ಕುಂದಾನಗರಿಯಲ್ಲಿ ಕನ್ನಡ ನಾಮಫಲಕ ಕಾಣುವದೇ ಖುಷಿ..
ಕನ್ನಡ ಕಡೆಗಣನೆಗೆ ಕಡಿವಾಣ ಹಾಕಿದ ಪಾಲಿಕೆ ಸಿಬ್ಬಂದಿಯ ಕಾರ್ಯ ಶ್ಲಾಘನೀಯ..
ಕನ್ನಡಪರ ಸಂಘಟನೆಗಳ ಕನ್ನಡ ಕಾಳಜಿಗೆ ಜನರ ಮೆಚ್ಚುಗೆ..
ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಇತ್ತೀಚೆಗೆ ಬಹುತೇಕ ಅಂಗಡಿ ಮುಗ್ಗಟ್ಟುಗಳ ಮೇಲಿರುವ ನಾಮಫಲಕಗಳು ಕನ್ನಡದಲ್ಲೇ ಬರೆದಿದ್ದು ಗಡಿಭಾಗದ ಕನ್ನಡಿಗರಿಗೆ ಸಂತಸ ಮೂಡಿಸುವ ಬೆಳವಣಿಗೆಯಾಗಿದೆ..
ಮೊದಲು 80, 90, ಹಾಗೂ 2000ರ ದಶಕಗಳಲ್ಲಿ ಕನ್ನಡ ಬೋರ್ಡ್ ಇರಲಿ, ಕನ್ನಡದಲ್ಲಿ ಮಾತನಾಡಿದರೆ ಸರಿಯಾದ ಮಾಹಿತಿ ಕೂಡಾ ನೀಡದಂತ, ಕನ್ನಡ ಭಾಷೆ, ಕಲೆ, ಸಂಸ್ಕೃತಿ, ಸಾಧನೆ, ಹಿರಿಮೆಗಳ ಬಗ್ಗೆ ಹಗುರವಾಗಿ ಮಾತನಾಡುವ ಪರಿಸ್ಥಿತಿ ನಗರದಲ್ಲಿತ್ತು, ಅದೇನೋ ಗೊತ್ತಿಲ್ಲ ಅನ್ಯ ಭಾಷಿಕರಿಗೆ ಕನ್ನಡದ ಮೇಲೆ ಯಾಕೆ ಮುನಿಸು ಅಂತ, ಕನ್ನಡ ಮಾತಾಡಿದರೆ, ಕನ್ನಡಿಗರೆಂದರೆ ಉತ್ತಮ ಸ್ಪಂದನೆಯ ಕೊರತೆಯಿತ್ತು.

ಆದರೆ ಇತ್ತೀಚೆಗೆ ಕನ್ನಡದ ಬಗ್ಗೆ ಕಾಳಜಿ ಇರುವ ಆಡಳಿತ ವ್ಯವಸ್ಥೆ, ಕನ್ನಡಪರ ಸಂಘಟನೆಗಳು, ಕನ್ನಡಕ್ಕಾಗಿ ಮಿಡಿಯುವ ಲಕ್ಷಾಂತರ ಮನಸ್ಸುಗಳ ಕಾರ್ಯವೈಖರಿ ಹಾಗೂ ಭಾಷಾಭಿಮಾನದ ಕಾರಣದಿಂದ, ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಬೆಳಗಾವಿಗೆ ಬಂದು ನೆಲೆ ನಿಲ್ಲುತ್ತಿರುವುದರಿಂದ ಇಂದು ಗಡಿಜಿಲ್ಲೆಯಲ್ಲಿ ಕನ್ನಡ ಕುಣಿದಾಡುತ್ತಿದೆ ಎನ್ನಬಹುದು..
