ‌

ಸಭೆಯಲ್ಲಿ ಬಾಬು ಮಹಾರಾಜ ಶ್ರೀಗಳು ಮಾತನಾಡಿ, ವಿದೇಶದಲ್ಲಿ ಸ್ವಾಮಿ ವಿವೇಕಾನಂದರು ನಮ್ಮ ಸಂಸ್ಕೃತಿಯನ್ನು ಪರಿಚಯಿಸಿದರು ಆ ಸಂಸ್ಕೃತಿಯನ್ನು ಉಳಿಸಲು ದೇಶ ಕಂಡ ಅಪರೂಪದ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು.‌ ಚೂರಿ ಹಾಕಲು ಬಂದವರು ಕೂಡ ನಮ್ಮವರು ಎಂದು ನರೇಂದ್ರ ಮೋದಿಯವರು ಹೇಳುತ್ತಾರೆ. ಮೋದಿ ಮತ್ತೆ ಪ್ರಧಾನಿ ಆಗಲು ಸಾತ್ವಿಕ ಸಂಪನ್ನ, ಸರಳ ಸಜ್ಜನಿಕೆ, ಹಾಗೂ ಸಾಕಾರ ಮೂರ್ತಿ ಜಗದೀಶ್ ಶೆಟ್ಟರ್ ಅವರನ್ನು ಆರಿಸಿ ತರಬೇಕು.‌ ಜಗದೀಶ್ ಶೆಟ್ಟರ್ ಅವರು ಗೆದ್ದು ಎಲ್ಲರ ಕಷ್ಟಗಳನ್ನು ನಿವಾರಣೆ ಮಾಡಲಿ

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಹನುಮಂತ ನಿರಾಣಿ, ಮಾಜಿ ಶಾಸಕರಾದ ಮಹದೇವಪ್ಪ ಯಾದವಾಡ, ಮಾಜಿ ವಿಧಾನಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಮಂಡಲ ಅಧ್ಯಕ್ಷರಾದ ರಾಜೇಶ್ ಬಿಳಗಿ, ಪ್ರಮುಖರಾದ ಪಿ. ಎಫ್. ಪಾಟೀಲ್, ರಮೇಶ ದೇಶಪಾಂಡೆ, ಮಾರುತಿ ಕೊಪ್ಪದ, ರೇಖಾ ಚಿನ್ನಿಕಟ್ಟಿ, ಬಸವರಾಜ ರಾಮಗೊಂಡ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಪ್ರಕಾಶ್ ಕುರಗುಂದ..