ಎಂದಿನಂತೆ ರೈತಪರ ಕಾಳಜಿ ಕಾರ್ಯ ಮಾಡಿದ ಮಾರಿಹಾಳ ಪಿಕೆಪಿಎಸ್..
ರಿಯಾಯತಿ ದರದಲ್ಲಿ ರೈತರಿಗೆ ಸೊಯಾಬೀನ್ ಬೀಜ ವಿತರಿಸಿದ ಸಂಘ..
ಬೆಳಗಾವಿ : ಸೋಮವಾರ ದಿನಾಂಕ 27/05/2024ರಂದು ಸಮೀಪದ ಮಾರಿಹಾಳ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ ರಿಯಾಯಿತಿ ದರದಲ್ಲಿ ಮುಂಗಾರಿನ ಬೆಳೆಯಾದ ಸೋಯಾಬಿನ್ ಬೀಜ ವಿತರಣೆಗೆ ಚಾಲನೆ ನೀಡಲಾಯಿತು.
ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮಾದಮ್ಮನವರ ನೇತೃತ್ವದಲ್ಲಿ ಎಲ್ಲಾ ಸದಸ್ಯರು ಸೇರಿ, ಸಂಘದ ವತಿಯಿಂದ ಮೊದಲಿನಿಂದಲೂ ಹಲವಾರು ರೈತ ಉಪಯೋಗಿ ಯೋಜನೆ, ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಈ ಮಾರಿಹಾಳ ಸಂಘ, ವ್ಯವಸಾಯಗಾರರ ವಿಶ್ವಾಸಕ್ಕೆ ಪಾತ್ರವಾಗಿದ್ದು, ಉತ್ತಮ ಕಾರ್ಯಗಳ ಮೂಲಕ ಮುನ್ನಡೆದಿದೆ..

ಅದೇ ರೀತಿ ಕಳೆದೆರಡು ದಿನಗಳ ಹಿಂದೆ ಮಾರಿಹಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರ ಸಲುವಾಗಿ ಮುಂಗಾರು ಬೆಳೆಯಾದ ಸೊಯಾಬೀನ್ ಬೀಜಗಳನ್ನು ವಿತರಣೆ ಮಾಡುತ್ತಿದ್ದು, ಇದರ ಸದುಪಯೋಗವನ್ನು ರೈತರು ಪಡೆಯಬಹುದಾಗಿದೆ.

ಈ ಸಂದರ್ಭದಲ್ಲಿ ಮಾರಿಹಾಳ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮಾದಮ್ಮನವರ, ಉಪಾಧ್ಯಕ್ಷರಾದ ಮಹಾದೇವ ಧನಾಯಿ, ಮುಖ್ಯ ಕಾರ್ಯನಿರ್ವಾಹಕರಾದ ರುದ್ರಪ್ಪ ಚನ್ನನ್ನವರ, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..