ಬೆಳಗಾವಿಯಲ್ಲಿ ಹಿಂದೂ ಬಾಲ ಸಂಸ್ಕಾರ ಶಿಬಿರ..

ಬೆಳಗಾವಿಯಲ್ಲಿ ಹಿಂದೂ ಬಾಲ ಸಂಸ್ಕಾರ ಶಿಬಿರ..

ಹಿಂದೂಧರ್ಮ, ಯೋಗ ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ಶಿಬಿರ.

ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ವಿಚಾರಗಳಿರಬೇಕು..

ಡಾ, ಸೋನಾಲಿ ಸರ್ನೋಬತ..

ಬೆಳಗಾವಿ : ಜಿಜಾವು ಬ್ರಿಗೇಡ್‌ನ ರಾಜಮಾತಾ ಜಿಜಾವು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹಿಂದೂ ಬಾಲ ಸಂಸ್ಕಾರ ಶಿಬಿರವನ್ನು ಆಯೋಜಿಸಲಾಗಿತ್ತು.

ನಗರದ ಉದಯ ಭವನದಲ್ಲಿ ದಿನಾಂಕ 15.5.24 ಬುಧವಾರದಂದು ಡಾ, ಸೊನಾಲಿ ಸರ್ನೋಬತ್ ಮತ್ತು ಇತರ ಕಾರ್ಯಕರ್ತ ಸಹೋದರಿಯರ ಉಪಸ್ಥಿತಿಯಲ್ಲಿ 1- 10 ನೇ ತರಗತಿಯವರೆಗಿನ ಬಾಲಕ ಮತ್ತು ಬಾಲಕಿಯರಿಗಾಗಿ ಒಂದು ದಿನದ ಶಿಬಿರವನ್ನು ಆಯೋಜಿಸಲಾಗಿದ್ದು, ಶಿಬಿರಕ್ಕೆ ಕಿಶೋರ್ ಕಾಕಡೆ ಮತ್ತು ಡಾ ಸೊನಾಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಶಿಬಿರದ ಉದ್ದೇಶವನ್ನು ವಿವರಿಸಿದರು, ಕಾಕಡೆ ಸರ ದೇಶಭಕ್ತಿ ಗೀತೆಗಳನ್ನು ಕಲಿಸಿದರು, ಡಾ ಸೊನಾಲಿ ಹಿಂದೂ ಧರ್ಮದ ಬಗ್ಗೆ ಮಾಹಿತಿ ನೀಡಿದರು, ನಿಮಾಯಿ ಪಾಟೀಲ್ ಅವರು ಜೀವನದಲ್ಲಿ ಯೋಗದ ಮಹತ್ವದ ಕುರಿತು ತಿಳಿಸಿದರು.
ಭೋಜನದ ನಂತರದ ಅವಧಿಯಲ್ಲಿ, ಶ್ರೀಮತಿ ಸುನೀತಾ ಪಾಟಣಕರ್ ಅವರು ಕಳೆದ ಅವಧಿಯಲ್ಲಿ ಬೆಳಗಿನ ಆಟಗಳಲ್ಲಿ ವಿಜೇತರಿಗೆ ಕಲೆ ಮತ್ತು ಕರಕುಶಲ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.

ಕಾಂಚನ್ ಚೌಗುಲೆ, ಗೀತಾ ಚೌಗುಲೆ, ಆಶಾರಾಣಿ ನಿಂಬಾಳ್ಕರ್, ನೀನಾ ಕಾಕತ್ಕರ್, ಮಂಗಲ್ ಪಾಟೀಲ್, ಚಂದ್ರ ಚೋಪ್ಡೆ, ದೀಪಾಲಿ ಮಲಕಾರಿ, ವೃಶಾಲಿ ಮೋರೆ, ರಾಜಶ್ರಿ
ಆಜಗಾಂವ್ಕರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ವಿಶೇಷ ಬೆಂಬಲ ನೀಡಿದರು.

ವರದಿ ಪ್ರಕಾಶ್ ಕುರಗುಂದ..