ಮೇ 31ರಂದು, ಸರ್ಕಾರಿ ನೌಕರರ ನಿವೃತ್ತಿಯ ನಾಗಾಲೋಟ..
ಬಹುತೇಕ ಇಲಾಖೆಯಲ್ಲಿ ಭಾವನಾತ್ಮಕ ಬೀಳ್ಕೊಡುಗೆ..
ಪ್ರಾಥಮಿಕ ಶಾಲೆಯಲ್ಲಿ ನಿಶ್ಚಯವಾದ ನಿವೃತ್ತಿ..
ಬೆಳಗಾವಿ : ಇಂದು ಶುಕ್ರವಾರ ಮೇ 31, 2024ರಂದು ನಗರದಲ್ಲಿ ಕೆಲಸದ ನಿಮಿತ್ತ ವಿವಿಧ ಕಚೇರಿಗೆ ಬೇಟಿ ನೀಡಿದಾಗ ಅಲ್ಲಿ ಕೆಲ ದೃಶ್ಯಗಳು ಸರ್ವೇ ಸಾಮಾನ್ಯವಾಗಿ ಗೋಚರಿಸಿದವು..
ಕೃಷಿ, ಮಹಾನಗರ ಪಾಲಿಕೆ, ಶಿಕ್ಷಣ, ಹೀಗೆ ಬಹುತೇಕ ಇಲಾಖೆಗಳ ಕಚೇರಿಯಲ್ಲಿ ಇಂದು ಅಂದರೆ, ಮೇ 31ನೇ ತಾರಿಕಿನಂದು ನಿವೃತ್ತಿಯ ನಾಗಾಲೋಟದ ನೋಟವೇ ಸಾಮಾನ್ಯವಾಗಿತ್ತು, ಈ ವಿಶೇಷ ದಿನದ ನಿವೃತ್ತಿಯ ನಿಗೂಢತೆಯನ್ನು ತಿಳಿದುಕೊಳ್ಳಲು ಹೋದಾಗ, ಒಬ್ಬ ಸರ್ಕಾರಿ ಉದ್ಯೋಗಿಯಿಂದ ಆಕರ್ಷಣೀಯ ವಿಷಯವೇ ಗೊತ್ತಾಯಿತು.
ಮೇ, 31 ರಂದೆಯೇ ಯಾಕೆ ಬಹುತೇಕ ಸರ್ಕಾರಿ ನೌಕರರು ನಿವೃತ್ತಿ ಆಗುವವರೆಂದರೆ, ಹಿಂದಿನ ದಿನಗಳಲ್ಲಿ ಹುಟ್ಟಿದ ದಿನ, ವರ್ಷ ಸರಿಯಾಗಿ ಯಾರು ಸರಿಯಾಗಿ ಬರೆದು ಇರುತ್ತಿರಲಿಲ್ಲ, ಶಾಲೆಯಲ್ಲಿ ಹೆಸರು ಹಚ್ಚುವಾಗ, ಶಾಲೆ ಪ್ರಾರಂಭವಾದ ದಿನವನ್ನೇ ಅವರ ಜನ್ಮ ದಿನ ಎಂದು ಆಗಿನ ಶಿಕ್ಷಕರು ದಾಖಲು ಮಾಡುತ್ತಿದ್ದರು, ಜೂನ್ ಒಂದರಂದು ಶಾಲೆ ಪ್ರಾರಂಭದ ದಿನ ಆಗಿದ್ದರಿಂದ ಆಗಿನ ಬಹುತೇಕ ವಿಧ್ಯಾರ್ಥಿಗಳ ಜನ್ಮ ದಿನಾಂಕ ಜೂನ್ 1 ಆಗಿರುತ್ತಿತ್ತು..

