ಎಸ್ಎಸ್ಎಲ್ಸಿ ತೇರ್ಗಡೆಯಾದ ವಿಕಲಚೇತನ ವಿಧ್ಯಾರ್ಥಿಗಳಿಗೆ ಡಿಪ್ಲೊಮಾ ಕೋರ್ಸ್..
ವಿಕಲಚೇತನರಿಗೆ ಉತ್ತಮ ಭವಿಷ್ಯ ನೀಡುವ ಮೈಸೂರಿನ ಪಾಲಿಟೆಕ್ನಿಕ್..
ವಿಕಲಚೇತನರಿಗೆ ತರಬೇತಿ ಜೊತೆ ಉದ್ಯೋಗ ನೀಡುವ ಜಿಎಸ್ಎಸ್ ಸಂಸ್ಥೆ..
ಬೆಳಗಾವಿ : ರಾಜ್ಯ ಸರ್ಕಾರದ ಅನುದಾನಿತ ಹಾಗೂ ಎಐಸಿಟಿಇ ಮಾನ್ಯತೆ ಪಡೆದ ಮೈಸೂರಿನ ಜಿಎಸ್ಎಸ್ ವಿಕಲಚೇತನರ ಪಾಲಿಟೆಕ್ನಿಕ್ ಸಂಸ್ಥೆಯು ಸುಮಾರು 33 ವರ್ಷಗಳಿಂದ ರಾಜ್ಯ ಮತ್ತು ಹೊರರಾಜ್ಯದ ವಿಕಲಚೇತನ ವಿಧ್ಯಾರ್ಥಿಗಳಿಗೆ ಉತ್ತಮ ತಾಂತ್ರಿಕ ತರಬೇತಿ ನೀಡಿ, ಅವರ ಭವಿಷ್ಯಕ್ಕೆ ದಾರಿ ಮಾಡಿ ಕೊಟ್ಟಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಬಿ ಇಳಂಗೋವನ ಹೇಳಿದ್ದಾರೆ..
ಗುರುವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿಕಲಚೇತನ ವಿಧ್ಯಾರ್ಥಿಗಳಿಗೆ ಉನ್ನತ ವ್ಯಾಸಾಂಗ ಮಾಡಲು ಒಂದು ಸುವರ್ಣಾವಕಾಶ ಕಲ್ಪಿಸಿಕೊಟ್ಟ ಸಂಸ್ಥೆ ಎಂದರೆ ಅದು ಮೈಸೂರಿನ ಜಿಎಸ್ಎಸ್ ಸಂಸ್ಥೆಯ ವಿಕಲಚೇತನರ ಪಾಲಿಟೆಕ್ನಿಕ್ ಕಾಲೇಜು, 1991-92 ರಲ್ಲಿ ಪ್ರಾರಂಭವಾದ ಈ ಕಾಲೇಜು, ಅನುದಾನಿತ ಹಾಗೂ ಅನುದಾನರಹಿತ ಸೇರಿ ಏಳು ಕೋರ್ಸುಗಳು ಲಭ್ಯವಿದ್ದು, ಎಲ್ಲಾ ಕೋರ್ಸುಗಳಿಗೆ ಸರ್ಕಾರದ ಮಾನ್ಯತೆ ಇರುತ್ತವೆ ಎಂದಿದ್ದಾರೆ..

ಎಲ್ಲಾ ಕೋರ್ಸುಗಳ ಅವಧಿ ಮೂರು ವರ್ಷಗಳಾಗಿದ್ದು, ಆಂಗ್ಲ ಮಾಧ್ಯಮದಲ್ಲಿ ಭೋದನೆ ನಡೆಯುತ್ತದೆ, ಪ್ರವೇಶಾತಿ ಪ್ರಕ್ರಿಯೆಯು ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದ್ದು, ಕರ್ನಾಟಕ ಸರ್ಕಾರದ ನಿಯಮಾನುಸಾರ ಜರುಗುತ್ತದೆ..
ಕೋರ್ಸುಗಳಿಗೆ ತಕ್ಕಂತೆ ವಿಕಲತೆಯ ಪ್ರಮಾಣ ನಿಗದಿಯಾಗುತ್ತದೆ, ಸೂಕ್ತವಾದ, ವಿಶೇಷ ಕಟ್ಟದಾದ ವಿನ್ಯಾಸ, ಸುಸಜ್ಜಿತ ತರಗತಿ ಕೊಠಡಿಗಳು, ಪ್ರಯೋಗಾಲಯ ಹಾಗೂ ಆಧುನಿಕ ಉಪಕರಣಗಳು, ಅತ್ಯಾಧುನಿಕ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವನ್ನು ಹೊಂದಿದೆ..
ಆರೋಗ್ಯ ಕೇಂದ್ರ, ಬ್ಯಾಂಕ, ಎಟಿಎಂ, ಉಪಹಾರ ಗೃಹ, ಒಳ ಮತ್ತು ಹೊರ ಕ್ರೀಡಾಂಗಣ, ವಿಧ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ಗೃಹ, ಉದ್ಯೋಗಾವಕಾಶಗಳ ಮಾಹಿತಿ, ಮುಖ್ಯವಾಗಿ 50 ಸಾವಿರ ವರೆಗಿಂದ ವಿಧ್ಯಾರ್ಥಿ ವೇತನದ ಸೌಲಭ್ಯಗಳು ಇವೆ ಎಂಬ ಮಾಹಿತಿ ನೀಡಿದ್ದಾರೆ..
ಸಂಸ್ಥೆಯ ವಿಶೇಷತೆ ಹಾಗೂ ವಿಶೇಷಚೇತನರಿಗೆ ನೀಡುತ್ತಿರುವ ಸೇವೆಯನ್ನು ಗುರುತಿಸಿ ಈ ಸಂಸ್ಥೆಗೆ 2012 ರಲ್ಲಿ “ರಾಷ್ಟ್ರ ಪ್ರಶಸ್ತಿ” ಹಾಗೂ 2016 ರಲ್ಲಿ ಕರ್ನಾಟಕ ಸರ್ಕಾರದಿಂದ “ರಾಜ್ಯ ಮಟ್ಟದ ಅತ್ಯುತ್ತಮ ಸಂಸ್ಥೆ” ಎಂದು ಪ್ರಶಸ್ತಿ ಲಭಿಸಿದೆ..
ಪ್ರಸ್ತುತ 2024-25ರ ಸಾಲಿನ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿಗಳನ್ನು ವೆಬ್ ಸೈಟ್ www.jsspda.org ಮೂಲಕ ಅರ್ಜಿಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಅಥವಾ ಪಾಲಿಟೆಕ್ನಿಕ್ ಗೆ ಹೋಗಿ ಅರ್ಜಿ ಪಡೆಯಬಹುದು, ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ 15/06/2024 ರೊಳಗೆ ಕಚೇರಿಗೆ ತಲುಪಿಸಬೇಕು ಎಂಬ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗೆ, ವೆಬ್ ಸೈಟ್: www.jsspda.org ಅಥವಾ, 0821-2548315/ 316,, ಮೊಬೈಲ್ ಸಂಖ್ಯೆ, 9844644937 ಸಂಪರ್ಕಿಸುವ ಮಾಹಿತಿ ನೀಡಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..