ಸರಳತೆಯ ಸಾಹುಕಾರರಿಗೆ ಶುಭಾಶಯ ತಿಳಿಸಿದ ಅಭಿಮಾನಿಗಳು..

ಸರಳತೆಯ ಸಾಹುಕಾರರಿಗೆ ಶುಭಾಶಯ ತಿಳಿಸಿದ ಅಭಿಮಾನಿಗಳು..

ಗೋಕಾಕ : ಶನಿವಾರ ದಿನಾಂಕ 01/06/2024ರಂದು ನಗರದ ಹಿಲ್ ಗಾರ್ಡನನಲ್ಲಿರುವ ಸತೀಶ ಜಾರಕಿಹೊಳಿ ಅವರ ಮನೆಗೆ ಬೇಟಿ ನೀಡಿದ ಸಾವಿರಾರು ಅಭಿಮಾನಿಗಳು ಸಚಿವರ ಜನ್ಮದಿನಕ್ಕೆ ಶುಭಾಶಯ ತಿಳಿಸಿ, ತಮ್ಮ ಅಭಿಮಾನವನ್ನು ಮೆರೆದಿದ್ದಾರೆ..

ರಾಜ್ಯ ಸರ್ಕಾರದ ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಜನ್ಮದಿನಕ್ಕೆ ಜಿಲ್ಲೆಯಾದ್ಯಂತ ಅಭಿಮಾನಿಗಳು ಆಗಮಿಸಿದ್ದು, ಸಚಿವರ ಸಮಾಜಮುಖಿ ಕಾರ್ಯಗಳಿಗೆ, ಜನಪರ ಕಾಳಜಿಗೆ ಸಾಕ್ಷಿಯಾದಂತಿತ್ತು..

ಭಾಷೆ, ಧರ್ಮ, ಜಾತಿ, ಕುಲ, ಪ್ರದೇಶ, ಪಕ್ಷ ಇವೆಲ್ಲವನ್ನೂ ಮೀರಿ, ಸಚಿವರ ಮನುಕೂಲಕ್ಕಾಗಿ ಮಿಡಿಯುವ ಮಾನವೀಯ ವಿಚಾರಗಳಿಗೆ ಮನಸೋತು ಇಂದು ಸಚಿವರಿಗೆ ಶುಭಾಶಯ ಕೋರಲು ಜನಸಾಗರ ನೆರೆದಿದ್ದು ವಿಶೇಷ..

ಅದರಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿರುವ ಬಡಾಲ ಅಂಕಲಗಿಯ ಅಭಿಮಾನಿಗಳಾದ ಮಲ್ಲೇಶ ಕೊಲಾರಕೊಪ್ಪ, ಬಸವರಾಜ ಕಡೆಮನಿ, ಪ್ರತೀಕ ಕಡೆಮನಿ ಮತ್ತಿತರರು ಸಚಿವರನ್ನು ಭೇಟಿ ಮಾಡಿ ಜನ್ಮ ದಿನದ ಶುಭಾಶಯ ತಿಳಿಸಿದ್ದಾರೆ..

ವರದಿ ಪ್ರಕಾಶ ಬಸಪ್ಪ ಕುರಗುಂದ….