ಅದೇ ಲೆಕ್ಕದಲ್ಲಿ ಬಹುತೇಕರ ಜನ್ಮ ದಿನಾಂಕ ಜೂನ್ 1 ಆಗಿದ್ದು, ಮೇ 31 ಕ್ಕೆ ಅವರ ಒಂದೊಂದು ವರ್ಷ ಪೂರ್ಣ ಆಗುವುದರಿಂದ, ಆ ವಿಶೇಷ ದಿನದಂದು ಸರ್ಕಾರಿ ನೌಕರರು ಬಹುಸಂಖ್ಯೆಯಲ್ಲಿ ನಿವೃತ್ತ ಆಗುವರು ಎಂಬ ಸ್ವಾರಸ್ಯಕರ ಮಾಹಿತಿ ದೊರಕಿದ್ದು ಒಂದು ಕಡೆಯಾದರೆ,
ಮತ್ತೊಂದೆಡೆ, ಒಬ್ಬ ಸಿ ಅಥವಾ ಡಿ ದರ್ಜೆಯ ಸಿಬ್ಬಂದಿ ತಮ್ಮ ಸೇವೆಯಿಂದ ಇಂದು ನಿವೃತ್ತಿ ಆಗುತ್ತಿದ್ದಾರೆ ಎಂದರೆ, ಅಲ್ಲಿ ಅವರ ಜೊತೆ ಇಡೀ ಕಚೇರಿಯ ಸಿಬ್ಬಂದಿಗಳು ಕಳೆದ ಸಿಹಿ, ಕಹಿ ನೆನಪುಗಳೆಲ್ಲ ಅಂದು ಮರುಕಳಿಸುತ್ತವೆ, ಅವರ ಸೇವೆಯ ಕೊನೆಯ ದಿನದಂದು ಅಧಿಕಾರಿಗಳಾಧಿಯಾಗಿ ಕಚೇರಿಯ ಎಲ್ಲಾ ಸಿಬ್ಬಂದಿಗಳು ಸೇರಿ, ಅವರಿಗೆ ಪೇಟ ತೊಡಿಸಿ, ಶಾಲು ಹಾಕಿ, ಹೂಗುಚ್ಚ, ಫಲಪುಷ್ಪ ನೀಡಿ, ನೆನಪಿನ ಕಾಣಿಕೆ ನಿದುವಷ್ಟರಲ್ಲಿ ಕೆಲ ಸಿಬ್ಬಂದಿಗಳ ಕಣ್ಣಂಚಲಿ ನೀರು ತುಂಬಿರುತ್ತವೆ, ವಿಶೇಷವಾಗಿ ಮಹಿಳಾ ಸಿಬ್ಬಂದಿಗಳ ಕಣ್ಣಲ್ಲಿ..

ಅಷ್ಟು ಸಾಲದೆ, ಎಲ್ಲರೂ ಕೂಡಿಕೊಂಡು ಅವರನ್ನು ಕಚೇರಿಯಿಂದ ಹೊರಗಡೆಗೆ ಕರೆತಂದು, ಭಾವನಾತ್ಮಕ, ಭಾರವಾದ ಮನಸ್ಸಿನಿಂದ ಬೀಳ್ಕೊಡುವ ವ್ಯವಸ್ಥೆ ಮಾಡುವರು, ಅದರಲ್ಲಿ ಒಂದಿಬ್ಬರು, ಅಂಕಲ್ ದಿನಾಲೂ ಸೈಕಲ್ ಅಲ್ಲೇ ಮನೆಗೆ ಹೋಗುತ್ತಾರೆ, ಇಂದು ಸಾಹೇಬರ ಕಾರಿನಲ್ಲಿ ಮನೆಗೆ ಹೋಗಲಿ ಎಂದು, ದಿನಾ ಸಾಹೇಬರು ಕುಳಿತುಕೊಳ್ಳುವ ಮುಂದಿನ ಸೀಟಿನಲ್ಲಿಯೇ, ನಿವೃತ್ತಿ ಹೊಂದಿದ ಅಂಕಲ್ ಅವರನ್ನು ಕಾರ್ ಚಾಲಕ ಕೂರಿಸಿಕೊಂಡು ಹೋಗುತ್ತಿದ್ದರೆ, ಎಲ್ಲರೂ ಕಾರು ಬಾಗಿಲ ಮುಂದೆ ನಿಂತುಕೊಂಡು ನೋಡುತ್ತಾ, ಕಣ್ಣೀರಿಡುತ್ತಾ, ಮೊಬೈಲ್ ಅಲ್ಲಿ ಫೋಟೋ, ಸೆಲ್ಪಿ ತಗೆಯುವ ಸನ್ನಿವೇಶ ನಿಜಕ್ಕೂ ಮನ ಕಲಕುವಂತೆ ಮುಕವಿಸ್ಮಿತರನ್ನಾಗಿಸುತ್ತವೆ..
ವರದಿ ಪ್ರಕಾಶ ಬಸಪ್ಪ ಕುರಗುಂದ…