ಬೆಳಗಾವಿಯ ತುಳಸಿ ಅಭಿವೃದ್ಧಿ ಸಂಸ್ಥೆಯಲ್ಲಿ ಭಗೀರಥ ಜಯಂತಿಯ ಅರ್ಥಪೂರ್ಣ ಆಚರಣೆ…

ಬೆಳಗಾವಿಯ ತುಳಸಿ ಅಭಿವೃದ್ಧಿ ಸಂಸ್ಥೆಯಲ್ಲಿ ಭಗೀರಥ ಜಯಂತಿಯ ಅರ್ಥಪೂರ್ಣ ಆಚರಣೆ..

ಬೆಳಗಾವಿ : ಕೈಲಾಸದಿಂದ ದೇವಗಂಗೆಯನ್ನು ಧರೆಗೆ ತಂದ ಮಹಾತಪಸ್ವಿ, ಮಹರ್ಷಿ ಶ್ರೀ ಭಗೀರಥರ ಜಯಂತಿಯನ್ನು ಮಂಗಳವಾರ ದಿನಾಂಕ 14/05/2024ರಂದು, ಬೆಳಗಾವಿಯ ತುಳಸಿ ಅಭಿವೃದ್ಧಿ ಸಂಸ್ಥೆಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ..

ಈ ಸಂದರ್ಭದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡ ಸಂಸ್ಥೆಯ ಅಧ್ಯಕ್ಷೆಯಾದ ಲಕ್ಷ್ಮಿ ಗೊಟುರ, ಅವರು, ತಮ್ಮ ಘೋರ ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ತಂದು, ತನ್ನ ಪೂರ್ವಜರ ಶಾಪ ವಿಮೋಚನೆಗೊಳಿಸಿ, ಸಕಲ ಜೀವರಾಶಿಗಳಿಗೆ ಜಲದಾಹವನ್ನು ತಣಿಸಿದ ಮಾಹಾತಪಸ್ವಿ, ಉಪ್ಪಾರ ಕುಲದ ಮಾಹಾತಿಲಕರಾದ ಶ್ರೀ ಭಗೀರಥ ಮಹರ್ಷಿಯ ಸಾಧನೆ, ತ್ಯಾಗ, ಜೀವನ ಇಂದಿಗೂ ಪ್ರಸ್ತುತವಾಗಿದ್ದು, ಸಮಕಾಲೀನ ಜಗತ್ತಿಗೆ ಪಾಠವಾಗಿದೆ ಎಂದರು..

ಈ ವೇಳೆ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆಯಾದ ಲಕ್ಷ್ಮಿ ಗೋಟುರ, ಸರಸ್ವತಿ ಆಕಳೆ, ಎನ್ ಆರ್ ಲಾತುರ್, ರಾಜು ದಳವಾಯಿ, ವಿನಾಯಕ ಮದಲಬಾವಿ, ಭಾಗ್ಯಶ್ರೀ ಪಾಟೀಲ, ಕಲ್ಪನಾ ಇಟಗಿ, ಲಕ್ಷ್ಮಿ ಕೊರಿಶೆಟ್ಟಿ, ಹಾಗೂ ಉಪ್ಪಾರ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು..

ವರದಿ ಪ್ರಕಾಶ ಬಸಪ್ಪ ಕುರಗುಂದ..