ಚುನಾವಣಾ ಸಂದರ್ಭದಲ್ಲಿ ಸಿಡಿ, ಫೆಂಡ್ರೈವ್ ಬಿಡುಗಡೆಯಲ್ಲಿ ಕೆಲ ಕಾಂಗ್ರೆಸ್ಸಿಗರು ನಿಸ್ಸೀಮರು..

ಚುನಾವಣಾ ಸಂದರ್ಭದಲ್ಲಿ ಸಿಡಿ, ಫೆಂಡ್ರೈವ್ ಬಿಡುಗಡೆಯಲ್ಲಿ ಕೆಲ ಕಾಂಗ್ರೆಸ್ಸಿಗರು ನಿಸ್ಸೀಮರು..

ಡಿ ಕೆ ಶಿವಕುಮಾರ್ ಗ್ಯಾಂಗ ಹತ್ತಿರ ಸಿಡಿ ಬಾಕ್ಸ್ ಇದೆ.

ಇದೆ ಖಾಸಗಿ ವಿಡಿಯೋ ಪ್ರಸಾರದ ವಿಷಯವಾಗಿ ಹಿಂದೆ ಕೆಲ ರಾಜಕಾರಣಿಗಳು ಕೋರ್ಟ್ ಸ್ಟೇ ಹೋದದ್ದೇಕೆ ??

ಜಗದೀಶ್ ಹಿರೇಮನಿ, ನಿಕಟಪೂರ್ವ ಬಿಜೆಪಿ ರಾಜ್ಯ ಕಾರ್ಯದರ್ಶಿ..

ಬೆಳಗಾವಿ : ಚುನಾವಣಾ ಸಂದರ್ಭದಲ್ಲಿ ಈ ರೀತಿಯ ಖಾಸಗಿ ವಿಡಿಯೋ ಹರಿಬಿಡುವದು ಹಾಗೂ ಆರೋಪಗಳನ್ನು ಮಾಡುವದರಲ್ಲಿ ಕಾಂಗ್ರೆಸ್ ಪಕ್ಷದವರು ನಿಸ್ಸೀಮರು, ಹಿಂದೆ ಎಷ್ಟೋ ಸಲ ಇದೆ ರೀತಿಯ ವಾಮಮಾರ್ಗದ ಮೂಲಕ ಎಷ್ಟೋ ನಾಯಕರಿಗೆ ಮೋಸ ಮಾಡಿ, ಅಧಿಕಾರ ಪಡೆದ ದುರ್ಬುದ್ಧಿಯ ಕೆಲ ಜನರು ಕಾಂಗ್ರೆಸ್ಸಿನಲ್ಲಿ ಇದ್ದಾರೆ ಎಂದು ಜಗದೀಶ್ ಹಿರೇಮನಿ ಕಿಡಿ ಕಾರಿದ್ದಾರೆ..

ಮಂಗಳವಾರ ಬಿಜೆಪಿಯ ಚುನಾವಣಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯ ನಂತರ, ಪ್ರಜ್ವಲ ರೇವಣ್ಣ ಅವರ ವಿಚಾರವಾಗಿ ಮಾತನಾಡಿದ ರಾಜ್ಯ ಬಿಜೆಪಿಯ ನಿಕಟಪೂರ್ವ ಕಾರ್ಯದರ್ಶಿಯಾದ ಜಗದೀಶ್ ಹಿರೇಮನಿ ಅವರು, ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಆಗುವುದರಲ್ಲಿ ಸಂಶಯವಿಲ್ಲ, ಬಿಜೆಪಿ ವರಿಷ್ಠರು ಕೂಡಾ ಇದೆ ಮಾತು ಹೇಳಿದ್ದು, ಈ ವಿಷಯ ಮೊದಲೇ ಚರ್ಚೆಗೆ ಬಾರದೇ, ಚುನಾವಣೆಯಲ್ಲಿ ರಾಜಕೀಯ ಲಾಭದ ಉದ್ದೇಶ ಇಟ್ಟುಕೊಂಡು ಕಾಂಗ್ರೆಸ್ಸಿನವರು ಇಂತಹ ಕೆಲಸವನ್ನು ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ, ಡಿ ಕೆ ಶಿವಕುಮಾರ್ ಅವರ ಬಳಿ ಸಿಡಿ ಬಾಕ್ಷೆ ಇದೆ ಎಂದಿದ್ದಾರೆ..

ಹಿಂದೆ ಪಕ್ಷಾತೀತವಾಗಿ ಎಷ್ಟೋ ಜನಪ್ರತಿನಿಧಿಗಳ ಖಾಸಗಿ ವಿಡಿಯೋಗಳು ಇರುವಾದದಾಗಿ, ಅವು ಹೊರಬರುತ್ತವೆ ಎಂಬ ಮಾತುಗಳು ಕೇಳಿಬಂದಾಗ, ಕೆಲವರು ಯಾಕೆ ಕೋರ್ಟ್ ಸ್ಟೇ ಹೋದರು?? ಆಗ ಅವರು ಪ್ರಾಮಾಣಿಕ ತನಿಖೆ ಆಗಲಿ ಎಂದು ಏಕೆ ಸುಮ್ಮನಿರಲಿಲ್ಲ?? ತಮಗೆ ಅನುಕೂಲ ಆಗಲು ಸ್ಟೇ ತರುವದು, ಬೇರೆಯವರ ವಿಷಯದಲ್ಲಿ ಮಾತ್ರ ತಕ್ಷಣ ತನಿಖೆ, ಕ್ರಮ ಆಗಬೇಕು ಎನ್ನುವ ದ್ವಂದ್ವ ನೀತಿ ಯಾಕೆ ಎಂದು ಪ್ರಶ್ನೆ ಮಾಡಿದರು..

ಮಹಿಳೆಯರಿಗೆ ಗೌರವ ನೀಡುವಂತ, ಸನ್ಮಾನ ಮಾಡುವಂತ ಪಕ್ಷ ನಮ್ಮ ಬಿಜೆಪಿ ಪಕ್ಷ, ಒಂದು ವೇಳೆ ಮಹಿಳಾ ದೌರ್ಜನ್ಯ ಆಗಿದ್ದರೆ, ಪ್ರಜ್ವಲ್ ರೇವಣ್ಣ ಅವರು ತಪ್ಪಿತಸ್ಥರಾಗಿದ್ದರೆ ನ್ಯಾಯಯುತ ಕ್ರಮ ಆಗಲೇಬೇಕು, ಮೊದಲೇ ಈ ವಿಷಯ ಕಾಂಗ್ರೆಸ್ಸಿಗೆ ಗೊತ್ತಿತ್ತು ಎಂದರೆ ಆಗಲೇ ಈ ವಿಷಯವಾಗಿ ಕ್ರಮಕ್ಕೆ ಒತ್ತಾಯಿಸಬೇಕಿತ್ತು, ಈಗ ಚುನಾವಣಾ ಲಾಭಕ್ಕಾಗಿ ಮಾಡುವದಲ್ಲ ಎಂದರು..

ವರದಿ ಪ್ರಕಾಶ್ ಕುರಗುಂದ..