ಅದೇ ರೀತಿ ಮೊದಲು ನಗದರದಲ್ಲಿಯ ಅಂಗಡಿ ಮುಗ್ಗಟ್ಟುಗಳ ನಾಮಫಲಕ ನೋಡಿದರೆ ನಾವು ಬೇರೆ ರಾಜ್ಯದಲ್ಲಿದ್ದೇವೇನೋ ಎಂಬ ಅನುಮಾನ ಮುಡುವಂತಿತ್ತು, ಆದರೆ ಕೆಲ ತಿಂಗಳ ಹಿಂದೆ ಜಾರಿಯಾದ ಹೈಕೋರ್ಟ್ ಆದೇಶದ ಮೇರೆಗೆ ಪಾಲಿಕೆಯ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಅಂಗಡಿ ಮುಗ್ಗಟ್ಟುಗಳ ನಾಮಪಲಕಗಳಲ್ಲಿ ಶೇ 60 ರಷ್ಟು ಕನ್ನಡ ಕಡ್ಡಾಯ ಇರಬೇಕೆಂದು ಆದೇಶ ಹೊರಡಿಸಿದ್ದು, ಕನ್ನಡಿಕಾರಣಕ್ಕೆ ಪ್ರಭಲ ಅಸ್ತ್ರವಾಯಿತು..

ಅಧಿಕಾರಿಗಳು ಈ ನಿಯಮವನ್ನು ಕಾರ್ಯರೂಪಕ್ಕೆ ತರುವಾಗಲೂ ಕೂಡಾ ಅನೇಕ ಅನ್ಯಭಾಷಾ ಪ್ರೇಮಿಗಳು ಇದಕ್ಕೆ ಅಡ್ಡಗಾಲು ಹಾಕಲು ವಿವಿಧ ಕಡೆಗಳಿಂದ ಪ್ರಯತ್ನ ಮಾಡಿಸಿದರು, ಆದರೆ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ವೇಳೆ ಯಾರ ಒತ್ತಡಕ್ಕೂ ಮಣಿಯದೆ, ಅನ್ಯ ಭಾಷೆಯ ನಾಮಫಲಕ ಕಿತ್ತು ಹಾಕಿಸಿ, ಕನ್ನಡ ನಾಮಫಲಕಗಳು ರಾರಾಜಿಸುವಂತೆ ಮಾಡಿದ್ದು ಮೆಚ್ಚುವಂತಹ ಕಾರ್ಯ..
ಜೊತೆಗೆ ಕನ್ನಡ ಸಂಘಟನೆಗಳ ಬಹುದಿನಗಳಿಂದಲು ಕನ್ನಡ ನಾಮಫಲಕಕ್ಕಾಗಿ ಹೋರಾಟ ಮಾಡುತ್ತಲೇ ಬರುತ್ತಿದ್ದು, ಇಂದಿನ ಈ ಪರಿಸ್ಥಿತಿ, ಎಲ್ಲಾ ಸಂಘಟನೆಯ ಹೋರಾಟದ ಫಲ ಹಾಗೂ ಇದರ ಶ್ರೇಯಸ್ಸು ಎಲ್ಲಾ ಹೋರಾಟಗಾರರಿಗೆ ಸಲ್ಲಬೇಕು..
ಆದರೆ ಇನ್ನು ಸ್ವಲ್ಪ ಭಾಗಗಳಲ್ಲಿ ಕನ್ನಡ ನಾಮಫಲಕಗಳ ಕೊರತೆ ಕಂಡುಬಂದಿದ್ದು, ಅಧಿಕಾರಿಗಳು ಸ್ವಲ್ಪ ಅತ್ತ ಗಮನ ಹರಿಸಿ, ಸಂಪೂರ್ಣ ಕನ್ನಡಮಯ ನಾಮಫಲಕ ನಗರದಲ್ಲೆಲ್ಲಾ ನಿರ್ಮಾಣವಾದರೆ ಪಾಲಿಕೆಯ ಆಡಳಿತದ ಬಗ್ಗೆ ಸಾರ್ವಜನಿಕರಲ್ಲಿ ಮತ್ತಷ್ಟು ಗೌರವ ಮೂಡುತ್ತದೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..